ಮರ್ಡರ್ ಮಿಸ್ಟರಿ ಕಥೆಯೊಂದಿಗೆ ಬಹಳ ವರ್ಷಗಳ ಬಳಿಕ ನಿರ್ದೇಶಕ ಶ್ರೀನಿವಾಸರಾಜು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹುಬ್ಬಳ್ಳಿ ಡಾಬಾ ಚಿತ್ರದ ಟೈಟಲ್. ಹೊಸ ಪ್ರತಿಭೆಗಳಾದ ನವೀನ್ ಚಂದ್ರ, ದಿವ್ಯ ಪಿಳ್ಳೈ ಅಭಿನಯದ ಈ ಸಿನಿಮಾವನ್ನು ನಿರ್ದೇಶಕ ಶ್ರೀನಿವಾಸರಾಜ್ ನಿರ್ದೇಶಿಸಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೋ ಹುಬ್ಬಳ್ಳಿ ಡಾಬಾ ಸಿನಿಮಾದ ಐಟಂ ಸಾಂಗ್ ಅನ್ನು ಚಿತ್ರತಂಡ ಇಂದು ರಿಲೀಸ್ ಮಾಡಿದೆ.
ಚರಣ್ ಅರ್ಜುನ್ ಸಂಗೀತ ನೀಡಿರುವ ಹುಬ್ಬಳ್ಳಿ ಡಾಬಾ ಚಿತ್ರದ ತಗ್ಗೋದಿಲ್ಲ ಹಾಡು ಆದಿತ್ಯ ಮ್ಯೂಸಿಕ್ನಲ್ಲಿ ಬಿಡುಗಡೆಯಾಗಿದೆ. ಡಾ.ವಿ. ನಾಗೇಂದ್ರಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಮೋಹನ ಭೋಗರಾಜು ಹಾಡಿರುವ ಈ ಹಾಡು ಮೆಚ್ಚುಗೆ ಪಡೆಯುತ್ತಿದೆ. ಮುಂಬೈ ಬೆಡಗಿ ಅನನ್ಯ ಸೇನ್ ಗುಪ್ತ ಈ ಹಾಡಿಗೆ ಸೊಂಟ ಬಳುಕಿಸಿದ್ದಾರೆ.
ನವೀನ್ ಚಂದ್ರ, ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ, ರವಿಶಂಕರ್, ರಾಜಾ ರವೀಂದರ್, ಅಯ್ಯಪ್ಪ ಶರ್ಮ, ನಾಗಾ ಬಾಬು, ಪೃಥ್ವಿ, ಪೂಜಾ ಗಾಂಧಿ, ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಮುನಿರಾಜು, ಜೈದೇವ್ ಮೋಹನ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
- " class="align-text-top noRightClick twitterSection" data="">
ದಂಡುಪಾಳ್ಯ, ಶಿವಂ ಸಿನಿಮಾಗಳ ಮೂಲಕ ತನ್ನದೇ ಐಡೆಂಟಿಟಿ ಹೊಂದಿರುವ ಶ್ರೀನಿವಾಸರಾಜು ನಿರ್ದೇಶನದ 10ನೇ ಚಿತ್ರವಿದು. ನಿರ್ದೇಶಕರೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಹುಬ್ಬಳ್ಳಿ ಡಾಬಾ ಚಿತ್ರ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ.
ಇದನ್ನೂ ಓದಿ: ರಾಣಾ ಹುಟ್ಟುಹಬ್ಬಕ್ಕೆ ಶೀರ್ಷಿಕೆಯಿಡದ ಹೊಸ ಸಿನಿಮಾದ ಪೋಸ್ಟರ್ ರಿಲೀಸ್
ವೆಂಕಟ್ ಪ್ರಸಾದ್ ಛಾಯಾಗ್ರಹಣ, ಗ್ಯಾರಿ ಬಿ.ಹೆಚ್ ಸಂಕಲನ ಹಾಗೂ ವೆಂಕಟ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಭದ್ರಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು, ನವೆಂಬರ್ 4ರಂದು ತೆರೆಗೆ ಬರಲಿದೆ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ.