ETV Bharat / entertainment

ಬೇಡಿಯಾ, ಸ್ತ್ರಿ ಸೀಕ್ವೆಲ್​ ನಿರ್ಮಾಣಕ್ಕೆ ಮುಂದಾದ ಜಿಯೋ ಸ್ಟುಡಿಯೋಸ್​ - ಮುಂಬೈನಲ್ಲಿ ನಡೆದ ಸಮಾರಂಭ

ಹಿಂದಿ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾ ಮತ್ತು ವೆಬ್​ ಸರಣಿ ನಿರ್ಮಾಣಕ್ಕೆ ಜಿಯೋ ಸ್ಟುಡಿಯೋಸ್​ ಮುಂದಾಗಿದೆ.

jio-studios-to-produce-bedia-stree-sequel

author img

By

Published : Apr 13, 2023, 3:05 PM IST

ಮುಂಬೈ: ಬಾಲಿವುಡ್​ನಲ್ಲಿ ಈಗಾಗಲೇ ಜನಪ್ರಿಯಗೊಂಡಿರುವ ಹಾರರ್​ ಕಾಮಿಡಿ ಸಿನಿಮಾ 'ಬೇಡಿಯಾ' ಮತ್ತು 'ಸ್ತ್ರಿ' ಮುಂದಿನ ಸೀಕ್ವೆಲ್​ ನಿರ್ಮಾಣಕ್ಕೆ ಜಿಯೋ ಸ್ಟುಡಿಯೋಸ್​ ಮುಂದಾಗಿದೆ. ಈ ಕುರಿತು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಘೋಷಣೆ ಹೊರಡಿಸಿರುವ ಜಿಯೋ ಸ್ಟುಡಿಯೋಸ್​ ವರುಣ್ ಧವನ್ ಅಭಿನಯದ ಚಿತ್ರ 'ಬೇಡಿಯಾ' ಮತ್ತು ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ 'ಸ್ತ್ರೀ' ಚಿತ್ರದ ಮುಂದುವರಿದ ಭಾಗ ನಿರ್ಮಿಸಲಾಗುವುದು ಎಂದು ತಿಳಿಸಿದೆ.

  • Fasten your seat belts! Jio Studios, India’s biggest content studio, unveils its incredible content slate of 100 stories with the biggest stars and top makers from India as well as exciting new talent. https://t.co/ifnN8Cu2CW

    — Jio Studios (@jiostudios) April 12, 2023 " class="align-text-top noRightClick twitterSection" data=" ">

ಈ ಕುರಿತು ವೇದಿಕೆ ಮೇಲೆ ಪ್ರಕಟಿಸಿದ ನಟ ವರುಣ್​ ಧವನ್, 2025ಕ್ಕೆ 'ಬೇಡಿಯಾ' ಚಿತ್ರದ ಸಿಕ್ವೇನ್​ ಹೊರ ಬರಲಿದೆ ಎಂದು ತಿಳಿಸಿದ್ದಾರೆ. ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಅದ್ಭುತ ನಟನೆ 'ಸ್ತ್ರಿ' ಎಲ್ಲರನ್ನು ಮೋಡಿ ಮಾಡಿದ್ದು, ಗಲ್ಲಾಪೆಟ್ಟಿಗೆಯನ್ನು ಸದ್ದು ಮಾಡಿತ್ತು. ಭಾರತದಲ್ಲಿ 100 ಕೋಟಿ ರೂ.ಗೂ ಹೆಚ್ಚು ಬೆಜೆಟ್​ ಲಾಭ ಮಾಡಿದ್ದ ಈ ಚಿತ್ರದ ಸಿಕ್ವೇಲ್​ ಆಗಸ್ಟ್​ 31ರಂದು 2024ರಲ್ಲಿ ಬಿಡುಗಡೆಯಾಗಲಿದೆ. ಇದರಲ್ಲೂ ಕೂಡ ನಟ ರಾಜ್​ ಕುಮಾರ್​ ರಾಂ ಮತ್ತು ಶ್ರದ್ದಾ ಕಪೂರ್​ ಪ್ರಮುಖ ಪಾತ್ರ ನಿರ್ವಹಣೆ ಮಾಡಲಿದ್ದಾರೆ.

ಶಾರುಖ್​ ಖಾನ್​ ಅಭಿನಯದ ಡುಂಕಿ ಸಿನಿಮಾ ಸೇರಿದಂತೆ 100 ಸಿನಿಮಾ ಮತ್ತು ವೆಬ್​ ಸರಣಿಗಳ ಹೊರ ಬರುತ್ತಿರುವ ಕುರಿತು ಜಿಯೋ ಸ್ಟುಡಿಯೋ ಬುಧವಾರ ವಿವರಣೆ ನೀಡಿದೆ. ಜಿಯೋ ಸ್ಟುಡಿಯೋ ಮರಾಠಿ, ಹಿಂದಿ, ಬೆಂಗಾಲಿ, ಗುಜರಾತಿ, ದಕ್ಷಿಣ ಮತ್ತು ಭೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಸಿನಿಮಾಗಳು ಮತ್ತು ವೆಬ್​ ಸರಣಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ

ಈ ಕುರಿತು ಮಾತನಾಡಿರುವ ಆರ್​ಐಎಲ್​ ಮೀಡಿಯಾ ಮತ್ತು ಕಂಟೆಟ್​ ಬ್ಯುಸಿನೆಸ್​ ಅಧ್ಯಕ್ಷರಾದ ಜ್ಯೋತಿ ದೇಶಪಾಂಡೆ, ನಾವು ಭಾರತೀಯ ಮನರಂಜನೆಯ ಅತ್ಯಂತ ರೋಮಾಂಚಕಾರಿ ಮತ್ತು ಘಟನಾತ್ಮಕ ಹಂತದಲ್ಲಿದ್ದೇವೆ. ಡಿಜಿಟಲ್ ಕಾಲದಲ್ಲಿ ಸಿನಿಮಾಗಳ ಕಥೆ ನಿರೂಪಣೆ ಹೆಚ್ಚು ಪ್ರಮುಖ ಹಂತದಲ್ಲಿದೆ. ಐದು ವರ್ಷಗಳ ಹಿಂದಿನಿಂದ ಜಿಯೋ ಸ್ಟುಡಿಯೋಸ್ ಹಲವು ವಿಧದಲ್ಲಿ ಭದ್ರ ಬುನಾದಿ ಹಾಕಲು ಶ್ರಮಿಸಿದೆ.

ಜಿಯೋ ಸ್ಟುಡಿಯೋ ಅಡಿ ಶಹೀದ್​ ಕಪೂರ್​ ಅವರ ಬ್ಲಡಿ ಡ್ಯಾಡಿ, ಕಾರ್ತಿಕ್​ ಆರ್ಯನ್​ ಮತ್ತು ಶ್ರದ್ಧಾ ಕಪೂರ್​ ಅವರ ಬುಲ್​ ಚುಕ್​ ಮಾಫ್​, ಶಹೀದ್​ ಕಪೂರ್​ ಮತ್ತು ಕೃತಿ ಸನೋನ್​ ಅಭಿನಯದ ಹೆಸರಿಡದ ಚಿತ್ರ, ಅಮಿತಾ ಬಚ್ಚನ್​ ಅವರ ಸೆಕ್ಷನ್​ 84, ಆರ್​ ಮಾಧನ್​ ಅಭಿನಯದ ಹಿಸಾಬ್​ ಬರಾಬರ್​​, ವಿಕ್ಕಿ ಕೌಶಲ್​ ಮತ್ತು ಸಾರಾ ಆಲಿ ಖಾನ್​ ಅಭಿನಯದ ಜಾರ ಹಟ್ಕೆ ಜಾರ ಬಚ್ಕೆ, ವಿಜಯ ಸೇತುಪತಿ ಅಭಿನಯದ ಮುಂಬೈಕರ್​ ಸೇರಿದಂತೆ ಪ್ರಮುಖ ಚಿತ್ರಗಳು ಬರುತ್ತಿವೆ ಎಂದು ಜಿಯೋ ಸ್ಟುಡಿಯೋಸ್​ ಹೇಳಿದೆ.

ಇದನ್ನೂ ಓದಿ: ಶಾಹಿದ್​ ಕಪೂರ್ ಆ್ಯಕ್ಷನ್​- ಥ್ರಿಲ್ಲರ್​ ಚಿತ್ರ 'ಬ್ಲಡಿ ಡ್ಯಾಡಿ' ನೇರ ಓಟಿಟಿಯಲ್ಲಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.