ETV Bharat / entertainment

'ಜವಾನ್​​'ನಲ್ಲಿ ದೀಪಿಕಾ ಪಡುಕೋಣೆ ಪಾತ್ರಕ್ಕೆ ಹೆಚ್ಚು ಒತ್ತು; ಬಾಲಿವುಡ್‌ನಿಂದ ಮುನಿಸಿಕೊಂಡರೇ ನಯನತಾರಾ? - deepika padukone

ಜವಾನ್​ ಚಿತ್ರದಂಡ ದೀಪಿಕಾ ಪಡುಕೋಣೆ ಅವರಿಗೆ ಹೆಚ್ಚು ಮಹತ್ವ ಕೊಟ್ಟಿದೆ ಎಂದು ನಯನತಾರಾ ಕೊಂಚ ಬೇಸರಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.

Nayanathara upset from jawan team
ಜವಾನ್​​ ತಂಡದ ಬಗ್ಗೆ ನಯನತಾರಾ ಅಸಮಧಾನ
author img

By ETV Bharat Karnataka Team

Published : Sep 21, 2023, 12:51 PM IST

ಜನಾನ್​ ಸಿನಿಮಾ ಸೆಪ್ಟೆಂಬರ್​ 7 ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್​​ ಆಫೀಸ್​ ಅಂಕಿಅಂಶ ಅತ್ಯುತ್ತಮವಾಗಿದೆ. ಸ್ಟಾರ್​ ಡೈರೆಕ್ಟರ್​​ ಪ್ಲಸ್​​ ಸೂಪರ್​ ಸ್ಟಾರ್‌ಗಳನ್ನೊಳಗೊಂಡ ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದ್ರೀಗ ಸೌತ್​​ ಲೇಡಿ ಸೂಪರ್​​ ಸ್ಟಾರ್ ನಯನತಾರಾ ಅಸಮಧಾನಗೊಂಡಿದ್ದಾರೆಂಬ ಗುಮಾನಿ ಎದ್ದಿದೆ.

ನಯನತಾರಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಇದೇ ಮೊದಲ ಬಾರಿಗೆ ಬಾಲಿವುಡ್​​ ಸಿನಿಮಾದಲ್ಲಿ ನಟಿಸಿದ್ದಾರೆ. ಜವಾನ್​ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಮೂಡಿ ಬಂದಿದೆ. ನಯನತಾರಾ ಪಾತ್ರಕ್ಕೆ, ನಟನೆಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಆದ್ರೆ ಈ ವಿಚಾರದಲ್ಲಿ ನಟಿಗೆ ಸಂತೃಪ್ತಿ ಇಲ್ಲ. ಇದಕ್ಕೆ ಬಾಲಿವುಡ್​ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಕಾರಣ ಎಂದು ಹೇಳಲಾಗಿದೆ.

ದೀಪಿಕಾ ಅವರದ್ದು ಅತಿಥಿ ಪಾತ್ರವಾದರೂ ಅವರನ್ನು ಅತ್ಯಂತ ಪ್ರಮುಖ ಪಾತ್ರದಲ್ಲಿರುವಂತೆ ತೋರಿಸಲಾಗಿದೆ. ಇದೊಂದು ಶಾರುಖ್​​ ದೀಪಿಕಾ ಸಿನಿಮಾದಂತೆ ಕಾಣುತ್ತಿದೆ. ತಮ್ಮ ಪಾತ್ರದ ಮಹತ್ವ ಕಡಿಮೆ ಇದೆ ಎಂದು ನಯನತಾರಾ ಅಸಮಾಧಾನ ಹೊರಹಾಕಿದ್ದಾರೆಂದು ಹೇಳಲಾಗುತ್ತಿದೆ. ​

ಈ ಬಗ್ಗೆ ಚಿತ್ರದ ನಿರ್ದೇಶಕ ಅಟ್ಲೀ ಕುಮಾರ್​ ಬಗ್ಗೆ ನಯನತಾರಾ ಅಸಮಧಾನಗೊಂಡಿದ್ದಾರೆ. ಮುಂದೆ ಅವರೊಂದಿಗೆ, ಬಾಲಿವುಡ್​ನಲ್ಲಿ ಕೆಲಸ ಮಾಡುವುದಿಲ್ಲ ಎಂದೂ ಕೂಡ ಹೇಳಿದ್ದಾರಂತೆ. ವರದಿಗಳನ್ನು ನಂಬುವುದಾದರೆ, ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರ ತಮ್ಮ ಪಾತ್ರವನ್ನು ಮರೆ ಮಾಡಿದೆ. ಅಷ್ಟರ ಮಟ್ಟಿಗೆ ದೀಪಿಕಾರ ಪಾತ್ರವನ್ನು ಚಿತ್ರಿಸಲಾಗಿದೆ. ಪಡುಕೋಣೆ ಅವರ ಸ್ಕ್ರೀನ್​ ಟೈಮ್​ ನೋಡಿದ್ರೆ ಇದನ್ನು ಅತಿಥಿ ಪಾತ್ರ ಎನ್ನಲು ಸಾಧ್ಯವಿಲ್ಲ ಎಂದು ದಕ್ಷಿಣ ಚಿತ್ರರಂಗದ ಚೆಲುವೆ ನಯನತಾರಾ ತಿಳಿಸಿದ್ದಾರಂತೆ.

ಇದನ್ನೂ ಓದಿ: ಪರಿಣಿತಿ-ರಾಘವ್​ ವಿವಾಹ: ಸೂಫಿ ನೈಟ್ ಈವೆಂಟ್​ ವಿಡಿಯೋ ವೈರಲ್​

ಕಳೆದ ವಾರ ಜವಾನ್​ ಸಕ್ಸಸ್​ ಮೀಟ್​​ ನಡೆದಿತ್ತು. ಇಡೀ ಜವಾನ್​​ ಚಿತ್ರತಂಡ ಈವೆಂಟ್​ನಲ್ಲಿ ಉಪಸ್ಥಿತವಿತ್ತು. ಆದ್ರೆ ಪ್ರಮುಖ ಪಾತ್ರ ವಹಿಸಿರುವ ನಯನತಾರಾ ಆಗಮಿಸಿರಲಿಲ್ಲ. ತಾಯಿಯ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಅಂದು ದೀಪಿಕಾ ಪಡುಕೋಣೆ ಕಾರ್ಯಕ್ರಮದಲ್ಲಿ ಸಖತ್​ ಹೈಲೆಟ್​ ಆಗಿದ್ದರು. ಅಂದೂ ಕೂಡ ನೆಟ್ಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯ ಹೊರ ಹಾಕಿದ್ದರು. ಇದೀಗ ಚಿತ್ರತಂಡದ ಬಗ್ಗೆ ನಟಿ ನಯನತಾರಾ ಅಸಮಾಧಾನಗೊಂಡಿದ್ದಾರೆಂಬ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಟೊರೊಂಟೊ ಫಿಲ್ಮ್ ಫೆಸ್ಟಿವಲ್​​ ರೆಡ್​​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ ಶೆಹನಾಜ್​ ಗಿಲ್, ಪ್ರೇಕ್ಷಕರು ಥ್ರಿಲ್! ಬೋಲ್ಡ್​ ಫೋಟೋಗಳು

ಸೌತ್​ ಸ್ಟಾರ್​ ಡೈರೆಕ್ಟರ್​ ಅಟ್ಲೀ ಕುಮಾರ್​ ನಿರ್ದೇಶನದ ಈ ಸಿನಿಮಾವನ್ನು ಶಾರುಖ್​ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ವಿಜಯ್​ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರ ವಹಿಸಿದ್ದಾರೆ. ದೀಪಿಕಾ ಪಡುಕೋಣೆ ಅವರದ್ದು ಅತಿಥಿ ಪಾತ್ರ. ಚಿತ್ರ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಈಗಾಗಲೇ 500 ಕೋಟಿ ರೂ. ಗಡಿ ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.