ETV Bharat / entertainment

ರಾಮಮಂದಿರ ಸ್ವಚ್ಛಗೊಳಿಸಿದ ನಟ ಜಾಕಿ ಶ್ರಾಫ್​ - ವಿಡಿಯೋ ನೋಡಿ - ನಟ ಜಾಕಿ ಶ್ರಾಫ್

ನಟ ಜಾಕಿ ಶ್ರಾಫ್​ ಮುಂಬೈನ ಅತ್ಯಂತ ಹಳೆಯ ರಾಮಮಂದಿರವನ್ನು ಸ್ವಚ್ಛಗೊಳಿಸಿದ್ದು, ವಿಡಿಯೋ ವೈರಲ್​ ಆಗುತ್ತಿದೆ.

Jackie Shroff
ನಟ ಜಾಕಿ ಶ್ರಾಫ್
author img

By ETV Bharat Karnataka Team

Published : Jan 19, 2024, 4:04 PM IST

ತಮ್ಮ ನಟನಾ ಕೌಶಲ್ಯದಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮನಗೆದ್ದಿರುವ ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಅವರ ಪರಿಸರ ಕಾಳಜಿ ಬಗ್ಗೆ ನಿಮಗೆ ತಿಳಿದೇ ಇದೆ. ಕಾರ್ಯಕ್ರಮಗಳಲ್ಲಿ ಆತಿಥೇಯರಿಗೆ ಕೃತಜ್ಞತೆಯ ಸೂಚಕವಾಗಿ ಸಣ್ಣ ಗಿಡ ಕೊಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ. ಬಹು ಬೇಡಿಕೆ ನಟನ ಈ ಅಭ್ಯಾಸ ಹಚ್ಚ ಹಸಿರು ಮತ್ತು ತಾಜಾ ಜಗತ್ತು ನಿರ್ಮಾಣಕ್ಕೆ ಪೂರಕವಾಗಿದೆ. ಪರಿಸರ ಕಾಳಜಿಯುಳ್ಳ ನಟನೀಗ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ನಟನಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್​ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕ್ಲೀನಿಂಗ್​​ ಕೆಲಸದಲ್ಲಿ ಮಗ್ನ: ಸೋಷಿಯಲ್​​ ಮೀಡಿಯಾದಲ್ಲಿ ನಟ ಜಾಕಿ ಶ್ರಾಫ್​ ಅವರ ಸ್ವಚ್ಛತಾ ಕಾರ್ಯದ ವಿಡಿಯೋ ವೈರಲ್​ ಆಗುತ್ತಿದೆ. ಪಾಪರಾಜಿಗಳು ತಮ್ಮ ಅಧಿಕೃತ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸಖತ್​​ ಸದ್ದು ಮಾಡುತ್ತಿದೆ. ಮುಂಬೈನ ಅತ್ಯಂತ ಹಳೆಯ ರಾಮಮಂದಿರದ ಮೆಟ್ಟಿಲುಗಳನ್ನು ಜಾಕಿ ಶ್ರಾಫ್​ ಸ್ವಚ್ಛಗೊಳಿಸುತ್ತಿರುವುದನ್ನು ಈ ವೈರಲ್​ ವಿಡಿಯೋಗಳಲ್ಲಿ ಕಾಣಬಹುದು. ಕೆಲ ಹೊತ್ತು ಕ್ಲೀನಿಂಗ್​​ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ನಟನ ಸ್ವಚ್ಛತಾ ಕಾರ್ಯಕ್ಕೆ ಡಿಸಿಎಂ ಫಡ್ನವಿಸ್​ ಪತ್ನಿ ಸಾಥ್: ಪಾಪರಾಜಿಗಳು ಶೇರ್ ಮಾಡಿದ ಕೆಲ ಹೊತ್ತಲ್ಲೇ ಈ ವಿಡಿಯೋ ವೈರಲ್ ಆಗಿದೆ. ಬಹುಬೇಡಿಕೆ ನಟನ ವಿನಮ್ರ ಕಾರ್ಯ ನೆಟ್ಟಿಗರಿಂದ ಪ್ರಶಂಸೆ ಸ್ವೀಕರಿಸಿದೆ. ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಸ್ಥಳೀಯ ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛಗೊಳಿಸುವಂತೆ ಜನಸಾಮಾನ್ಯರಿಗೆ ಕರೆ ಕೊಟ್ಟಿದ್ದರು. ಬಳಿಕ, ಹಲವಾರು ರಾಜಕೀಯ ನಾಯಕರು ಮತ್ತು ಸೆಲೆಬ್ರಿಟಿಗಳು ಭಾರತದಾದ್ಯಂತ ದೇವಾಲಯಗಳನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ. ಜಾಕಿ ಶ್ರಾಫ್ ಜೊತೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಅಜಯ್ ದೇವ್​ಗನ್​, ಜ್ಯೋತಿಕಾ, ಮಾಧವನ್ ಹೊಸ ಸಿನಿಮಾ ಶೀರ್ಷಿಕೆ 'ಶೈತಾನ್': ಬಿಡುಗಡೆ ಯಾವಾಗ?

ಸಿನಿಮಾ ವಿಚಾರ ಗಮನಿಸುವುದಾದರೆ ಜಾಕಿ ಶ್ರಾಫ್ ಕೊನೆಯದಾಗಿ 'ಮಸ್ತ್ ಮೇ ರೆಹನಾ ಕಾ' ಚಿತ್ರದಲ್ಲಿ ನಟಿ ನೀನಾ ಗುಪ್ತಾ ಅವರೊಂದಿಗೆ ಕಾಣಿಸಿಕೊಂಡಿದ್ದರು. 2023ರ ಡಿಸೆಂಬರ್​ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಬಿಡುಗಡೆ ಆಯಿತು. ಮುಂದಿನ ದಿನಗಳಲ್ಲಿ ಅಹ್ಮದ್ ಖಾನ್ ನಿರ್ದೇಶನದ ಬಾಪ್ ಸಿನಿಮಾದಲ್ಲಿ ಜಾಕಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ 90ರ ದಶಕದ ತಾರೆಯರಾದ ಮಿಥುನ್ ಚಕ್ರವರ್ತಿ, ಸನ್ನಿ ಡಿಯೋಲ್ ಮತ್ತು ಸಂಜಯ್ ದತ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಮನ ಕುರಿತು ಸಂಭಾಷಣೆ ವಿವಾದ: ಕ್ಷಮೆಯಾಚಿಸಿದ ನಯನತಾರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.