ETV Bharat / entertainment

ಜೈ 'ಜವಾನ್' ಎಂದ ಪ್ರೇಕ್ಷಕ, ₹1,000 ಕೋಟಿ ತಲುಪಿದ ಬಾಕ್ಸ್‌ ಆಫೀಸ್ ಕಲೆಕ್ಷನ್! ಇತಿಹಾಸ ಬರೆದ ಶಾರುಖ್ ಖಾನ್ - ಜವಾನ್ ಚಿತ್ರದ ಕಲೆಕ್ಷನ್​

ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಜವಾನ್ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಿ 1,000 ಕೋಟಿ ರೂಪಾಯಿ ಕ್ಲಬ್ ಸೇರಿದೆ.

awan
'ಜವಾನ್'
author img

By ETV Bharat Karnataka Team

Published : Sep 26, 2023, 8:50 AM IST

ಮುಂಬೈ: ಬಾಲಿವುಡ್​ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಜವಾನ್' ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ 1,000 ಕೋಟಿ ರೂ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ. ಅಮೀರ್ ಖಾನ್ ನಟನೆಯ ದಂಗಲ್ ಮತ್ತು ಶಾರುಖ್ ಖಾನ್ ಅವರ ಪಠಾಣ್ ನಂತರ ಜವಾನ್ ಕೂಡ ಸಾವಿರ ಕೋಟಿ ಕಲೆಕ್ಷನ್ ಸಾಧಿಸಿದೆ. 2,070 ಕೋಟಿಗಳ ಜಾಗತಿಕ ಕಲೆಕ್ಷನ್​ನೊಂದಿಗೆ ದಂಗಲ್ ಬಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂದೆನಿಸಿತ್ತು.

ಒಂದೇ ವರ್ಷದಲ್ಲಿ 2 ಚಿತ್ರಗಳಿಂದ ಸಾವಿರ ಕೋಟಿ ಗಳಿಕೆ: ಚಿತ್ರ ನಿರ್ಮಾಪಕರಾದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಬಿಡುಗಡೆ ಮಾಡಿರುವ ಅಂಕಿಅಂಶಗಳಂತೆ, ಜವಾನ್ ಜಗತ್ತಿನೆಲ್ಲೆಡೆ ಸಿನಿಮಾ 1004.92 ಕೋಟಿ ರೂ ಗಳಿಸಿದೆ. 18 ದಿನಗಳಲ್ಲೇ ಸಿನಿಮಾ ಈ ಸಾಧನೆ ಮಾಡಿದ್ದು ಗಮನಾರ್ಹ. ಶಾರುಖ್ ಇತ್ತೀಚಿನ ಸಿನಿಮಾ ಪಠಾಣ್ ಕೂಡ ಸಾವಿರ ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಒಂದೇ ವರ್ಷದಲ್ಲಿ ಶಾರುಖ್ ಖಾನ್ ಅವರ 2 ಚಿತ್ರಗಳು ಸಾವಿರ ಕೋಟಿ ಕ್ಲಬ್ ತಲುಪಿವೆ.

ಈ ಬಗ್ಗೆ ನಟಿ ಸನ್ಯಾ ಮಲ್ಹೋತ್ರಾ ಇನ್‌ಸ್ಟಾಗ್ರಾಂ ಪೋಸ್ಟ್​​ನಲ್ಲಿ ​ಮಾಹಿತಿ ಹಂಚಿಕೊಂಡಿದ್ದಾರೆ. "ಜವಾನ್‌ ಗಲ್ಲಾಪೆಟ್ಟಿಗೆಯ ಯಶಸ್ಸನ್ನು ಮರುವ್ಯಾಖ್ಯಾನಿಸಿದೆ. ಚಿತ್ರವು ಕಥಾಹಂದರ ಮತ್ತು ಅದ್ಭುತ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ" ಎಂದು ಶೀರ್ಷಿಕೆ ನೀಡಿದ್ದಾರೆೆ.

ತಮಿಳಿನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಅಟ್ಲಿ, ಬಾಲಿವುಡ್​ಗೆ ಎಂಟ್ರಿ ಕೊಟ್ಟು ಭರ್ಜರಿ ಯಶಸ್ಸು ಕಂಡಿದ್ದಾರೆ. ಬಾಲಿವುಡ್ ಚಿತ್ರವಾದರೂ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಏಕೈಕ ತಮಿಳು ನಿರ್ದೇಶಕ ಎಂಬ ಹೆಗ್ಗಳಿಕೆಗೂ ಅಟ್ಲಿ ಪಾತ್ರರಾಗಿದ್ದಾರೆ. ಲೇಡಿ ಸೂಪರ್​ಸ್ಟಾರ್ ನಯನತಾರಾ, ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಟಿಸಿರುವ ಈ ಚಿತ್ರ ಉತ್ತರ ಭಾರತದ ಹೊರತಾಗಿ ದಕ್ಷಿಣ ಭಾರತದಲ್ಲೂ ಉತ್ತಮ ಪ್ರದರ್ಶನ ಕಂಡಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಿಸಿದ ಜವಾನ್ ಚಿತ್ರವನ್ನು ಗೌರವ್ ವರ್ಮಾ ಸಹ ನಿರ್ಮಾಣ ಮಾಡಿದ್ದಾರೆ.

'ಒಂದು ಚಿತ್ರದೊಂದಿಗೆ ವರ್ಷಗಳ ಕಾಲ ಬದುಕುವ ಅವಕಾಶ': ಚಿತ್ರದ ಯಶಸ್ಸಿನ ನಂತರ ನಿರ್ಮಾಪಕರು ಇತ್ತೀಚೆಗೆ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕಾರ್ಯಕ್ರಮದಲ್ಲಿ ಶಾರೂಖ್​​ ಖಾನ್​, ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಹಾಗೂ ಅಟ್ಲಿ ಉಪಸ್ಥಿತರಿದ್ದರು. ಯಶಸ್ಸಿನ ಬಗ್ಗೆ ಮಾತನಾಡಿದ ಶಾರುಖ್, "ಇದೊಂದು ಸಂಭ್ರಮಾಚರಣೆ. ಒಂದು ಚಿತ್ರದೊಂದಿಗೆ ವರ್ಷಗಳ ಕಾಲ ಬದುಕುವ ಅವಕಾಶ ನಮಗೆ ಸಿಗುವುದು ಅಪರೂಪ. ಕೋವಿಡ್ ಮತ್ತು ಸಮಯದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ಜವಾನ್​​ಗಾಗಿ ಸಿದ್ಧತೆ ನಡೆದಿತ್ತು. ಚಿತ್ರದಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ದಕ್ಷಿಣದ ಜನರು ಕಳೆದ ನಾಲ್ಕು ವರ್ಷಗಳಿಂದ ಮುಂಬೈಗೆ ಬಂದು ನೆಲೆಸಿದ್ದಾರೆ. ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ಕಠಿಣ ಕೆಲಸವಾಗಿತ್ತು" ಎಂದರು.

ಕಾರ್ಯಕ್ರಮದಲ್ಲಿ ಶಾರುಖ್​ ಖಾನ್​ ತಮ್ಮ ಮುಂಬರುವ ಚಿತ್ರ 'ಡಂಕಿ'ಯ ಬಿಡುಗಡೆ ದಿನಾಂಕ ಖಚಿತಪಡಿಸಿದರು. "ನಾವು ಜನವರಿ 26ರ ಗಣರಾಜ್ಯೋತ್ಸವವನ್ನು ಪಠಾಣ್ ಜೊತೆ ಪ್ರಾರಂಭಿಸಿದ್ದೇವೆ. ಬಳಿಕ ಕೃಷ್ಣಜನ್ಮಾಷ್ಟಮಿಯಂದು ಜವಾನ್ ಬಿಡುಗಡೆ ಮಾಡಿದ್ದೇವೆ. ಈಗ ಹೊಸ ವರ್ಷ ಮತ್ತು ಕ್ರಿಸ್‌ಮಸ್ ಸಂಭ್ರಮದಲ್ಲಿ ಡಂಕಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ" ಎಂದು ಹೇಳಿದರು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಜವಾನ್​ ಸದ್ದು: ಚಿತ್ರಮಂದಿರಗಳತ್ತ ಪ್ರೇಕ್ಷಕರ ಸಂಭ್ರಮಾಚರಣೆ - ಹುಚ್ಚೆದ್ದು ಕುಣಿದ ಫ್ಯಾನ್ಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.