ETV Bharat / entertainment

ಕೆಜಿಎಫ್​, ಚಾರ್ಲಿ, ಆರ್​ಆರ್​ಆರ್ ದಾಖಲೆ ಬ್ರೇಕ್​ ಮಾಡಿದ ಕಾಂತಾರ - Kantara collection

ಥಿಯೇಟರ್​​​ನಲ್ಲಿ ಅಬ್ಬರಿಸುತ್ತಿರೋ ಕಾಂತಾರ ಸಿನಿಮಾ ಐಎಂಡಿಬಿನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

IMDB rate on Kantara movie
ಕಾಂತಾರ ಐಎಂಡಿಬಿ ರೇಟಿಂಗ್
author img

By

Published : Oct 14, 2022, 7:52 PM IST

ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗಾಗಲೇ ಸ್ಯಾಂಡಲ್‌ವುಡ್​ನಲ್ಲಿ ಸೂಪರ್ ಹಿಟ್ ಆಗಿ ಬೇರೆ ಭಾಷೆಗಳಲ್ಲಿಯೂ ಅಬ್ಬರಿಸುತ್ತಿದೆ. ಇಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ಶೀಘ್ರದಲ್ಲೇ ತೆರೆಕಾಣಲಿದೆ. ಇದೀಗ ಈ ಸಿನಿಮಾ IMDBನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನ ಚಿತ್ರವಾಗಿ ಹೊರಹೊಮ್ಮಿದೆ.

ಕಾಂತಾರ ಚಿತ್ರವನ್ನು ನಟ ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಶಿವ ಎನ್ನುವ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಚಿತ್ರದ ಕೊನೆಯಲ್ಲಿ ದೈವ ಪಾತ್ರಧಾರಿಯಾಗಿ ಅಬ್ಬರಿಸಿದ್ದಾರೆ. ಸಿನಿಮಾ ಎಲ್ಲೆಡೆ ಬಲು ಮೆಚ್ಚುಗೆ ಗಳಿಸುತ್ತಿದೆ. IMDBಯ ಇತ್ತೀಚಿನ ವರದಿ ಪ್ರಕಾರ, ಕಾಂತಾರ 10ರಲ್ಲಿ 9.6 ಸ್ಕೋರ್ ಮಾಡಿದೆ.

ಇದನ್ನೂ ಓದಿ: ಕರಾವಳಿಯಲ್ಲೇ 6 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ 10 ಕೋಟಿ ವೆಚ್ಚದ 'ಕಾಂತಾರ'

ಈ ಮೂಲಕ ಕಾಂತಾರ ಕೆಲ ದೊಡ್ಡ ಬ್ಲಾಕ್‌ ಬಸ್ಟರ್‌ ಸಿನಿಮಾಗಳ ದಾಖಲೆಗಳನ್ನು ಬ್ರೇಕ್​ ಮಾಡಿದೆ. ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಸಿನಿಮಾ 9.0, ಕಮಲ್ ಹಾಸನ್ ಅವರ ವಿಕ್ರಮ್ ಮತ್ತು ಯಶ್ ಅವರ ಕೆಜಿಎಫ್ ಚಾಪ್ಟರ್ 2 ಸಿನಿಮಾ 8.4, ಆರ್​ಆರ್​ಆರ್​ 8 ಅಂಕ ಗಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.