ಬ್ಯೂಟಿಫುಲ್ ಮನಸುಗಳು ಹಾಗೂ ಬೆಲ್ ಬಾಟಮ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಜಯತೀರ್ಥ ಅವರು ಬನಾರಸ್ ಸಿನಿಮಾದ ಬಿಡುಗಡೆ ಮಧ್ಯೆ ಮಗದೊಂದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಜಾರ್ ಚಿತ್ರದ ಯುವನಟ ಧನ್ವೀರ್ ಜೊತೆ ಹೊಸ ಸಿನಿಮಾಗೆ ಕೈಹಾಕಿದ್ದು, ಅಕ್ಕೆ ಚಿತ್ರಕ್ಕೆ ಕೈವ ಅಂತಾ ಕ್ಯಾಚಿ ಟೈಟಲ್ ಇಡಲಾಡಗಿದೆ. ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಸದ್ಯ ಅವರ ಫಸ್ಟ್ ಲುಕ್ಗೆ ಜಾಲತಾಣದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ನಿರ್ದೇಶಕ ಜಯತೀರ್ಥ ಹೇಳುವ ಹಾಗೆ ಇದೊಂದು ನೈಜ ಘಟನೆಯ ಕಥೆಯಾಗಿದೆ. '1983ರ ಸೆಪ್ಟೆಂಬರ್ 13ರ ಮಧ್ಯಾಹ್ನ 3.20ಕ್ಕೆ ಒಂದು ದುರಂತವೊಂದು ನಡೆದಿತ್ತು. ಈ ಘಟನೆಯಿಂದ ಆಗ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಆದರೆ, ಕೈವ ಬಂದೇ ಬರುತ್ತಾನೆ ಎಂದು ಅವಳು ಕಾದಿದ್ದಳು. ಸತ್ಯಘಟನೆ.. ಪ್ರೇಮಕಥೆ.. ಮಾಸಿಗೆ ಮಾಸ್... ಕ್ಲಾಸಿಗೆ ಕ್ಲಾಸ್..' ಎಂದು ಅವರು ಬರೆದುಕೊಂಡಿದ್ದಾರೆ.

ಧನ್ವೀರ್ ತನ್ನ ಕೈಯಲ್ಲಿ ಕತ್ತಿ ಹಿಡಿದು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಇದಾಗಿದೆ. ಕೈವ 1983 ಅನ್ನೋ ಟ್ಯಾಗ್ ಹಾಕಿಕೊಂಡಿರುವ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಹಳ ಇಂಟ್ರೆಸ್ಟಿಂಗ್ ಆಗಿದೆ. ಚಿತ್ರಕ್ಕೆ ಶ್ವೇತ್ ಪ್ರಿಯಾ ನಾಯ್ಡು ಅವರ ಕ್ಯಾಮರಾ ವರ್ಕ್ ಇದ್ದು ಅಜನೀಷ್ ಲೋಕನಾಥ್ ಅವರ ಸಂಗೀತವಿದೆ. ಅಭುವನಸ್ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಕೈವ ಸಿನಿಮಾ ಅಸಲಿ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರೀಕರಣ ಸಹ ಆರಂಭಿಸಲಿದೆಯಂತೆ.
ಇದನ್ನೂ ಓದಿ: ಆಕ್ಸ್ಫರ್ಡ್ ಪದವೀಧರೆಯ ಹೃದಯಸ್ಪರ್ಶಿ ಪೋಸ್ಟ್ ವೈರಲ್: ತಾತ-ಮೊಮ್ಮಗಳ ಕಥೆ ಇದು