ETV Bharat / entertainment

ಜಗ್ಗೇಶ್​ ನಟನೆಯ 'ತೋತಾಪುರಿ 2'ಗೆ ಶಿವಣ್ಣ ಸಾಥ್.. ಗಣಪತಿ ಹಬ್ಬಕ್ಕೆ ಸಿಗಲಿದೆ ಕಾಮಿಡಿ ಕಿಕ್​ - ವಿಜಯಪ್ರಸಾದ್ ನಿರ್ದೇಶನ

ಸೆಪ್ಟಂಬರ್​ 18ರಂದು 'ತೋತಾಪುರಿ 2' ಚಿತ್ರದ ಟ್ರೈಲರ್​ ಅನ್ನು ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಬಿಡುಗಡೆ ಮಾಡಲಿದ್ದಾರೆ.

Jaggesh starrer totapuri 2 movie trailer releasing on september 18
ಜಗ್ಗೇಶ್​ ನಟನೆಯ 'ತೋತಾಪುರಿ 2'ಗೆ ಶಿವಣ್ಣ ಸಾಥ್​: ಗಣಪತಿ ಹಬ್ಬಕ್ಕೆ ಸಿಗಲಿದೆ ಕಾಮಿಡಿ ಕಿಕ್​
author img

By ETV Bharat Karnataka Team

Published : Sep 16, 2023, 10:18 PM IST

ಜಗ್ಗೇಶ್​ ನಟನೆಯ 'ತೋತಾಪುರಿ 2'ಗೆ ಶಿವಣ್ಣ ಸಾಥ್​: ಗಣಪತಿ ಹಬ್ಬಕ್ಕೆ ಸಿಗಲಿದೆ ಕಾಮಿಡಿ ಕಿಕ್​

ಒಂದೇ ಸೂರಿನಡಿ ಬದುಕುತ್ತಿರುವ ನಾವೆಲ್ಲ ಒಂದೇ ಎನ್ನುವ ಭಾವೈಕ್ಯತೆಯ ಸಂದೇಶ ಹೊಂದಿದ್ದ 'ತೋತಾಪುರಿ' ಚಿತ್ರ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮುಂದುವರಿದ ಭಾಗ 'ತೋತಾಪುರಿ 2' ಶೀಘ್ರದಲ್ಲೇ ತೆರೆಕಾಣಲು ಸಿದ್ಧವಾಗಿದೆ. 'ಸಿದ್ಲಿಂಗು' ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ 'ತೋತಾಪುರಿ 2' ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಸಾಥ್ ಸಿಕ್ಕಿದೆ. ಇದೇ ಗಣೇಶ ಹಾಗೂ ಗೌರಿ ಹಬ್ಬಕ್ಕೆ 'ತೋತಾಪುರಿ 2' ಚಿತ್ರದ ಟ್ರೈಲರ್​ ಅನ್ನು ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟ ಜಗ್ಗೇಶ್, ಶಿವಣ್ಣ ಮನಸ್ಸು ಬಹಳ ದೊಡ್ಡದು. ಯಾಕಂದ್ರೆ ನಮ್ಮ 'ತೋತಾಪುರಿ' ಸಿನಿಮಾ ನೋಡಿ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಗಣೇಶ ಹಬ್ಬಕ್ಕೆ 'ತೋತಾಪುರಿ 2' ಚಿತ್ರದ ಟ್ರೈಲರ್ ಅನ್ನು ಅವರೇ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಸಂತೋಷವಾಗುತ್ತಿದೆ. ಸಾಕಷ್ಟು ಫಾರಿನ್ ಸ್ನೇಹಿತರು ಹಾಗೂ ದೊಡ್ಡ ದೊಡ್ಡ ಅಧಿಕಾರದಲ್ಲಿರುವ ಗೆಳೆಯರು 'ತೋತಾಪುರಿ 2' ಸಿನಿಮಾ ನೋಡುವುದಕ್ಕೆ ವೇಟ್ ಮಾಡ್ತಾ ಇದ್ದಾರೆ ಎಂದರು.

ಮೊದಲ ಭಾಗದಲ್ಲಿ ಕಾಮಿಡಿ ಜೊತೆಗೆ ಜಾತಿ ಧರ್ಮದ ಬಗ್ಗೆ ಹೇಳಲಾಗಿತ್ತು. ಆದರೆ ತೋತಾಪುರಿ 2 ಸಿನಿಮಾದಲ್ಲಿ ಸಮಾನತೆಯ ಬಗ್ಗೆ ಹೇಳಲಾಗಿದೆ. ಇದನ್ನು ನೋಡಿದ ಮೇಲೆ ಜಾತಿಯನ್ನು ಮೀರಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡುತ್ತೆ. ಹಾಗೇ ನನ್ನ ಜೀವನದಲ್ಲಿ ನಡೆದಿರುವ ಘಟನೆಗಳು ತೋತಾಪುರಿ 2 ಚಿತ್ರದಲ್ಲಿ ಇದೆ. ಗಂಭೀರ ವಿಷಯವನ್ನು ಕಾಮಿಡಿ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದ್ದು, ಕನ್ನಡಿಗರ ಮನ ಗೆಲ್ಲೋದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು, ನಟ ರಾಕ್ಷಸ ಡಾಲಿ ಧನಂಜಯ್ ಈ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದ್ದಾರೆ. ಧನಂಜಯ್ ಹಾಗೂ ಜಗ್ಗೇಶ್ ಅವರ ಕ್ಯಾರೆಕ್ಟರ್ ಲುಕ್ ಗುರುಪೂರ್ಣಿಮೆಯ ದಿನ ಬಿಡುಗಡೆಯಾಗಿತ್ತು. ಮೊದಲ ಭಾಗದಲ್ಲಿ ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸದ್ಯದಲ್ಲೇ ಚಿತ್ರತಂಡ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದು, ಚಿತ್ರಕ್ಕೆ ನಿರಂಜನ ಬಾಬು ಅವರ ಕ್ಯಾಮೆರಾವರ್ಕ್, ಅರುಣ್ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ.

ಈ ಚಿತ್ರವನ್ನು ಸುರೇಶ್ ಆರ್ಟ್ಸ್, ಮೋನ್ ಫ್ಲಿಕ್ಸ್ ಸ್ಟುಡಿಯೋಸ್ ಮೂಲಕ‌ ನಿರ್ಮಾಪಕ ಕೆ. ಎ. ಸುರೇಶ್ ಅವರು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರೊಡ್ಯೂಸರ್ ಕೆ.ಎ ಸುರೇಶ್, ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಚಿತ್ರದಲ್ಲಿದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಪರಿಶುದ್ದ ಹಾಸ್ಯದ ಹೂರಣವೂ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನುಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ. ಇಷ್ಟೆಲ್ಲಾ ವಿಶೇಷತೆ ಇರುವ 'ತೋತಾಪುರಿ 2' ಚಿತ್ರದ ಟ್ರೈಲರ್ ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಜಗ್ಗೇಶ್​ ಜೊತೆ 'ತೋತಾಪುರಿ 2' ಸಿನಿಮಾದಲ್ಲಿ ಡಾಲಿ ಧನಂಜಯ್​ ಪಾತ್ರವೇನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.