ಅಮೆರಿಕದ ಗಾಯಕಿ, ನಟಿ ಮತ್ತು ನರ್ತಕಿ ಜೆನ್ನಿಫರ್ ಲೋಪೆಜ್ ಅವರು ತಮ್ಮ ಜ್ಯೋತಿಷ್ಯ ಚಿಹ್ನೆಯ ಆಧಾರದ ಮೇಲೆ ನರ್ತಕರನ್ನು ಆಡಿಷನ್‌ನಿಂದ ಕಡಿತಗೊಳಿಸಿದ್ದಾರೆ ಎಂದು ಹಲವು ವರ್ಷಗಳ ಕಾಲ ವೃತ್ತಿಪರ ನರ್ತಕಿಯಾಗಿ ಕೆಲಸ ಮಾಡಿರುವ ಗ್ಲೀ ಸೀರಿಸ್ ನಟಿ ಹೀದರ್ ಮೋರಿಸ್ ಆರೋಪಿಸಿದ್ದಾರೆ.
ಇತ್ತೀಚೆಗೆ ಜಸ್ಟ್ ಸ್ಟೇಯಿನ್ ವಿತ್ ಜಸ್ಟಿನ್ ಮಾರ್ಟಿಡಲೆ (Just Sayin' with Justin Martindale) ವೇದಿಕೆಯಲ್ಲಿ ಜಡ್ಜ್ ಆಗಿದ್ದ ಜೆನ್ನಿಫರ್ ಲೋಪೆಜ್ ಅವರು ನರ್ತಕರ ಕುರಿತು ಮಾತನಾಡುವ ವೇಳೆ, "ತುಂಬಾ ಧನ್ಯವಾದಗಳು, ನೀವು ತುಂಬಾ ಶ್ರಮಿಸಿದ್ದೀರಿ ಎಂದು ಹೇಳಿ ಕನ್ಯಾ ರಾಶಿ ಅವರಿದ್ದರೆ ನಿಮ್ಮ ಕೈ ಎತ್ತಬಹುದೇ?'' ಎಂದು ಕೇಳಿದ್ದರು. ಬಳಿಕ ತನ್ನ ಸಹಾಯಕನಿಗೆ ಏನೋ ಪಿಸುಗುಟ್ಟಿದರು. ಕನ್ಯಾರಾಶಿಯ ನರ್ತಕರಿಗೆ ಬಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಹೇಳಿ ಬಳಿಕ ಅವರನ್ನು ಮನೆಗೆ ಕಳುಹಿಸಿದರು ಎಂದು ಹೀದರ್ ಮೋರಿಸ್ ಹೇಳಿದ್ದಾರೆ.
ಹೀದರ್ ಮೋರಿಸ್ ಹೇಳುವಂತೆ, ಜೆನ್ನಿಫರ್ ಲೋಪೆಜ್ ನರ್ತಕರ ಗುಂಪನ್ನು ಆಡಿಷನ್‌ನಿಂದ ಹೊರಹಾಕಿದ್ದಾರೆ. ಏಕೆಂದರೆ ಅವರ ಜ್ಯೋತಿಷ್ಯ ಚಿಹ್ನೆಯು ಕನ್ಯಾರಾಶಿಯಾಗಿದೆ. ಆದರೆ ಇದಕ್ಕೆ ನಿಖರ ಕಾರಣ ಏನೆಂಬುದು ತಿಳಿಯುತ್ತಿಲ್ಲ. ಜೆನ್ನಿಫರ್ ಲೋಪೆಜ್ ಅವರ ಮಾಜಿ ಪತಿ ಮಾರ್ಕ್ ಅಂಥೋನಿ ಅವರದ್ದು ಕನ್ಯಾರಾಶಿಯಾಗಿದ್ದು ಈ ಕಾರಣಕ್ಕಾಗಿ ನರ್ತಕರನ್ನು ಆಡಿಷನ್‌ನಿಂದ ಹೊರಹಾಕಿದರೇ? ಎನ್ನುವ ಗುಸುಗುಸು ಇದೆ.
ಇದನ್ನೂ ಓದಿ: 2022ರ ಅತಿ ದೊಡ್ಡ ನಟ ನಾನೇ.. ಬಿಗ್ ಬಜೆಟ್ ಸಿನಿಮಾಗಳಿಗೆ ಅನುಪಮ್ ಖೇರ್ ಟಾಂಗ್