ಹೈದರಾಬಾದ್: ತಮ್ಮ ಹೊಸ ಗರ್ಲ್ಫ್ರೆಂಡ್ ಸಬಾ ಆಜಾದ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ವಿಶ್ ಮಾಡಿದ್ದಾರೆ. ಇಂದು (ಮಂಗಳವಾರ) 37ನೇ ವಸಂತಕ್ಕೆ ಕಾಲಿಟ್ಟ ಸಬಾಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ರೀತಿಯಲ್ಲಿ ಬರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಪ್ರತಿಯಾಗಿ ಸಬಾ ಧನ್ಯವಾದ ಹೇಳಿದ್ದಾರೆ.
ಮೈಕ್‌ನೊಂದಿಗೆ ಪೋಸ್ ನೀಡುತ್ತಿರುವ ಸಾಬಾ ಆಜಾದ್ ಫೋಟೋ ಹಂಚಿಕೊಂಡಿರುವ ಹೃತಿಕ್, "ನಿಮ್ಮ ಲಯ, ನಿಮ್ಮ ಧ್ವನಿ, ನಿಮ್ಮ ಅನುಗ್ರಹ, ನಿಮ್ಮ ಹೃದಯ, ನಿಮ್ಮ ಅದ್ಭುತ ಮನಸ್ಸು, ಹುಚ್ಚು ಹಿಡಿಸುವ ನಿಮ್ಮ ಚಮತ್ಕಾರದ ಹಾಡುಗಳಿಗೆ ಧನ್ಯವಾದಗಳು ಎಂದು ಮಳೆಬಿಲ್ಲು ಮತ್ತು ಹೃದಯದ ಎಮೋಜಿಗಳೊಂದಿಗೆ ಬಣ್ಣ ಬಣ್ಣದ ಮಾತುಗಳಿಂದ ಹೊಗಳಿದ್ದಾರೆ. ಶೀರ್ಷಿಕೆಯಲ್ಲಿ ಇಂದಿನ ದಿನಾಂಕವನ್ನು ಸಹ ಅವರು ಉಲ್ಲೇಖಿಸಿದ್ದಾರೆ. ಫೋಟೋದಲ್ಲಿ ತಾರೆ ಸಾಬಾ ಕ್ಯಾಶುಯಲ್ ಉಡುಪು ಧರಿಸಿರುವುದನ್ನು ಕಾಣಬಹುದು.
- " class="align-text-top noRightClick twitterSection" data="
">
ಹೃತಿಕ್ ರೋಷನ್ ಅವರ ಈ ಪೋಸ್ಟ್ ಅನ್ನು ಗಮನಿಸಿದ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್, ಸಬಾ ಆಜಾದ್ ಅವರನ್ನು ಟ್ಯಾಗ್ ಮಾಡಿ "ಅಯ್ಯೋ, ಜನ್ಮದಿನದ ಶುಭಾಶಯಗಳು ಸಬ್ಜಿ" ಎಂದು ಬರೆದಿದ್ದಾರೆ. ಇವರಷ್ಟೇ ಅಲ್ಲದೆ ಹೃತಿಕ್ ಅಭಿಮಾನಿಗಳು ಹೃದಯ ಮತ್ತು ಫೈರ್ ಎಮೋಜಿಗಳ ಮೂಲಕ ತಮ್ಮ ಪ್ರೀತಿಯನ್ನು ಸುರಿದ್ದಾರೆ.
ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಬಿ ಟೌನ್‌ನಲ್ಲಿ ಮುದ್ದಾದ ಜೋಡಿಗಳಲ್ಲಿ ಒಂದು. ಇವರು ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದು ಆಗಾಗ ಪಾರ್ಟಿ ಮತ್ತು ಡಿನ್ನರ್ಗಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಇಬ್ಬರು ಕೈಕೈ ಹಿಡಿದುಕೊಂಡು ರೆಸ್ಟೋರೆಂಟ್ವೊಂದರಿಂದ ಒಟ್ಟಿಗೆ ಹೊರ ಬರುತ್ತಿದ್ದ ಫೋಟೋ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿತ್ತು. ಹೃತಿಕ್ ಅವರಿಗಿಂತ 16 ವರ್ಷ ಚಿಕ್ಕವಳಾಗಿರುವ ಸಬಾ ಆಜಾದ್, ಸಂಗೀತ ಮತ್ತು ನಟನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ನಿರ್ಮಾಪಕ ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ಹೃತಿಕ್ ಜೊತೆ ಆಗಮಿಸಿದ್ದ ಸಬಾ ಮೊದಲ ಬಾರಿಗೆ ಮಾಧ್ಯಮಗಳಿಗೆ ನೇರವಾಗಿ ಪೋಸ್ ನೀಡಿದ್ದರು. ದೆಹಲಿಯಲ್ಲಿ ಬೆಳೆದ ಸಬಾ ಮುಂಬೈಗೆ ಕನಸು ಹೊತ್ತು ಬಂದವರು. ನಟನೆಯ ಜೊತೆಗೆ ಅವರು ಉತ್ತಮ ಡ್ಯಾನ್ಸರ್ ಕೂಡ ಹೌದು.
ಇದನ್ನು ಓದಿ: 49ನೇ ವರ್ಷಕ್ಕೆ ಕಾಲಿಟ್ಟ ಮಾಜಿ ವಿಶ್ವಸುಂದರಿ; ಐಶ್ವರ್ಯಾ ರೈ ಬಚ್ಚನ್‌ಗೆ ಶುಭಾಶಯಗಳ ಸುರಿಮಳೆ