ETV Bharat / entertainment

ಬಿಡುಗಡೆಗೂ ಮುನ್ನ ಹಲವು ದಾಖಲೆ ಬರೆದ 'ಕಾಟೇರ'

ನಟ​ ದರ್ಶನ್​ ಅಭಿನಯದ 'ಕಾಟೇರ' ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Etv Bharat
Etv Bharat
author img

By ETV Bharat Karnataka Team

Published : Dec 28, 2023, 7:18 PM IST

'ಕಾಟೇರ' ಸಿನಿಮಾ

ಕರ್ನಾಟಕದಾದ್ಯಂತ ಕ್ರೇಜ್ ಹುಟ್ಟಿಸಿರುವ ಚಿತ್ರ 'ಕಾಟೇರ'. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾ ಕೆರಿಯರ್​​ನಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಹೆಚ್ಚಿನ ಕಾತರ ಹುಟ್ಟುಹಾಕಿದೆ.

ಡಿಸೆಂಬರ್‌ 29ರಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಮೊದಲ ಶೋ ಆರಂಭವಾಗಲಿದೆ. ಈಗಾಗಲೇ ಅಡ್ವಾನ್ಸ್‌ ಬುಕಿಂಗ್​ನಲ್ಲಿ ಚಿತ್ರ ಬಿಡುಗಡೆಗೂ ಮುಂಚೆ ದಾಖಲೆ ಬರೆದಿದೆ.

ಟ್ರೇಲರ್ ಹಾಗೂ ಮೂರು ಹಾಡುಗಳಿಂದ ಕಾಟೇರ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ದರ್ಶನ್ ಹಳ್ಳಿ ಹೈದನಾಗಿ ಕುಲುಮೆಯಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಮಾಜ ವ್ಯವಸ್ಥೆಯ ವಿರುದ್ಧ ಹೋರಾಡುವ ನಾಯಕನಾಗಿ ಅಭಿನಯಿಸಿದ್ದಾರೆ.

challenging-star-darshans-movie-kaatera-sets-new-record-before-releasing
ಬಿಡುಗಡೆಗೂ ಮುನ್ನ 2.25 ಕೋಟಿ ಗಳಿಕೆ

ಕಾಟೇರ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಬಹುತೇಕ ಎಲ್ಲೆಡೆ ಸೋಲ್ಡೌಟ್ ಆಗಿದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ನಾಲ್ಕು ಶೋಗಳು ಸೋಲ್ಡೌಟ್‌ ಆಗಿವೆ. ಪ್ರಸನ್ನ ಚಿತ್ರಮಂದಿರದಲ್ಲಿ ಬುಕ್ಕಿಂಗ್ ಆರಂಭವಾದ ಅರ್ಧಗಂಟೆಯಲ್ಲಿ ಮೊದಲ ದಿನದ 6,850 ಟಿಕೆಟ್ ಸೋಲ್ಡೌಟ್. ಗಾಂಧಿನಗರದ ಕೆಜಿ ರಸ್ತೆಯಲ್ಲಿರುವ ಅನುಪಮಾ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆ ಹಾಗೂ 10.30ರ ಶೋ ಸೋಲ್ಡೌಟ್ ಆದರೆ, ಸುಂಕದಕಟ್ಟೆ ಮೋಹನ್ ಚಿತ್ರಮಂದಿರದ ಬೆಳಗ್ಗೆ 5.30ರ ಶೋ ಹಾಗೂ ದೊಡ್ಡಬಳ್ಳಾಪುರದ ವೈಭವ್ ಚಿತ್ರಮಂದಿರದ ಬೆಳಿಗ್ಗೆ 5 ಗಂಟೆ ಶೋ ಫುಲ್‌ ಬುಕ್ ಆಗಿದೆ. ಕೆಜಿ ರಸ್ತೆಯ ಅನುಪಮಾ ಚಿತ್ರಮಂದಿರದ ಮುಂದೆ ಈಗಾಗಲೇ 90 ಅಡಿ ಕಟೌಟ್ ಹಾಕಲಾಗಿದೆ.

ಜಾಲಹಳ್ಳಿ ಕ್ರಾಸ್‌ನಲ್ಲಿರುವ ರಾಕ್‌ಲೈನ್ ಮಾಲ್‌, ತಾವರೆಕೆರೆ ಲಕ್ಷ್ಮೀ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ. ರಾಕ್‌ಲೈನ್‌ ಮಾಲ್‌ನಲ್ಲಿ ಮಿಡ್‌ನೈಟ್ ಶೋ ಟಿಕೆಟ್ ದರ 1000 ರೂ.ಗೆ ಏರಿಸಲಾಗಿದೆ. ಲಕ್ಷ್ಮೀ ಥಿಯೇಟರ್‌ನಲ್ಲಿ ಒಂದು ಟಿಕೆಟ್ ಬೆಲೆಯನ್ನು 500 ರೂಪಾಯಿಗೆ ಏರಿಸಲಾಗಿದೆ.

ಬಿಡುಗಡೆಗೂ ಮುನ್ನ 75,000 ಸಾವಿರ ಟಿಕೆಟ್​ ಮಾರಾಟ

ಈಗಾಗಲೇ ಚಿತ್ರತಂಡ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, 75 ಸಾವಿರ ಟಿಕೆಟ್‌ಗಳು ಮಾರಾಟವಾಗುವ ಮೂಲಕ, 2.25 ಕೋಟಿ ಟಿಕೆಟ್ ಬುಕ್ಕಿಂಗ್‌ನಿಂದ ಕಲೆಕ್ಷನ್ ಆಗಿದೆ ಎಂದು ತಿಳಿಸಿದೆ. ಚಿತ್ರತಂಡದ ಆಪ್ತರು ಹೇಳುವ ಪ್ರಕಾರ ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಹಾಗು ಹಿಂದಿ ಡಬ್ಬಿಂಗ್ ರೈಟ್ಸ್ ಸೇರಿದಂತೆ ಜೀ ಸ್ಟುಡಿಯೋ 35 ಕೋಟಿ ರೂಪಾಯಿ ಕೊಟ್ಟು ಈ ಸಿನಿಮಾವನ್ನು ಖರೀದಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಟೇರ ಸಿನಿಮಾ ಹೊಸ ದಾಖಲೆ ಬರೆದಿದೆ.

ಕಾಟೇರ ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನಿರ್ಮಾಪಕ ರಾಮು ಹಾಗು ಮಾಲಾಶ್ರೀ ಮಗಳು ಆರಾಧನ ರಾಮ್, ಬೆಂಗಳೂರಿನ ಜೆಪಿ ನಗರದ ಸಿದ್ಧೇಶ್ವರ ಚಿತ್ರಮಂದಿರದಲ್ಲಿ ಇಂದು ರಾತ್ರಿ 12 ಗಂಟೆ ಶೋವನ್ನು ಅಭಿಮಾನಿಗಳ ಜೊತೆ ನೋಡಲು ಸಿದ್ಧರಾಗಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್​​

ಈ ಹಿಂದೆ ದರ್ಶನ್ ಜೊತೆ ರಾಬರ್ಟ್ ಸಿನಿಮಾ ಮಾಡಿದ ನಿರ್ದೇಶಕ ತರುಣ್​ ಸುಧೀರ್​ ಮತ್ತೆ ಚಾಲೆಂಜಿಂಗ್ ಸ್ಟಾರ್ ಜೊತೆ ಕಾಟೇರ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಹಿರಿಯ ನಟರಾದ ವಿನೋದ್ ಆಳ್ವಾ, ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು, ಹಿರಿಯ ನಟಿ ಶ್ರುತಿ ಸೇರಿದಂತೆ ದೊಡ್ಡ ತಾರ ಬಗಳ ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಕ್ಯಾಮರಾಮನ್ ಸುಧಾಕರ್ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆ, ಜಡೇಶ್ ಕಥೆ ಬರೆದಿದ್ದಾರೆ. 1970ರಲ್ಲಿ ನಡೆಯುವ ಕಥೆಯಾಗಿದ್ದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಮೋಡಿ ಮಾಡಲಿದೆ ನಿರೂಪ್ ಭಂಡಾರಿ-ಬೃಂದಾ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.