ETV Bharat / entertainment

ಜೂ.ಎನ್​​ಟಿಆರ್ ಜೊತೆ ಕೆಲಸ ಮಾಡಲಿಚ್ಛಿಸಿದ ಹಾಲಿವುಡ್​​ ನಿರ್ದೇಶಕ - ಈಟಿವಿ ಭಾರತ ಕನ್ನಡ

ಹಾಲಿವುಡ್​​ ನಿರ್ಮಾಪಕ, ನಿರ್ದೇಶಕ ಜೇಮ್ಸ್ ಗನ್ ಅವರು ಆರ್​ಆರ್​ಆರ್ ಮತ್ತು ನಟ ಜೂ. ಎನ್​ಟಿಆರ್​ ಬಗ್ಗೆ ಮಾತನಾಡಿದ್ದಾರೆ.

james wishes to work with JR NTR
ಜೇಮ್ಸ್ ಗನ್ ಜೂ. ಎನ್​ಟಿಆರ್
author img

By

Published : Apr 26, 2023, 12:24 PM IST

ಹಾಲಿವುಡ್​​ ಸಿನಿಮಾ ನಿರ್ಮಾಪಕ, ನಿರ್ದೇಶಕ ಜೇಮ್ಸ್ ಗನ್ (James Gunn) ಕಳೆದ ಆರ್​ಆರ್​ಆರ್​ ಸಿನಿಮಾವನ್ನು ಹೊಗಳಿದ ಅನೇಕ ಅಂತಾರಾಷ್ಟ್ರೀಯ ಸಿನಿ ಗಣ್ಯರಲ್ಲಿ ಒಬ್ಬರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮತ್ತೆ ಆರ್​ಆರ್​ಆರ್ ಕುರಿತು ಮಾತನಾಡಿದ್ದಾರೆ. ನಾಯಕ ನಟ ಜೂನಿಯರ್ ಎನ್​​ಟಿಆರ್ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆಂದು ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಸಿನಿಮಾ ಯುಎಸ್‌ನಲ್ಲಿ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದೆ. ಅಲ್ಲಿ ಸಿನಿಮಾ ಎರಡೆರಡು ಬಾರಿ ತೆರೆಕಂಡು ಪ್ರದರ್ಶನವಾದ ನಂತರ ಜೇಮ್ಸ್ ಗನ್ ಈ ಹೇಳಿಕೆ ಕೊಟ್ಟಿದ್ದಾರೆ.

ಜೇಮ್ಸ್ ಗನ್ ಸೇರಿದಂತೆ ಇತರೆ ನಿರ್ದೇಶಕರು ಆರ್​ಆರ್​ಆರ್​ ಒಟಿಟಿಯಲ್ಲಿ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. 2022ರಲ್ಲಿ, ಭಾರತದ ಅಭಿಮಾನಿಯೊಬ್ಬರು ಆರ್​ಆರ್​ಆರ್​ ವೀಕ್ಷಿಸಲು ಜೇಮ್ಸ್ ಅವರನ್ನು ಕೇಳಿಕೊಂಡಿದ್ದರು. ಟ್ವೀಟ್ ನೋಡಿ ಅಭಿಮಾನಿಗೆ ಉತ್ತರಿಸಿದ್ದ ಅವರು, ನಾನು ಈಗಾಗಲೇ ಸಿನಿಮಾವನ್ನು ನೋಡಿದ್ದೇನೆ ಎಂದು ತಿಳಿಸಿದ್ದರು.

ಜೇಮ್ಸ್ ಗನ್ ಅವರು ಜೂನಿಯರ್ ಎನ್‌ಟಿಆರ್‌ ಅವರೊಂದಿಗೆ ಶೀಘ್ರದಲ್ಲೇ ಕೆಲಸ ಮಾಡುವಂತೆ ತೋರುತ್ತಿದೆ. ಈಗಾಗಲೇ ಅವರು ಆರ್‌ಆರ್‌ಆರ್‌ನಿಂದ ಪ್ರಭಾವಿತರಾಗಿದ್ದಾರೆ. ''ಆರ್​ಆರ್​ಆರ್​ ವ್ಯಕ್ತಿ ಯಾರು? ಅವರು ತುಂಬಾ ಒಳ್ಳೆಯವರು. ಹುಲಿಗಳ ಜೊತೆಗೆ ಪಂಜರದಿಂದ ಹೊರಬರುವ ವ್ಯಕ್ತಿ. ಒಂದು ದಿನ, ನಾನು ಅವರೊಂದಿಗೆ ಸಹಕರಿಸುತ್ತೇನೆ ಎಂದು ಭಾವಿಸುತ್ತೇನೆ, ಅವರು ಬಹಳ ಶಾಂತ ಸ್ವರೂಪ ಮತ್ತು ಅದ್ಭುತ" ಎಂದು ಜೇಮ್ಸ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೊಗಳಿಕೆ ವ್ಯಕ್ತಪಡಿಸಿದ್ದಾರೆ.

ನಟನಿಗೆ ನಿರ್ದಿಷ್ಟ ಪಾತ್ರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಜೇಮ್ಸ್, ಅದನ್ನು ಲೆಕ್ಕಾಚಾರ, ಚಿಂತನೆ ಮಾಡಬೇಕು ಎಂದು ಉತ್ತರಿಸಿದರು. "ನಾನು ಅದನ್ನು ಕಂಡುಹಿಡಿಯಬೇಕು" ಎಂದು ನಿರ್ದೇಶಕರು ಉತ್ತರಿಸಿದರು. ನಿರ್ದಿಷ್ಟ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸಹ ತಿಳಿಸಿದರು.

ಇದನ್ನೂ ಓದಿ: ಸೋರಿಕೆಯಾದ 'ಜವಾನ್' ಚಿತ್ರದ ವಿಡಿಯೋ ಕ್ಲಿಪ್‌ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮಗಳಿಗೆ ಕೋರ್ಟ್​ ಸೂಚನೆ

'ಗಾರ್ಡಿಯನ್ಸ್ ಆಫ್ ಗ್ಯಾಲಕ್ಸಿ'ಯ ಸಂಗೀತಕ್ಕೆ ಭಾರತದಿಂದ ಸ್ಫೂರ್ತಿ ಪಡೆದಿದ್ದಾರೆಯೇ ಎಂಬ ಪ್ರಶ್ನೆಯನ್ನು ಇದೇ ಸಂದರ್ಶನದಲ್ಲಿ ಎತ್ತಲಾಯಿತು. ನಿರ್ದೇಶಕರು ತಡ ಮಾಡದೇ 100% ಎಂದು ಉತ್ತರಿಸಿದರು. ಸಂಗೀತದ ಭಾಗವು ನಿಸ್ಸಂದೇಹವಾಗಿ ಬಾಲಿವುಡ್ ಚಲನಚಿತ್ರಗಳಿಂದ ಪ್ರಭಾವಿತವಾಗಿದೆ ಎಂದು ಅವರು ಒಪ್ಪಿಕೊಂಡರು.

ಇದನ್ನೂ ಓದಿ: ಮದುವೆ ವಿಷಯ ಕೇಳುತ್ತಿದ್ದಂತೆ ಕೆನ್ನೆ ಕೆಂಪು ಮಾಡಿಕೊಂಡ ನಟಿ ಪರಿಣಿತಿ ಚೋಪ್ರಾ

ಮುಂದಿನ ಸಿನಿಮಾ ವಿಚಾರ ಗಮನಿಸುವುದಾದರೆ, ನಿರ್ದೇಶಕ ಕೊರಟಾಲ ಶಿವ ಮತ್ತು ಜೂನಿಯರ್ ಎನ್​ಟಿಆರ್​ ಕಾಂಬಿನೇಷನ್​ನಲ್ಲಿ ಚಿತ್ರವೊಂದು ರೆಡಿಯಾಗುತ್ತಿದೆ. 'ಎನ್​ಟಿಆರ್​ 30' ಈ ಚಿತ್ರದ ತಾತ್ಕಾಲಿಕ ಶೀರ್ಷಿಕೆ. ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್​ ಮೊದಲ ಬಾರಿಗೆ ಸೌತ್​ ನಟ ಜೂನಿಯರ್ ಎನ್​ಟಿಆರ್ ಜೊತೆ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ. ಹೈದರಾಬಾದ್​ನಲ್ಲಿ ಶೂಟಿಂಗ್​ ಮುಂದುವರಿದಿದ್ದು, ನಟ ಸೈಫ್​ ಅಲಿ ಖಾನ್ ​ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.