ಭಾರತದ ಅತ್ಯಂತ ಪ್ರಸಿದ್ಧ ನಟ ರಜನಿಕಾಂತ್ ಅವರ ಜೈಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಗಲ್ಲಾಪೆಟ್ಟಿಗೆ ಅಂಕಿ ಅಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ತಲೈವಾ 2 ವರ್ಷಗಳ ಬ್ರೇಕ್ ಬಳಿಕ ಜೈಲರ್ನೊಂದಿಗೆ ಪರದೆ ಮೇಲೆ ಬಂದಿದ್ದು, 2023ರ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ಈ ಹೊತ್ತಿನಲ್ಲಿ ರಜನಿಕಾಂತ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಶೂಟಿಂಗ್ ಶುರುವಾಗಿದೆ.
ಜೈಲರ್ ಸಕ್ಸಸ್ ಸೆಲೆಬ್ರೇಶನ್: ಜೈಲರ್ ಈ ಹಿಂದಿನ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ರಜನಿ ಮುಖ್ಯಭೂಮಿಕೆಯ ಈ ಸಿನಿಮಾ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಸಂಪಾದನೆ ಮಾಡುವಲ್ಲಿ ಯಶ ಕಂಡಿದೆ. ಈ ಸಂಖ್ಯೆ ರಜನಿಕಾಂತ್ ಅವರ ಸ್ಟಾರ್ಡಮ್ ಎಷ್ಟಿದೆ, ಹೇಗಿದೆ ಎಂಬುದನ್ನು ಒತ್ತಿ ಹೇಳುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಸಿನಿಪ್ರಿಯರಿಂದ ಸಾಕಷ್ಟು ಪ್ರೀತಿ, ಬೆಂಬಲ ಪಡೆಯುತ್ತಿರುವ ಈ ಹೊತ್ತಿನಲ್ಲಿ ನಾಯಕ ನಟ ರಜನಿಕಾಂತ್ ಅವರು ತಮ್ಮ ಚಿತ್ರತಂಡದೊಂದಿಗೆ ಚೆನ್ನೈನಲ್ಲಿ ಸಿನಿಮಾ ಸಕ್ಸಸ್ನ ಸೆಲೆಬ್ರೇಶನ್ ಮಾಡಿದ್ದಾರೆ.
-
#Jailer SUCCESS celebration!
— Manobala Vijayabalan (@ManobalaV) August 25, 2023 " class="align-text-top noRightClick twitterSection" data="
The most PROFITABLE Kollywood movie of the year.
||#Rajinikanth | #ShivaRajkumar| #Mohanlal || pic.twitter.com/xAc9KocjoA
">#Jailer SUCCESS celebration!
— Manobala Vijayabalan (@ManobalaV) August 25, 2023
The most PROFITABLE Kollywood movie of the year.
||#Rajinikanth | #ShivaRajkumar| #Mohanlal || pic.twitter.com/xAc9KocjoA#Jailer SUCCESS celebration!
— Manobala Vijayabalan (@ManobalaV) August 25, 2023
The most PROFITABLE Kollywood movie of the year.
||#Rajinikanth | #ShivaRajkumar| #Mohanlal || pic.twitter.com/xAc9KocjoA
ಚಿತ್ರತಂಡದವರೊಂದಿಗೆ ಕೇಕ್ ಕತ್ತರಿಸಿದ ರಜನಿ: ಹಿರಿಯ ನಟ ರಜನಿಕಾಂತ್ ಅವರು ತಮ್ಮ ಜೈಲರ್ ಸಿನಿಮಾ ತೆರೆಕಾಣುವ ಮುನ್ನಾದಿನದಂದು ಆಧ್ಯಾತ್ಮಿಕ ಪ್ರವಾಸ ಕೈಗೊಂಡರು. ಪ್ರಯಾಣದ ವೇಳೆ ಗಣ್ಯರನ್ನೂ ಸಹ ಭೇಟಿ ಆಗಿ ಗಮನ ಸೆಳೆದರು. ಆಧ್ಯಾತ್ಮಿಕ ಪ್ರಯಾಣ ಮುಗಿಸಿ ಇತ್ತೀಚೆಗೆ ಚೆನ್ನೈಗೆ ವಾಪಸ್ಸಾಗಿದ್ದು, ಜೈಲರ್ ಯಶಸ್ಸನ್ನು ಆಚರಿಸಲು ತಮ್ಮ ತಂಡದೊಂದಿಗೆ ಸೇರಿಕೊಂಡರು. ಜೈಲರ್ ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಸಂಗೀತ ಸಂಯೋಜಕ ಅನಿರುಧ್ ರವಿಚಂದರ್, ನಟಿ ರಮ್ಯಾ ಕೃಷ್ಣನ್ ಸೇರಿದಂತೆ ಚಿತ್ರತಂಡದವರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. 72ರ ಹಿರಿಯ ನಟನ ಸುತ್ತಲೂ ನಗುಮೊಗದಲ್ಲಿ ಚಿತ್ರತಂಡದವರು ಸುತ್ತುವರಿದಿದ್ದರು. ಬಳಿಕ ಕೇಕ್ ಕತ್ತರಿಸಿ ಸಕ್ಸಸ್ ಸೆಲೆಬ್ರೇಶನ್ ಮಾಡಿದ್ದಾರೆ.
2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ: ಜೈಲರ್ 2023 ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಆ್ಯಕ್ಷನ್ ಕಾಮಿಡಿ ಸಿನಿಮಾ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ಕೇರಳ, ಆಂಧ್ರ ಸೇರಿದಂತೆ ಭಾರತದಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಈ ಹಿಂದಿನ ಸಿನಿಮಾದಲ್ಲಿ ಹಿನ್ನಡೆ ಕಂಡಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರಿಗೆ ಜೈಲರ್ ಯಶಸ್ಸು ಮುಂದಿನ ಹೆಜ್ಜೆಗೆ ಉತ್ಸಾಹ ತುಂಬಿದೆ.
ಇದನ್ನೂ ಓದಿ: ನಾನ್ ಸೀಕ್ವೆಲ್ ಲಿಸ್ಟ್ನಲ್ಲಿ ಜೈಲರ್ ಸಾಧನೆ.. ಕರ್ನಾಟಕ ಸೇರಿ ಪಂಚ ರಾಜ್ಯಗಳಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್
ತಲೈವರ್ 170 ಶೂಟಿಂಗ್: ಚಿತ್ರಮಂದಿರಗಳಲ್ಲಿ ಜೈಲರ್ ಉತ್ತಮ ಪ್ರದರ್ಶನ ಮುಂದುವರಿಸಿದೆ. ಈ ಹೊತ್ತಿನಲ್ಲಿ ರಜನಿ ಮುಂದಿನ ಸಿನಿಮಾ ಕೆಲಸ ಶುರು ಮಾಡಿದ್ದಾರೆ. ಜೈ ಭಿಮ್ ಖ್ಯಾತಿಯ ಟಿಜೆ ಜ್ಞಾನವೆಲ್ ನಿರ್ದೇಶನದಲ್ಲಿ ರಜನಿ ಅವರ ಮುಂದಿನ ಸಿನಿಮಾ ಮೂಡಿ ಬರಲಿದೆ. ಸಿನಿಮಾವನ್ನು ಸದ್ಯ ತಲೈವರ್ 170 ಎಂದು ಹೆಸರಿಸಲಾಗಿದೆ. ತಾತ್ಕಾಲಿಕ ಶೀರ್ಷಿಕೆ ಮೂಲಕ ಸದ್ದು ಮಾಡುತ್ತಿರುವ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಮಂಜು ವಾರಿಯರ್, ಫಹಾದ್ ಫಾಸಿಲ್, ಶರ್ವಾನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೈಕಾ ಪ್ರೊಡಕ್ಸನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.
ಇದನ್ನೂ ಓದಿ: ಧರ್ಮೇಂದ್ರ - ಶಬಾನಾ ಅಜ್ಮಿಯಂತೆ ಕಿಸ್ಸಿಂಗ್ ಸೀನ್ ಮಾಡಲು ರೆಡಿಯೆಂದ ಹೇಮಾ ಮಾಲಿನಿ