ETV Bharat / entertainment

'ದಿ ಕೇರಳ ಸ್ಟೋರಿ' ಬಿಡುಗಡೆಯಾದ್ರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ: ಗುಪ್ತಚರ ಇಲಾಖೆ

'ದಿ ಕೇರಳ ಸ್ಟೋರಿ' ತೆರೆ ಕಂಡ್ರೆ ಪ್ರತಿಭಟನೆ ನಡೆಯಲಿದೆ ಎಂದು ತಮಿಳುನಾಡು ಪೊಲೀಸರಿಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

intelligence bureau has warned police about The Kerala Story effects
'ದಿ ಕೇರಳ ಸ್ಟೋರಿ'
author img

By

Published : May 3, 2023, 4:12 PM IST

ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರದ ಟ್ರೇಲರ್​​ ಏಪ್ರಿಲ್ 26ರಂದು ಬಿಡುಗಡೆ ಆಯಿತು. ಸಿನಿಮಾ ಬಿಡುಗಡೆಗೆ ಇನ್ನೆರಡೆ ದಿನ ಬಾಕಿ ಇದ್ದು, ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ತಮಿಳುನಾಡಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ಹಲವು ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಗುಪ್ತಚರ ಇಲಾಖೆ ತಮಿಳುನಾಡು ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಪಟ್ಟಿಯನ್ನು ತೆಗೆದುಕೊಂಡು ಭದ್ರತೆಯನ್ನು ಹೆಚ್ಚಿಸಬಹುದೇ? ಅಥವಾ ಬೇರೆ ರೀತಿಯಲ್ಲಿ ನಿರ್ಧರಿಸುವುದೇ? ಎಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.

ವಿಪುಲ್ ಅಮೃತಲಾಲ್ ಶಾ ನಿರ್ಮಾಣದ, ಸುದೀಪ್ತೋ ಸೇನ್ ಆ್ಯಕ್ಷನ್​ ಕಟ್​​ ಹೇಳಿರುವ ''ದಿ ಕೇರಳ ಸ್ಟೋರಿ'' ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸುವುದರ ಜೊತೆಗೆ ಹಲವೆಡೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' ತೆರೆ ಕಂಡ್ರೆ ಪ್ರತಿಭಟನೆಗಳು ನಡೆಯಲಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

'ದಿ ಕೇರಳ ಸ್ಟೋರಿ' ಟ್ರೇಲರ್​ನಲ್ಲೇನಿದೆ: ಸದ್ಯ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ ನಾಲ್ಕು ಯುವತಿಯರು ಕೇರಳದ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಕಾಲೇಜು​ ವಿದ್ಯಾಭ್ಯಾಸ ಪಡೆಯುತ್ತಿರುತ್ತಾರೆ. ಅದರಲ್ಲಿ ಮುಸ್ಲಿಂ ಯುವತಿಯರು ಕೇರಳದ ಹಿಂದೂ ಯುವತಿಯರನ್ನು ಮತಾಂತರಿಸಿ ಉಗ್ರ ಸಂಘಟನೆಗಳಿಗೆ (ISIS, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಸೇರಿಸುತ್ತಾರೆ. ಹಲವು ಮಹಿಳೆಯರನ್ನು ಇರಾಕ್​​ ಮತ್ತು ಸಿರಿಯಾಕ್ಕೆ ಕಳ್ಳಸಾಗಣೆ ಮಾಡುತ್ತಾರೆ. ಈ ಚಿತ್ರ ಸತ್ಯ ಘಟನೆ ಎಂದು ಹೇಳಲಾಗಿದ್ದು, ಇದುವರೆಗೆ 32,000 ಮಹಿಳೆಯರು ಹೀಗೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.

ಈ ಚಿತ್ರ ಬಿಡುಗಡೆಯನ್ನು ಖಂಡಿಸಿ ಹಲವು ಪಕ್ಷಗಳು ಪ್ರತಿಭಟನೆ ನಡೆಸಿವೆ. ಚಿತ್ರವನ್ನು ಬ್ಯಾನ್ ಮಾಡುವುದರಲ್ಲಿ ಅರ್ಥವಿಲ್ಲ ಮತ್ತು ಚಿತ್ರಮಂದಿರಗಳಲ್ಲಿ ನಿಷೇಧಿಸಿದರೆ, ಘೋಷಿಸಿದ ದಿನಾಂಕದಂದೇ OTT ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಕೇರಳ ಚಲನಚಿತ್ರ ಥಿಯೇಟರ್ ಮಾಲೀಕರು ಹೇಳಿದ್ದಾರೆ. ಅಲ್ಲದೇ ಈ ಸಿನಿಮಾವನ್ನು ಜನ ಖಂಡಿತ ನೋಡುತ್ತಾರೆ ಎಂದರು.

ಇದನ್ನೂ ಓದಿ: ಈ ವೀಕೆಂಡ್​ ಅತಿಥಿ ಸ್ಯಾಂಡಲ್​ವುಡ್​ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್​​

ನಂತರ ಸಿನಿಮಾವನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿತ್ತು. ಆದರೆ ನ್ಯಾಯಾಲಯವು ಚಿತ್ರವನ್ನು ನಿಷೇಧಿಸಲು ನಿರಾಕರಿಸಿತು. ದಿ ಕೇರಳ ಸ್ಟೋರಿ ಇದೇ ಮೇ. 5ರಂದು ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಮೇಘನಾ ರಾಜ್​: 'ತತ್ಸಮ ತದ್ಭವ' ಪೋಸ್ಟರ್​ ರಿಲೀಸ್​​

ಈ ಸಿನಿಮಾದಲ್ಲಿ ನಟಿಸಿರುವ ಅದಾ ಶರ್ಮಾ ಅವರು ಕೇರಳದಿಂದ ಕಾಣೆಯಾದ 32,000 ಮಹಿಳೆಯರಲ್ಲಿ ಓರ್ವರು. ಮಲಯಾಳಿ ನರ್ಸ್ ಫಾತಿಮಾ ಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೈಜ ಘಟನೆಗಳನ್ನಾಧರಿಸಿ ''ದಿ ಕೇರಳ ಸ್ಟೋರಿ'' ಮಾಡಲಾಗಿದೆ. ಸಾಕಷ್ಟು ರಿಸರ್ಚ್​​ ಮಾಡಿಯೇ ಈ ಸಿನಿಮಾ ಮಾಡಲಾಗಿದೆ. ಸತ್ಯವನ್ನು ಹೊರತರುವ ಪ್ರಯತ್ನ ಎಂದು ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಈ ಹಿಂದೆ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.