ETV Bharat / entertainment

ಕ್ಯಾಂಡಿಡ್ ನಗು: RRR ಸ್ಟಾರ್ ನಟನ ಫೋಟೋಸ್ ವೈರಲ್ - ಜೂನಿಯರ್ ಎನ್​ಟಿಆರ್ ಹೊಸ ಫೋಟೋಶೂಟ್

ಜೂನಿಯರ್ ಎನ್​ಟಿಆರ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆರ್​ಆರ್​ಆರ್​ ಸಕ್ಸಸ್ ನಂತರ ಅವರ ಬಗ್ಗೆ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಅವರ ಕೆಲವು ಚಂದದ ಫೋಟೋಸ್ ವೈರಲ್ ಆಗಿವೆ.

Jr NTR
ಜೂನಿಯರ್ ಎನ್​ಟಿಆರ್
author img

By

Published : May 27, 2023, 2:39 PM IST

ಹೈದರಾಬಾದ್​: ತೆಲುಗು ಸೂಪರ್​ಸ್ಟಾರ್ ಜೂನಿಯರ್ ಎನ್​ಟಿಆರ್ ಫೋಟೋಗ್ರಫರ್ ಅವಿನಾಶ್ ಗೌರಿಕೇರ ಜತೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೈದರಾಬಾದ್​​ನ ಅನ್ನಪೂರ್ಣ ಸ್ಟುಡಿಯೋಸ್​ನಲ್ಲಿ ಪೋಸ್ಟ್ ಪ್ಯಾಕ್ ಅಪ್ ಶೂಟ್ ಮಾಡಿದ್ದಾರೆ. ಫೋಟೋಗ್ರಾಫರ್ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಸ್ ಶೇರ್ ಮಾಡಿ "ಸೂಪರ್ ಪಾಪ್ಯುಲರ್ ಜೂನಿಯರ್ ಎನ್​ಟಿಆರ್ ಜೊತೆ ಫೋಟೋಶೂಟ್. ಅವರ ಕ್ಯಾಂಡಿಡ್ ನಗು. ಕೆಲವೇ ನಿಮಿಷಗಳಲ್ಲಿ ಇವು ಸಿಕ್ಕವು" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಜೂ.ಎನ್​​ಟಿಆರ್ ಜೊತೆ ಕೆಲಸ ಮಾಡಲಿಚ್ಛಿಸಿದ ಹಾಲಿವುಡ್​​ ನಿರ್ದೇಶಕ

ಜೂನಿಯರ್ ಎನ್​ಟಿಆರ್ ಅವರ ಮಿಲಿಯನ್ ಡಾಲರ್ ಸ್ಮೈಲ್ ಈ ಪೋಸ್ಟ್​ನಲ್ಲಿ ಕಂಡು ಬಂದಿದೆ. ಅವರ ನಗು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಸೂಪರ್ ಎಂದು ಹೊಗಳಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ತೆಲುಗು ಸಿನಿಮಾ ಇಂಡಸ್ಟ್ರಿಯ ಸೂಪರ್ ​​ಸ್ಟಾರ್. ತಮ್ಮ ಸಿನಿಮಾ ಕೆರಿಯರ್​ನಲ್ಲಿ ಪೀಕ್ ಸ್ಟೇಜ್​ನಲ್ಲಿ ಇದ್ದಾರೆ ಈ ನಟ. ಆರ್​ಆರ್​ಆರ್ ಸಿನಿಮಾ ಮಾಡುವ ಮೂಲಕ ಇವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ರಾಜಮೌಳಿ ಅವರ ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಪಾತ್ರ ಸಖತ್ ಹೈಲೈಟ್ ಆಗಿದೆ. ಇದು ಭಾರತೀಯ ಚಿತ್ರರಂಗದ ದೊಡ್ಡ ಬ್ಲಾಕ್​ಬಸ್ಟರ್ ಆಗಿಯೂ ಹೊರ ಹೊಮ್ಮಿದೆ.

ಇದನ್ನೂ ಓದಿ: 'ಎನ್​ಟಿಆರ್​ 30' ಅಡ್ಡಾಗೆ ಸೈಫ್​ ಅಲಿ ಖಾನ್ ಎಂಟ್ರಿ: ಹೈ ವೋಲ್ಟೇಜ್​ ಶೂಟಿಂಗ್​ ಶುರು​!

ಜೂನಿಯರ್ ಎನ್​ಟಿಆರ್ ಅವರು ಕೊರಟಾಲ ಶಿವ ಜತೆ ತಮ್ಮ 30ನೇ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾದ ಹೆಸರು 'ದೇವರ' ಎಂದಾಗಿದೆ. ಏಪ್ರಿಲ್​ನಲ್ಲಿ ಈ ಸಿನಿಮಾ ಶುರುವಾಗಿದೆ. ಹೈದರಾಬಾದ್​ನಲ್ಲಿ ಗ್ರ್ಯಾಂಡ್ ಪೂಜೆ ನಡೆದಿತ್ತು. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ 2024ರಲ್ಲಿ ರಿಲೀಸ್ ಆಗಲಿದೆ. ಸಿನಿಮಾ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಹೊಸ ಸ್ಟೈಲ್​ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿನಿಮಾ ಕುರಿತು ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ಸೂಪರ್​ ಸ್ಟಾರ್​ಗಳೊಂದಿಗೆ ನಟನೆ: ಬಾಲಿವುಡ್​ಗೆ ಆರ್​ಆರ್​ಆರ್​ ನಟ ಜೂ. ಎನ್​ಟಿಆರ್​ ಎಂಟ್ರಿ!

ಜ್ಯೂನಿಯರ್ ಎನ್‌ಟಿಆರ್ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಆಕ್ಷನ್ ಥ್ರಿಲ್ಲರ್​ ಸಿನಿಮಾದಲ್ಲೂ ನಟಿಸಲು ಸಜ್ಜಾಗಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ NTR 31 ಎಂದು ಹೆಸರಿಸಲಾಗಿದೆ. ಚಿತ್ರದ ಶೂಟಿಂಗ್​ 2024ರ ಬೇಸಿಗೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: 'ನಾನು ಸಿನಿಮಾ ಮಾಡುವುದಿಲ್ಲ': ಫ್ಯಾನ್ಸ್​ಗೆ ಶಾಕ್​ ನೀಡಿದ ಜೂ.ಎನ್​ಟಿಆರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.