ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ 'ಜೈಲರ್​': ಮೊದಲ ದಿನವೇ 50 ಕೋಟಿ ರೂ. ಬಾಚಿದ ರಜಿನಿ ಸಿನಿಮಾ - ಈಟಿವಿ ಭಾರತ ಕನ್ನಡ

Jailer Box Office: 'ಜೈಲರ್​' ಸಿನಿಮಾ ಥಿಯೇಟರ್​ನಲ್ಲಿ ಅಬ್ಬರಿಸಿದೆ. ಮೊದಲ ದಿನವೇ ಕಲೆಕ್ಷನ್​ ವಿಚಾರದಲ್ಲಿ ದಾಖಲೆ ಬರೆದಿದೆ.

Jailer
'ಜೈಲರ್​'
author img

By

Published : Aug 11, 2023, 10:33 AM IST

ಕಾಲಿವುಡ್​ ಸೂಪರ್​ಸ್ಟಾರ್​ ರಜಿನಿಕಾಂತ್​ ನಟನೆಯ 'ಜೈಲರ್​' ಸಿನಿಮಾ ಗುರುವಾರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಚಿತ್ರ ವೀಕ್ಷಿಸಿ, ಬೆಂಬಲ ನೀಡಿದ್ದಾರೆ. ಮೊದಲ ದಿನ ಎಲ್ಲೆಡೆ ಹೌಸ್​ಫುಲ್​ ಶೋ ಕಂಡಿದೆ. ವಿಶ್ವದಾದ್ಯಂತ 7000 ಸ್ಕ್ರೀನ್​ಗಳಲ್ಲಿ ಭರ್ಜರಿ ಓಪನಿಂಗ್​ನೊಂದಿಗೆ ಕಲೆಕ್ಷನ್​ ವಿಚಾರದಲ್ಲಿ ದಾಖಲೆಯ ಓಟ ಮುಂದುವರೆಸಿದೆ. ಜೊತೆಗೆ 2023ರ ಅತಿ ಹೆಚ್ಚು ಗಳಿಕೆಯ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೂ ಜೈಲರ್​ ಪಾತ್ರವಾಗಿದೆ.

  • " class="align-text-top noRightClick twitterSection" data="">

ದಾಖಲೆ ಬರೆದ 'ಜೈಲರ್':​ 'ಜೈಲರ್' ಸಿನಿಮಾ ಬಿಡುಗಡೆಯಾದ ದಿನದಂದೇ ಹಲವಾರು ಗಮನಾರ್ಹ ದಾಖಲೆ ಬರೆದಿದೆ. ಇದು ತಮಿಳುನಾಡು ಮತ್ತು ಕೇರಳದಲ್ಲಿ ಉತ್ತಮ ಓಪನಿಂಗ್​ ಪಡೆದುಕೊಂಡಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ತಮಿಳು ಚಿತ್ರವೊಂದು ಮೊದಲ ದಿನ ಉತ್ತಮ ಕಲೆಕ್ಷನ್​ ಮಾಡಿದೆ. ಈ ವರ್ಷ 'ಜೈಲರ್​' ಎಂಬ ತಮಿಳು ಚಿತ್ರ ಇಡೀ ಭಾರತದಲ್ಲಿ ಬಿಗ್​ ರಿಲೀಸ್​ನೊಂದಿಗೆ ಮೊದಲ ದಿನವೇ ದಾಖಲೆಯ ಗಳಿಕೆ ಕಂಡಿದೆ. ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಹ ಸಿಕ್ಕಿದೆ.

ಮೊದಲ ದಿನದ ಕಲೆಕ್ಷನ್​: ಸ್ಯಾಕ್ನಿಲ್ಕ್​ನ ವರದಿ ಪ್ರಕಾರ, 'ಜೈಲರ್'​ ಸಿನಿಮಾ ಮೊದಲ ದಿನವೇ 50 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ತನ್ನ ಮೊದಲ ದಿನ 52 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ತಮಿಳುನಾಡಿನಿಂದ 23 ಕೋಟಿ ರೂ., ಕರ್ನಾಟಕದಿಂದ 11 ಕೋಟಿ ರೂ., ಕೇರಳದಿಂದ 5 ಕೋಟಿ ರೂ., ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ 10 ಕೋಟಿ ರೂ. ಮತ್ತು ಇತರ ರಾಜ್ಯಗಳಿಂದ 3 ಕೋಟಿ ರೂ. ಬಾಚಿಕೊಂಡಿದೆ.

ಇದನ್ನೂ ಓದಿ: ಇಂದು ರಜನಿಕಾಂತ್​ ನಟನೆಯ 'ಜೈಲರ್'​ ಸಿನಿಮಾ ಬಿಡುಗಡೆ: ಪ್ರೀಮಿಯರ್​ ಶೋ ನೋಡಿದ ಪ್ರೇಕ್ಷಕರು ಹೇಳಿದ್ದೇನು?

ಕೇರಳ, ಕರ್ನಾಟಕ ಮತ್ತು ತಮಿಳುನಾಡು ಈ ಮೂರು ರಾಜ್ಯದ ಜನರನ್ನು 'ಜೈಲರ್' ಸಿನಿಮಾ ಆಕರ್ಷಿಸಿದೆ​. ಏಕೆಂದರೆ, ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​, ಮಾಲಿವುಡ್​ ಸೂಪರ್​ಸ್ಟಾರ್​ ಮೋಹನ್​ಲಾಲ್​ ಮತ್ತು ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಈ ಮೂವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಥಿಯೇಟರ್​ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ಟಾರ್ ಹಿರಿಯ ನಟರು ಜೊತೆಯಾಗಿ ಒಂದೇ ಫ್ಲಾಟ್​ಫಾರ್ಮ್​ನಲ್ಲಿ ನಟಿಸಿದ್ದು, ನೋಡುಗರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದಿದೆ.​

ಚಿತ್ರತಂಡ ಹೀಗಿದೆ..: ನೆಲ್ಸನ್​​ ದಿಲೀಪ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ರಜನಿಕಾಂತ್​, ಶಿವ ರಾಜ್​ಕುಮಾರ್,​ ಮೋಹನ್​ ಲಾಲ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್​​, ಯೋಗಿ ಬಾಬು, ವಸಂತ್​ ರವಿ​ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. 'ಜೈಲರ್​' ಒಂದು ಆಕ್ಷನ್ - ಪ್ಯಾಕ್ಡ್ ಎಂಟರ್‌ಟೈನರ್ ಚಿತ್ರ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲಾನಿತಿ ಮಾರನ್ ಅವರು 200 ಕೋಟಿ ರೂ. ಬಜೆಟ್‌ನಲ್ಲಿ ಜೈಲರ್ ಅನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಜೈಲರ್‌ ವೀಕ್ಷಿಸಿದ ಅಳಿಯ ಧನುಷ್​​: ಚೆನ್ನೈಗೆ ಬಂದ ಜಪಾನ್​ ಜೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.