ETV Bharat / entertainment

'ಹೀರೋನೂ ನಾನೇ, ಆ್ಯಕ್ಷನ್​ ಕಟ್​ ಕೂಡ ನಂದೇ!': ತಮ್ಮ ಚಿತ್ರಗಳಿಗೆ ನಿರ್ದೇಶಕರಾದ ಭಾರತೀಯ ನಟರಿವರು..

Actors becoming directors for their films: ಭಾರತೀಯ ಚಿತ್ರರಂಗದಲ್ಲಿ ಅನೇಕ ನಟರು ನಿರ್ದೇಶನವನ್ನು ಮಾಡುತ್ತಿದ್ದಾರೆ. ನಟನೆಯ ಜೊತೆಗೆ ಆಕ್ಷನ್​ ಕಟ್​ ಹೇಳಿ ತಮ್ಮ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಿದ್ದಾರೆ.

Actors becoming directors for their films
ನಿರ್ದೇಶಕರಾದ ಭಾರತೀಯ ನಟರು
author img

By ETV Bharat Karnataka Team

Published : Sep 8, 2023, 3:30 PM IST

ಭಾರತೀಯ ಚಿತ್ರರಂಗದ ಸ್ಟಾರ್ ನಟರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ. ಕೆಲವೊಮ್ಮೆ ಅವರು ನಿರ್ದೇಶನವನ್ನೂ ಮಾಡುತ್ತಾರೆ. ನಟನೆಯ ಜೊತೆಗೆ ಆಕ್ಷನ್​ ಕಟ್​ ಹೇಳಿ ಸಕ್ಸಸ್​ ಕಂಡ ಅನೇಕ ನಟರು ಇದ್ದಾರೆ. ದಕ್ಷಿಣದಿಂದ ಉತ್ತರದವರೆಗೂ ಉತ್ತಮ ಬರಹಗಾರರು ಮತ್ತು ನಿರ್ದೇಶಕರಾದ ತಾರೆಯರಿದ್ದಾರೆ. ಆದರೆ, ಇವರೆಲ್ಲ ಕೆಲವು ಸಮಯದವರೆಗೆ ನಿರ್ದೇಶನವನ್ನು ಮರೆತು ಕೇವಲ ನಟನೆಯಲ್ಲೇ ತೊಡಗಿಸಿಕೊಂಡಿದ್ದರು. ಇದೀಗ ಲಾಂಗ್​ಗ್ಯಾಪ್​ನ ನಂತರ ಮತ್ತೊಮ್ಮೆ ನಿರ್ದೇಶನದ ಕ್ಯಾಪ್​ ತೊಟ್ಟು ಆಕ್ಷನ್​ ಕಟ್​ ಹೇಳಲು ರೆಡಿಯಾಗಿದ್ದಾರೆ.

ಆಕ್ಷನ್​ ಕಟ್​ ಹೇಳಲು ಧನುಷ್​ ಸಿದ್ಧ: ಕಾಲಿವುಡ್​ ಸೂಪರ್​ಸ್ಟಾರ್​ ಧನುಷ್​ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತಮ್ಮ 50ನೇ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳಲು ಸಜ್ಜಾಗಿದ್ದಾರೆ. ಪಾ.ಪಾಂಡಿ (2017) ಚಿತ್ರದ ಮೂಲಕ ಧನುಷ್​ ನಿರ್ದೇಶಕನಾಗಿ ಪದಾರ್ಪಣೆ ಮಾಡಿದರು. ಇದೀಗ ಸುಮಾರು 6 ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಉತ್ತರ ಚೆನ್ನೈ ಹಿನ್ನೆಲೆಯಲ್ಲಿ ಈ ಸಿನಿಮಾ ಆ್ಯಕ್ಷನ್​ ಡ್ರಾಮಾ ಆಗಲಿದೆ ಅನ್ನೋದು ಚಿತ್ರತಂಡದ ಮಾತು.

ಧನುಷ್​ ಅವರ ಸ್ವ-ನಿರ್ದೇಶನದ ಚಿತ್ರ ಸದ್ಯ ಶೂಟಿಂಗ್​ ಹಂತದಲ್ಲಿದೆ. ಈ ಸಿನಿಮಾವನ್ನು ಸನ್​ ಪಿಕ್ಷರ್ಸ್​ ನಿರ್ಮಿಸುತ್ತಿದ್ದು, 2024 ರಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯುವ ನಟ ಸಂದೀಪ್​ ಕಿಶನ್​, ಅನಿಖಾ ಸುರೇಂದ್ರನ್​, ಎಸ್​ಜೆ ಸೂರ್ಯ, ವಿಷ್ಣು ವಿಶಾಲ್​, ವರಲಕ್ಷ್ಮಿ ಶರತ್​ಕುಮಾರ್​ ಮುಂತಾದ ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕನ ಕ್ಯಾಪ್​ ತೊಟ್ಟ ಉಪೇಂದ್ರ: ರಿಯಲ್​ ಸ್ಟಾರ್​ ಉಪೇಂದ್ರ ಅವರಿಗೆ ತೆಲುಗಿನಲ್ಲಿ ಭಾರಿ ಕ್ರೇಜ್​ ಇದೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. 'ಶ್​..! (1993', 'ಓಂ (1995', 'ಉಪೇಂದ್ರ (1999)' ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದಾರೆ. ಜೊತೆಗೆ ಈ ಮೂರು ಸಿನಿಮಾಗಳಲ್ಲಿ ಅವರೇ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲಿ ಸೂಪರ್​ ಹಿಟ್​ ಆಗಿರುವ ಈ ಸಿನಿಮಾಗಳು ತೆಲುಗಿಗೆ ಡಬ್​ ಆಗಿ, ಅಲ್ಲಿನ ಪ್ರೇಕ್ಷಕರ ಮನಗೆದ್ದಿವೆ.

ಆದರೆ, 2015ರಲ್ಲಿ ಬಿಡುಗಡೆಯಾದ ಇವರ ನಿರ್ದೇಶನದಲ್ಲೇ ಮೂಡಿಬಂದ 'ಉಪ್ಪಿ 2' ಚಿತ್ರದ ನಂತರ ನಿರ್ದೇಶನಕ್ಕೆ ಕೊಂಚ ಬ್ರೇಕ್​ ಕೊಟ್ಟರು. ಇದೀಗ ಮತ್ತೆ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಟೈಟಲ್​ನಿಂದಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ UI (ಯುಐ) ಸಿನಿಮಾಗೆ ಇವರೇ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದ ಶೂಟಿಂಗ್​ ಕೂಡ ಸೈಲೆಂಟ್​ ಆಗಿಯೇ ಮುಕ್ತಾಯಗೊಂಡಿದೆ. ಸದ್ಯ ಪೋಸ್ಟ್​ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಇದನ್ನೂ ಓದಿ: 'ಯು ಐ ಚಿತ್ರದ ಪ್ರಮೋಷನ್‌ ಯಾಕೆ ಮಾಡಬೇಕು?': ನಿರ್ಮಾಪಕರಿಗೆ ಟಾಂಗ್ ಕೊಟ್ಟ ರಿಯಲ್ ಸ್ಟಾರ್

ಕಿಚ್ಚ ಸುದೀಪ್​ ನಿರ್ದೇಶನ: ಸ್ಯಾಂಡಲ್​ವುಡ್​ ಬಾದ್​ ಶಾ ಕಿಚ್ಚ ಸುದೀಪ್​ ಅವರು ಒಬ್ಬ ಅದ್ಭುತ ನಟ ಮತ್ತು ನಿರ್ದೇಶಕ. ಈವರೆಗೆ ಆರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರು 'ಮೈ ಆಟೋಗ್ರಾಫ್​ (2006)' ಮತ್ತು 'ಮಾಣಿಕ್ಯ (2014)'ನಂತಹ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಸುಮಾರು 9 ವರ್ಷಗಳ ನಂತರ ಇದೀಗ ಮತ್ತೊಮ್ಮೆ ಸುದೀಪ್​ ಆ್ಯಕ್ಷನ್​ ಕಟ್​ ಹೇಳಲು ಸಜ್ಜಾಗಿದ್ದಾರೆ. 'ಕೆಕೆ' ಎಂಬ ಶೀರ್ಷಿಕೆಯಿಂದಲೇ ಚಿತ್ರವು ಹೆಚ್ಚು ಸದ್ದು ಮಾಡುತ್ತಿದೆ.

ಈಗಾಗಲೇ ಕಿಚ್ಚ ಸುದೀಪ್​ ಬರ್ತ್​ಡೇ ದಿನ 'ಕೆಕೆ' ಪೋಸ್ಟರ್​ ಕೂಡ ಬಿಡುಗಡೆಯಾಗಿದೆ. ಪೋಸ್ಟರ್​ ಕೆಳಗೆ 'GOD FORGIVES I DON T- KING KICHCHA' ಎಂಬ ಟ್ಯಾಗ್ ಲೈನ್ ಕೂಡ ಇದೆ. ಕೆ.ಆರ್.ಜಿ ಸ್ಟುಡಿಯೋದ ಕಾರ್ತಿಕ್​ ಹಾಗೂ ಯೋಗಿ.ಜಿ.ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾದ ಎಲ್ಲ ಕೆಲಸಗಳು 2024ರಿಂದ ಪ್ರಾರಂಭವಾಗಲಿದೆ.

ಫರ್ಹಾನ್​ ಅಖ್ತರ್​ ಸಿನಿಮಾ: ಬಾಲಿವುಡ್​ ಸ್ಟಾರ್​ ನಟ ಫರ್ಹಾನ್​ ಅಖ್ತರ್​ 'ದಿಲ್​ ಚಾಹ್​ ತಾ ಹೈ (2001)' ಚಿತ್ರದ ಮೂಲಕ ಬರಹಗಾರ ಮತ್ತು ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಡಾನ್​:ದಿ ಚೇಸ್​ ಬಿಗಿನ್ಸ್​' ಮತ್ತು ಡಾನ್​ 2: ದಿ ಕಿಂಗ್​ ಈಸ್​ ಬ್ಯಾಕ್​' ಸಿನಿಮಾಗಳನ್ನು ನಿರ್ದೇಶಿಸಿರುವ ಅವರು ನಿರ್ದೇಶಕರಾಗಿ ಚಿತ್ರರಂಗದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಅದಾಗಿ ನಟನೆಯಲ್ಲೇ ಕೊಂಚ ಬ್ಯುಸಿಯಾದ ಫರ್ಹಾನ್​ ನಂತರದಲ್ಲಿ ಯಾವುದೇ ಸಿನಿಮಾ ನಿರ್ದೇಶಿಸಿರಲಿಲ್ಲ.

ಆದರೆ ಹತ್ತು ವರ್ಷಗಳ ನಂತರ 2021ರಲ್ಲಿ ಫರ್ಹಾನ್​ ಅವರು 'ಜಿ ಲೆ ಜರಾ' ಚಿತ್ರವನ್ನು ನಿರ್ದೇಶಿಸುವುದಾಗಿ ಬಹಿರಂಗಪಡಿಸಿದರು. ಸದ್ಯ ಈ ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಆಲಿಯಾ ಭಟ್​, ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಶೂಟಿಂಗ್​ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಇದೀಗ ಫರ್ಹಾನ್​ 'ಡಾನ್​ 3' ಸಿನಿಮಾ ಅನೌನ್ಸ್​ ಮಾಡಿದ್ದಾರೆ. ರಣ್​ವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಶೂಟಿಂಗ್​ ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಕೆ.ಆರ್​.ಜಿ ಸ್ಟುಡಿಯೋಸ್​ ಜೊತೆ ಕಿಚ್ಚ ಸಿನಿಮಾ; 9 ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್​ ತೊಟ್ಟ ಸುದೀಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.