ETV Bharat / entertainment

'ಜವಾನ್​' ಸಕ್ಸಸ್​ ಮೀಟ್​ನಲ್ಲಿ ಚಿತ್ರತಂಡ, ನಯನತಾರಾ ಮಿಸ್ಸಿಂಗ್​​ - ಈಟಿವಿ ಭಾರತ ಕನ್ನಡ

Jawan success meet: 'ಜವಾನ್​' ಸಿನಿಮಾದ ಸಕ್ಸಸ್​ ಮೀಟ್ ಇಂದು ಮುಂಬೈನಲ್ಲಿ ನಡೆಯಿತು.

ಜವಾನ್​
Jawan
author img

By ETV Bharat Karnataka Team

Published : Sep 15, 2023, 8:45 PM IST

'ಜವಾನ್​' ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಶಾರುಖ್​ ಖಾನ್​, ಅಟ್ಲೀ, ಅನಿರುದ್ಧ್​ ರವಿಚಂದರ್​ ಚಿತ್ರಕ್ಕೆ ಅಗಾಧ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ಚಿತ್ರತಂಡ ಮುಂಬೈನ YRF ಸ್ಟುಡಿಯೋದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಲು ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಈ ವೇಳೆ ಬಾದ್​ ಷಾ ಡ್ಯಾಪರ್​ ಲುಕ್​ನಲ್ಲಿ ಕಾಣಿಸಿಕೊಂಡರು.

'ಜವಾನ್'​ ಕೇವಲ ದೊಡ್ಡ ಸಿನಿಮಾವಾಗಿರಲಿಲ್ಲ. ಇದುವರೆಗಿನ ಅನೇಕ ಹಿಂದಿ ಚಲನಚಿತ್ರಗಳು ನಿರ್ಮಿಸಿದ ಹಲವಾರು ದಾಖಲೆಗಳನ್ನು ಮುರಿದಿದೆ. ಶುಕ್ರವಾರ ನಡೆದ ಸಕ್ಸಸ್​ ಮೀಟ್​ನಲ್ಲಿ ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಸೇರಿದಂತೆ ಚಿತ್ರದ ತಾರಾ ಬಳಗವು ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಫ್ಯಾನ್ಸ್​ ಶಾರುಖ್​ಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದರು. 7 ದಿನಗಳಲ್ಲಿ ವಿಶ್ವದಾದ್ಯಂತ 600 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದಕ್ಕಾಗಿ ಅಭಿಮಾನಿಗಳು ಮತ್ತು ಚಿತ್ರತಂಡ ಮುಂಬೈನಲ್ಲಿ ಸಂಭ್ರಮಿಸಿದರು.

ಮೆಗಾ ಈವೆಂಟ್​ನಲ್ಲಿ ಲೇಡಿ ಸೂಪರ್​ಸ್ಟಾರ್​ ನಯನತಾರಾ ಅನುಪಸ್ಥಿತಿಯು ಎದ್ದು ಕಾಣುತ್ತಿತ್ತು. ಇಂದು ಅವರ ತಾಯಿಯ ಹುಟ್ಟುಹಬ್ಬವಿದ್ದು, ಸೆಲೆಬ್ರೇಶನ್​ ಮೂಡ್​ನಲ್ಲಿರುವ ನಟಿ ಸಕ್ಸಸ್​ ಮೀಟ್​ಗೆ ಗೈರಾಗಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿರಲಿಲ್ಲ. ಇವರನ್ನು ಬಿಟ್ಟರೆ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ. ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ರಿಧಿ ಡೋಗ್ರಾ, ಲೆಹರ್​ ಖಾನ್​, ಗಿರಿಜಾ ಓಕ್​, ಸಂಜೀತಾ ಭಟ್ಟಾಚಾರ್ಯ ಸೇರಿದಂತೆ ಇಡೀ ತಂಡ ಈವೆಂಟ್​ನಲ್ಲಿ ಗಮನ ಸೆಳೆಯಿತು.

ಸ್ಟೈಲಿಶ್​ ಅವತಾರದಲ್ಲಿ ಶಾರುಖ್​- ದೀಪಿಕಾ: 'ಜವಾನ್'​ ಸಕ್ಸಸ್​ ಮೀಟ್​ನಲ್ಲಿ ಶಾರುಖ್​ ಖಾನ್​ ವೈಟ್​ ಶರ್ಟ್​ಗೆ ಬ್ಲ್ಯಾಕ್​ ಸೂಟ್​ ಧರಿಸಿ ಡ್ಯಾಪರ್​ ಲುಕ್​ನಲ್ಲಿ ಕಾಣಿಸಿಕೊಂಡರು. ಕಿಂಗ್​ ಖಾನ್​ ಎಂದಿನಂತೆ ಸ್ಮಾರ್ಟ್​ ಆಗಿ ಕಾಣುತ್ತಿದ್ದರು. ಕೈಗೆ ಬೆಳ್ಳಿ ಕಡಗ ಮತ್ತು ವಾಚ್​ ಧರಿಸಿ ತಮ್ಮ ನೋಟವನ್ನು ಸಂಪೂರ್ಣಗೊಳಿಸಿದರು. ಮತ್ತೊಂದೆಡೆ ದೀಪಿಕಾ ಪಡುಕೋಣೆ ಕಪ್ಪು ಮಿನುಗು ಬಾರ್ಡರ್​ ಹೊಂದಿರುವ ಬಿಳಿ ಸೀರೆಯಲ್ಲಿ ಆಕರ್ಷಕವಾಗಿ ಕಂಡರು. ಸುಂದರವಾದ ಕಿವಿಯೋಲೆ, ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿ, ಸೌಂದರ್ಯಕ್ಕೆ ಕುಂದು ಕೊರತೆ ಬಾರದಂತೆ ಸರಿಯಾದ ಮೇಕಪ್​ ಜೊತೆ ಬ್ಯೂಟಿಫುಲ್​ ಆಗಿ ಕಾಣಿಸಿಕೊಂಡರು.

Jawan success meet
ಸ್ಟೈಲಿಶ್​ ಅವತಾರದಲ್ಲಿ ಶಾರುಖ್ ಖಾನ್​​ ಮತ್ತು ದೀಪಿಕಾ ಪಡುಕೋಣೆ

ಚಲೇಯ ಹಾಡಿಗೆ ಡ್ಯಾನ್ಸ್​: ಸಕ್ಸಸ್​ ಪಾರ್ಟಿಯಲ್ಲಿ 'ಪಠಾಣ್​' ಜೋಡಿ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಸೂಪರ್​ ಹಿಟ್​ ಚಲೇಯ ಹಾಡಿಗೆ ಹೆಜ್ಜೆ ಹಾಕಿದರು. ಸಂಗೀತ ಸಂಯೋಜಕ ಅನಿರುದ್ಧ್​ ರವಿಚಂದರ್​ ಮತ್ತು ಗಾಯಕಿ ರಾಜಾ ಕುಮಾರಿ ಲೈವ್​ನಲ್ಲಿ ಹಾಡಿದಾಗ ಇವರಿಬ್ಬರು ಡ್ಯಾನ್ಸ್​ ಮೂಲಕ ನೋಡುಗರನ್ನು ಮೋಡಿ ಮಾಡಿದರು. ಈ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಟ್ಲಿ ನಿರ್ದೇಶನದ ಜವಾನ್ ಸಿನಿಮಾವು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಬಿಡುಗಡೆ ಅಗಿತ್ತು. ನಾಯಕ ಶಾರುಖ್ ಖಾನ್ ಜೊತೆಗೆ ನಟಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಸಂಜಯ್ ದತ್ ಅವರು ಅತಿಥಿ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಸಿನಿಮಾವನ್ನು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್​ ನಿರ್ಮಿಸಿದೆ.

ಇದನ್ನೂ ಓದಿ: ಬಾಲಿವುಡ್​ನ ಇನ್ನೂ 4 ತಾರೆಯರಿಗೆ ಆ್ಯಕ್ಷನ್​ ಕಟ್​ ಹೇಳುವಾಸೆ: 'ಜವಾನ್​' ನಿರ್ದೇಶಕ ಅಟ್ಲೀ ಮನದಿಂಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.