ಜಗತ್ತಿನಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ತೆರೆಕಂಡು ಆರು ದಿನಗಳಲ್ಲಿ ಭಾರತದಲ್ಲಿ 200 ಕೋಟಿ ರೂ. ಗಡಿ ದಾಟುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಶೀಘ್ರವೇ 400 ಕೋಟಿ ರೂ.ನ ಗಡಿ ದಾಟಲಿದೆ ಎಂಬ ವಿಶ್ವಾಸವಿದೆ.
400 ಕೋಟಿ ಗಡಿದಾಟಿದ ತಮಿಳು ಸಿನಿಮಾ: 400 ಕೋಟಿ ರೂ. ಗಡಿ ದಾಟಿದ ತಮಿಳು ಚಿತ್ರಗಳ ಕ್ಲಬ್ಗೆ ಈ ಜೈಲರ್ ಸಿನಿಮಾ ಸೇರಲಿದೆ. ರಜಿನಿಕಾಂತ್ ಅಭಿನಯದ ಈ ಹಿಂದಿನ ರೋಬೋಟ್ 2.0 ಮತ್ತು ಕಬಾಲಿ ಸೇರಿದಂತೆ ಪೊನ್ನಿಯಿನ್ ಸೆಲ್ವನ್, ವಿಕ್ರಮ್ ಸಿನಿಮಾಗಳು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂ. ಗಡಿ ದಾಟಿರುವ ಚಿತ್ರಗಳಾಗಿವೆ.
ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ? ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಜೈಲರ್ ಸಿನಿಮಾ 6ನೇ ದಿನ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು 33 ಕೋಟಿ ರೂ. ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ 207.15 ಕೋಟಿ ರೂ.ಗೆ ಏರಿಕೆ ಕಂಡಿದೆ. ತಮಿಳುನಾಡಿನಲ್ಲೇ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು (81.59) ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದಾರೆ.
ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲಚಿತ್ರ? ಬಾಕ್ಸ್ ಆಫೀಸ್ ಸಂಖ್ಯೆ ಗಮನಿಸಿದರೆ, ತಮಿಳುನಾಡಿನಲ್ಲಿ ಜೈಲರ್ ಸಿನಿಮಾ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1 ಚಿತ್ರದ ಕಲೆಕ್ಷನ್ ಏರಿಸುವ ಸಾಧ್ಯತೆ ಇದೆ. ಈ ಮೂಲಕ ಜೈಲರ್ ಸಿನಿಮಾ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲಚಿತ್ರವಾಗಿ ಹೊರಹೊಮ್ಮಲಿದೆ. ''ಜೈಲರ್ ಸಿನಿಮಾ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1 ಚಿತ್ರನ್ನು ಹಿಂದಿಕ್ಕುವ ಮೂಲಕ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ಸಿನಿಮಾವಾಗಲಿದೆ'' ಎಂದು ಸಿನಿ ಇಂಡಸ್ಟ್ರಿ ಟ್ಯಾಕರ್ ಮೆಶ್ ಬಾಲಾ ತಿಳಿಸಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಅವರ ಭೋಲಾ ಶಂಕರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಈ ಹಿನ್ನೆಲೆ ದಕ್ಷಿಣ ಚಿತ್ರರಂಗದಲ್ಲಿ ಜೈಲರ್ ತನ್ನ ವೇಗ ಉಳಿಸಿಕೊಳ್ಳಲು ಸಾಧ್ಯವಾಯಿತು. ಉತ್ತರ ಚಿತ್ರರಂಗದ ಮಾರುಕಟ್ಟೆಯಲ್ಲಿ ಸನ್ನಿ ಡಿಯೋಲ್ ಅವರ ಗದರ್ 2 ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಜೈಲರ್ ಪೈಪೋಟಿ ನಡೆಸುತ್ತಿದೆ. ಜೈಲರ್ ಆಗಸ್ಟ್ 10 ರಂದು ತೆರೆಕಂಡರೆ, ಗದರ್ 2 ಆಗಸ್ಟ್ 11 ರಂದು ಬಿಡುಗಡೆ ಅಗಿದೆ. ಗದರ್ 2 ಭಾರತದಲ್ಲಿ 230 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: Gadar 2: ಹುಬ್ಬೇರಿಸುವಂತಿದೆ ಗದರ್ 2 ಕಲೆಕ್ಷನ್ - ಸೂಪರ್ಹಿಟ್ ಸಿನಿಮಾ ವೀಕ್ಷಿಸಿದ ಕಾರ್ತಿಕ್ ಆರ್ಯನ್
ನೆಲ್ಸನ್ ದಿಲೀಪ್ ಕುಮಅರ್ ನಿರ್ದೇಶನದ ಜೈಲರ್ ಸಿನಿಮಾದಲ್ಲಿ ಶಿವ ರಾಜ್ಕುಮಾರ್, ಮೋಹನ ಲಾಲ್, ಜಾಕಿ ಶ್ರಾಫ್ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಚಿತ್ರತಂಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ.
ಇದನ್ನೂ ಓದಿ: Fighter: ವಾಯುಪಡೆ ಅಧಿಕಾರಿಗಳ ಪಾತ್ರದಲ್ಲಿ ಹೃತಿಕ್, ದೀಪಿಕಾ, ಅನಿಲ್ ಕಪೂರ್: ಫೈಟರ್ ಮೋಷನ್ ಪೋಸ್ಟರ್ ರಿಲೀಸ್