ಇಂಡಿಯನ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ದಕ್ಷಿಣ ಚಿತ್ರರಂಗದ ಯುವ ನಿರ್ದೇಶಕ ಅಟ್ಲೀ ಕಾಂಬಿನೇಶನ್ನಲ್ಲಿ 'ಜವಾನ್' ಎಂಬ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ರೆಡಿಯಾಗಿದೆ. ಸೆಪ್ಟೆಂಬರ್ 7 ರಂದು ಥಿಯೇಟರ್ಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಕಾಣಲಿದೆ. ಈಗಿನಿಂದಲೇ ಚಿತ್ರತಂಡ ಪ್ರಚಾರ ಆರಂಭಿಸಿದೆ. ಅದರ ಭಾಗವಾಗಿ ಸೋಮವಾರ 'ಜವಾನ್' ಪ್ರಿವ್ಯೂ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಈ ವಿಡಿಯೋಗೆ ನಟರು, ನಿರ್ದೇಶಕರು ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಮೆಚ್ಚುಗೆ ಮಾತುಗಳ ಅಲೆಯಲ್ಲಿ ತೇಲುತ್ತಿರುವ ಜವಾನ್ ನಿರ್ದೇಶಕ ಅಟ್ಲೀ ಅವರು ನಾಯಕ ನಟ ಶಾರುಖ್ ಖಾನ್ ಅವರ ಇತ್ತೀಚಿನ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
-
From reading tales of kings to embarking on a journey with one in real, #Chief I guess I’m living the dream I’ve always dreamt of. Thank you so much ❤️ This film pushed me to my limits, where I gained invaluable lessons along the way. Your passion towards cinema and the amount of… https://t.co/VY83amW8Vp
— atlee (@Atlee_dir) July 12, 2023 " class="align-text-top noRightClick twitterSection" data="
">From reading tales of kings to embarking on a journey with one in real, #Chief I guess I’m living the dream I’ve always dreamt of. Thank you so much ❤️ This film pushed me to my limits, where I gained invaluable lessons along the way. Your passion towards cinema and the amount of… https://t.co/VY83amW8Vp
— atlee (@Atlee_dir) July 12, 2023From reading tales of kings to embarking on a journey with one in real, #Chief I guess I’m living the dream I’ve always dreamt of. Thank you so much ❤️ This film pushed me to my limits, where I gained invaluable lessons along the way. Your passion towards cinema and the amount of… https://t.co/VY83amW8Vp
— atlee (@Atlee_dir) July 12, 2023
ಶಾರುಖ್ ಖಾನ್ ಟ್ವೀಟ್ಗೆ ಅಟ್ಲೀ ಪ್ರತಿಕ್ರಿಯಿಸಿ, "ರಾಜರ ಕಥೆಗಳನ್ನು ಓದುವುದರಿಂದ ಹಿಡಿದು ನಿಜವಾದ ರಾಜನೊಂದಿಗೆ ಪ್ರಯಾಣವನ್ನು ಪ್ರಾರಂಭಿಸುವವರೆಗೆ, ನಾನು ಕಂಡ ಕನಸಿನಂತೆ ಬದುಕುತ್ತಿದ್ದೇನೆ ಎಂದು ಭಾವಿಸುತ್ತೇನೆ, ನಿಮಗೆ ಬಹಳ ಧನ್ಯವಾದಗಳು, ಈ ಚಿತ್ರವು ನನ್ನನ್ನು ಇತಿಮಿತಿಗಳಿಂದ ಹೊರಕ್ಕೆ ತಂದಿತು, ಇಲ್ಲಿ ನಾನು ಅಮೂಲ್ಯವಾದ ಪಾಠಗಳನ್ನು ಕಲಿತುಕೊಂಡಿದ್ದೇನೆ, ಸಿನಿಮಾದೆಡೆಗಿನ ನಿಮ್ಮ ಉತ್ಸಾಹ ಮತ್ತು ಕಳೆದ 3 ವರ್ಷಗಳಲ್ಲಿ ನಾನು ಬಹಳ ಹತ್ತಿರದಿಂದ ಕಂಡಿರುವ ನಿಮ್ಮ ಕಠಿಣ ಪರಿಶ್ರಮ ಸ್ಫೂರ್ತಿದಾಯಕ. ಇದು ಕೇವಲ ಆರಂಭ ಸರ್. ನಿಮ್ಮನ್ನು ಬಹಳ ಪ್ರೀತಿಸುತ್ತೇನೆ, ಇಡೀ ತಂಡದ ಪರವಾಗಿ ಈ ಉತ್ತಮ ಅವಕಾಶಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ದೇವರ ದಯೆ ನನ್ನ ಮೇಲಿದೆ, ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕ ಅಟ್ಲೀ ಅವರಿಗೆ ಶಾರುಖ್ ಖಾನ್ ಮಂಗಳವಾರ ಟ್ವಿಟರ್ನಲ್ಲಿ ಕೃತಜ್ಞತೆ ಸಲ್ಲಿಸಿದ್ದರು. ಆ ಟ್ವೀಟ್ಗೆ ನಿರ್ದೇಶಕರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಅಟ್ಲೀ ಅವರ ಪೋಸ್ಟ್ (ಜವಾನ್ ಪ್ರಿವ್ಯೂ) ಅನ್ನು ತಮ್ಮ ಖಾತೆಯಲ್ಲಿ ರೀ ಶೇರ್ ಮಾಡಿದ್ದ ಎಸ್ಆರ್ಕೆ, ''ಸರ್, ಮಾಸ್, ಯೂ ಆರ್ ದ ಮ್ಯಾನ್, ಎಲ್ಲದಕ್ಕೂ ಧನ್ಯವಾದಗಳು, ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಮೊದಲ ದಿನವೇ 'ಜವಾನ್' ವೀಕ್ಷಿಸುತ್ತೇನೆ: ಶಾರುಖ್ ಗುಣಗಾನ ಮಾಡಿದ ಸಲ್ಮಾನ್ ಖಾನ್
ಬಾಲಿವುಡ್ ಕಿಂಗ್ ಖಾನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾಗಳು 'ಜವಾನ್' ಮತ್ತು 'ಡಂಕಿ'. ಸೋಮವಾರ ಜವಾನ್ ಪ್ರಿವ್ಯೂ ಬಿಡುಗಡೆಗೊಂಡಿದೆ. ಆ್ಯಕ್ಷನ್ ದೃಶ್ಯಗಳು ರೋಮಾಂಚಕಾರಿಯಾಗಿದ್ದು, ಬಿಗ್ ಸ್ಟಾರ್ಸ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು 'ಜವಾನ್' ಪ್ರಿವ್ಯೂಗೆ ಬಹಳ ಮೆಚ್ಚುಗೆ ಸೂಚಿಸಿ, ಚಿತ್ರದ ಮೇಲಿನ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಹಿಂದೆ ಸರಿದಿಲ್ಲ. ಜವಾನ್ ಪ್ರಿವ್ಯೂ ಅನ್ನು ಶೇರ್ ಮಾಡಿದ ಸಲ್ಮಾನ್ ಖಾನ್, '' ಟ್ರೇಲರ್, ಬಹಳ ಇಷ್ಟವಾಯಿತು, ಚಿತ್ರಮಂದಿರಗಳಲ್ಲೇ ವೀಕ್ಷಿಸಬೇಕಾದ ಸಿನಿಮಾ, ಮೊದಲ ದಿನವೇ ಜವಾನ್ ವೀಕ್ಷಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Shiva Rajkumar:''ನೀವ್ ಗನ್ನಲ್ಲಿ ಹೆದರಿಸಿದ್ರೆ, ನಾನ್ ಬರೀ ಕಣ್ಣಲ್ಲೇ...ಒರಿಜಿನಲ್ ಗ್ಯಾಂಗ್ಸ್ಟರ್''