ETV Bharat / entertainment

ಶುರಾ ಖಾನ್ ಜೊತೆಗೆ ನಿಖಾ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಂಡ ನಟ ಅರ್ಬಾಜ್ ಖಾನ್ - ನಿಖಾ ಫೋಟೋ ಹಂಚಿಕೊಂಡ ನಟ

ಬಾಲಿವುಡ್ ನಟ ಅರ್ಬಾಜ್ ಖಾನ್, ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ನಟ ಅರ್ಬಾಜ್ ಖಾನ್, ತಮ್ಮ ನಿಖಾ ಸಮಾರಂಭದ ಫ್ಯಾಮಿಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

arbaaz sshura nikaah
ಶುರಾ ಖಾನ್ ಜೊತೆಗೆ ನಿಖಾ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಂಡ ಅರ್ಬಾಜ್ ಖಾನ್
author img

By ETV Bharat Karnataka Team

Published : Dec 26, 2023, 9:24 AM IST

ಮುಂಬೈ: ಬಾಲಿವುಡ್ ನಟ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್ ಖಾನ್ ಅವರು​ ಮೇಕಪ್​ ಕಲಾವಿದೆ ಶುರಾ ಖಾನ್​ ಜೊತೆಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಮತ್ತುಆಪ್ತ ಸ್ನೇಹಿತರಿಗಾಗಿ ಆತ್ಮೀಯ ಕೂಟ ಏರ್ಪಡಿಸಿದ್ದರು. ಈ ಮೂಲಕ ಸಂತೋಷದ ವಾತಾವರಣ ನೆಲೆಗೊಳ್ಳುವಂತೆ ಮಾಡಲಾಗಿತ್ತು.

ವಿಹಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಅರ್ಬಾಜ್ ಖಾನ್ ತಮ್ಮ ಮದುವೆಯ ಫೋಟೋಗಳನ್ನು ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ''ಪ್ರೀತಿ ಪಾತ್ರರ ಸಮ್ಮುಖದಲ್ಲಿ ನಾನು ಹಾಗೂ ನನ್ನವಳು ಜೊತೆಯಾಗಿ ಪ್ರೀತಿಯ ಜೀವನವನ್ನು ಆರಂಭ ಮಾಡುತ್ತಿದ್ದೇವೆ. ನಮಗೆ ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗಳು ಬೇಕು'' ಎಂದು ಈ ಫೋಟೋದ ಅಡಿ ಬರಹ ಬರೆದುಕೊಂಡಿದ್ದರು.

ನಿಖಾದ ಫೋಟೋಗಳನ್ನು ಹಂಚಿಕೊಂಡ ನಟ: ಬಾಲಿವುಡ್ ನಟ ಅರ್ಬಾಜ್ ಖಾನ್, ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ನಟ ಅರ್ಬಾಜ್ ಖಾನ್, ತಮ್ಮ ನಿಖಾ ಸಮಾರಂಭದ ಫ್ಯಾಮಿಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿವೆ. ವರ ಅರ್ಬಾಜ್, ನಿಖಾ ಸಮಾರಂಭದ ನೂತನ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ಹಿತೈಷಿಗಳು ಮತ್ತು ಅಭಿಮಾನಿಗಳು ಕೂಡ ಫುಲ್​ ಖುಷ್ ಆಗಿದ್ದಾರೆ.

'ಹಲೋ ಬ್ರದರ್' ಖ್ಯಾತಿಯ ನಟ, ತಮ್ಮ ನಿಖಾ ಸಮಾರಂಭದ ಹೊಸ ಫೋಟೋಗಳನ್ನು ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಛಾಯಾಚಿತ್ರವು ಒಂದು ಸುಂದರವಾದ ಕ್ಷಣವನ್ನು ಕಣ್ಮುಂದೆ ತರುತ್ತದೆ. ಖಾಜಿಯೊಬ್ಬರು ನಿಖಾ ಕಾರ್ಯಕ್ರಮ ನಿರ್ವಹಿಸುತ್ತಿರುವುದು, ಹಾಗೂ ವಧು- ವರ ಇಬ್ಬರು ಗಮನವಿಟ್ಟು ಖಾಜಿ ಅವರು ಹೇಳುವುದನ್ನು ಕೇಳುತ್ತಿರುವುದು ಈ ಚಿತ್ರದಲ್ಲಿ ಕಾಣುತ್ತದೆ. ಸಲೀಂ ಖಾನ್ ಮತ್ತು ಸಲ್ಮಾ ಖಾನ್, ಅರ್ಬಾಜ್ ಅವರ ಪೋಷಕರು, ಜೊತೆಗೆ ಮಗ ಅರ್ಹಾನ್ ಖಾನ್ ಮತ್ತು ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಎಲ್ಲರೂ ನಗುತ್ತಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ಅರ್ಬಾಜ್ ಖಾನ್ ಹೂವಿನ ಚಿತ್ರ ಬಿಡಿಸಿರುವ ಬೀಚ್​ ಬಣ್ಣದ ಬಂಧ್​ಗಾಲ ಉಡುಪು ತೊಟ್ಟಿದ್ದರೇ, ವಧು ಶುರಾ ಖಾನ್​ ಹಗುರವಾದ ಪೀಚ್ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದರು. ಇನ್ನು ಅರ್ಬಾಜ್ ಖಾನ್ ಅವರ ಮೊದಲ ಪತ್ನಿ ಮಲೈಕಾ ಅರೋರಾ ಮತ್ತು ಅವರ ಮಗ ಅರ್ಹಾನ್ ಖಾನ್ ಕಪ್ಪು ಸೂಟ್‌ನಲ್ಲಿ ಕಾಣಿಸಿದ್ದರು. ಇನ್ನು ಅರ್ಬಾಜ್ ಖಾನ್​ ಪೋಷಕರಾದ ಸಲೀಂ ಹಾಗೂ ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್​ ಮತ್ತು ಸೊಹೈಲ್ ಖಾನ್ ಅವರ ಪುತ್ರರಾದ ನಿರ್ವಾನ್, ಯೋಹಾನ್ ಹಾಗೂ ಸಹೋದರಿ ಅಲ್ವಿರಾ ಖಾನ್ ಮದುವೆ ಮುಂಚಿತವಾಗಿ ಅರ್ಪಿತಾ ಅವರ ಮನೆಗೆ ಬಂದಿದ್ದರು.

ಜೊತೆಗೆ ರವೀನಾ ಟಂಡನ್ ಮತ್ತು ಅವರ ಪುತ್ರಿ ರಶಾ ಥಡಾನಿ, ರಿದ್ಧಿಮಾ ಪಂಡಿತ್ ಹಾಗೂ ರಿತೇಶ್ ದೇಶ್ಮುಖ್, ಅವರ ಪತ್ನಿ ಜೆನಿಲಿಯಾ ದೇಶಮುಖ್ ಕೂಡ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಹರ್ಷದೀಪ್ ಕೌರ್ ಕಾರ್ಯಕ್ರಮ ನಡೆಸಿಕೊಟ್ಟರು, ನವವಿವಾಹಿತರೊಂದಿಗೆ ಫೋಟೋ ಸೆಷನ್​ ಸಹ ಏರ್ಪಡಸಲಾಗಿತ್ತು. ಅಭಿನಂದನೆಗಳು ಆತ್ಮೀಯ ಹ್ಯಾಷ್​ಟ್ಯಾಗ್​ನೊಂದಿಗೆ ಅರ್ಬಾಜ್ ಖಾನ್, ಶುರಾ ಖಾನ್ ಅವರನ್ನು ಉಲ್ಲೇಖಿಸಿ ಇನ್​ಸ್ಟಾಗ್ರಾಮ್​ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮತ್ತೊಂದು ಚಿತ್ರದಲ್ಲಿ ಸಂಪೂರ್ಣ ಕುಟುಂಬ ಸದಸ್ಯರು ಒಟ್ಟುಗೂಡಿ ಸಂತಸದ ಕ್ಷಣದಲ್ಲಿ ಮುಳುಗಿರುವುದು ಕಂಡಬರುತ್ತದೆ. ಫ್ಯಾಮಿಲಿ ಫೋಟೋದಲ್ಲಿ ಅರ್ಪಿತಾ ಖಾನ್ ಶರ್ಮಾ, ಆಯುಷ್ ಶರ್ಮಾ, ಅತುಲ್ ಅಗ್ನಿಹೋತ್ರಿ, ಸೊಹೈಲ್ ಖಾನ್, ಹೆಲೆನ್ ಮತ್ತು ಇತರರು ಜೊತೆಗೆ ಇದ್ದಾರೆ. ಚಿತ್ರಗಳ ಸರಣಿಯನ್ನು ಹಂಚಿಕೊಂಡ ಅರ್ಬಾಜ್ ಅದಕ್ಕೆ ಶೀರ್ಷಿಕೆ ನೀಡಿದ್ದು, "ಇದು ನೀವು, ಇದು ನಾನು, ಇದು ನಾವು" ಎಂದು ಬರೆದುಕೊಂಡಿದ್ದಾರೆ.

ಅರ್ಬಾಜ್ ಪೋಸ್ಟ್ ಮಾಡಿದ ಚಿತ್ರಗಳ ಹೊರತಾಗಿ, ವಿಡಿಯೋಯೊಂದರಲ್ಲಿ ನಟನು ತನ್ನ ಪತ್ನಿ ಶುರಾ ಜೊತೆ ರಸ್ತೆಗಿಳಿಯುತ್ತಿರುವುದನ್ನು ಕಾಣಬಹುದು. ಮದುವೆಯ ನಂತರ ದಂಪತಿ ವಾಹನ ಚಲಾಯಿಸುವುದನ್ನು ಕಾಣಬಹುದು. ವಾಹನ ಚಲಾಯಿಸುವ ವೇಳೆ, ಅರ್ಬಾಜ್ ತನ್ನ ಮುಖವನ್ನು ಸ್ಟೀರಿಂಗ್ ಚಕ್ರದ ಕೆಳಗೆ ಮರೆಮಾಚುತ್ತಿರುವುದು ಕಂಡುಬಂದಿದೆ. ಆದರೆ, ಶುರಾ ತನ್ನ ಮುಖದ ಮೇಲೆ ಅವಳ ಕೈಯನ್ನು ಇಟ್ಟುಕೊಂಡಿದ್ದಳು. ಸ್ವಲ್ವ ಗಾಜು ಅಡ್ಡ ಇದ್ದಿದ್ದರಿಂದ ಅಷ್ಟೇನೂ ಆಕೆಯ ಮುಖ ಗೋಚರಿಸುವುದಿಲ್ಲ.

ಇದು ಅರ್ಬಾಜ್ ಅವರ ಎರಡನೇ ಮದುವೆ ಇದಾಗಿದ್ದು, ಈ ಹಿಂದೆ, ಅವರು ನಟಿ ಮತ್ತು ಮಾಡೆಲ್ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು. ದಂಪತಿಗಳು 2016ರಲ್ಲಿ ಬೇರ್ಪಟ್ಟರು, 2017ರಲ್ಲಿ ವಿಚ್ಛೇದನಕ್ಕೆ ಪಡೆದಿದ್ದರು. ಖಾನ್ ಅವರ ಮೊದಲ ಹೆಂಡತಿಗೆ ಅರ್ಹಾನ್ ಎಂಬ ಪುತ್ರರನ್ನು ಹೊಂದಿದ್ದಾರೆ.

ಇದನ್ನೂ ಓದಿ: ಮಾಜಿ ಪತಿಯ 2ನೇ ಮದುವೆ ಬೆನ್ನಲ್ಲೇ ಕ್ರಿಸ್​ಮಸ್​ ಆಚರಣೆ ಫೋಟೋ ಹಂಚಿಕೊಂಡ ಮಲೈಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.