ETV Bharat / entertainment

ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಸುಂದರ ಕ್ಷಣ: ನೆಟ್ಟಿಗರಿಗೆ ನೆನಪಾದ ಕಂಗನಾ ರಣಾವತ್ - ಹೃತಿಕ್ ಸಬಾ ಟ್ರೋಲ್

ಸಬಾ ಆಜಾದ್ ಅಭಿನಯದ ರಾಕೆಟ್ ಬಾಯ್ಸ್ 2ರ ಸ್ಪೆಶಲ್​ ಶೋಗೆ ನಟ ಹೃತಿಕ್ ರೋಷನ್ ಭಾಗಿಯಾಗಿದ್ದರು.

Hrithik Roshan joins GF Saba Azad
ಸಬಾ ಆಜಾದ್ ಜೊತೆ ಹೃತಿಕ್ ರೋಷನ್
author img

By

Published : Mar 11, 2023, 12:37 PM IST

ಶುಕ್ರವಾರ ಸಂಜೆ ಬಾಲಿವುಡ್ ಸೂಪರ್‌ ಸ್ಟಾರ್ ಹೃತಿಕ್ ರೋಷನ್ ರಾಕೆಟ್ ಬಾಯ್ಸ್ 2ರ ವಿಶೇಷ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ಎಂದಿನಂತೆ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡ ನಟನ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಿದೆ. ಸೋನಿ ಲೈವ್​​ನ ಸೀರಿಸ್ ರಾಕೆಟ್ ಬಾಯ್ಸ್ 2ರ ಸ್ಪೆಷಲ್​ ಶೋಗೆ ವಿಕ್ರಮ್ ವೇದ ಸ್ಟಾರ್ ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಆಜಾದ್ ಅವರೊಂದಿಗೆ ಕೂಲ್ ಲುಕ್​ನಲ್ಲಿ ಕಾಣಿಸಿಕೊಂಡರು. ನಟಿ ಸಬಾ ಆಜಾದ್ ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಶುಕ್ರವಾರ ಮುಂಬೈನಲ್ಲಿ ನಡೆದ ರಾಕೆಟ್ ಬಾಯ್ಸ್ 2 ಸ್ಕ್ರೀನಿಂಗ್‌ನಲ್ಲಿ ಬ್ಲ್ಯಾಕ್​ ಸೂಟ್​ನಲ್ಲಿ ನಟ ಹೃತಿಕ್ ರೋಷನ್ ಗಮನ ಸೆಳೆದರು. ಗೆಳತಿ ಸಬಾ ಆಜಾದ್ ಅವರೊಂದಿಗೆ ಪಾಪರಾಜಿಗಳ ಕ್ಯಾಮರಾಗೆ ಪೋಸ್​ ಕೊಟ್ಟರು. ಸಬಾ ಆಜಾದ್ ಮತ್ತು ಹೃತಿಕ್ ರೋಷನ್ ಅವರ ಕೆಮಿಸ್ಟ್ರಿ ಸಖತ್ ವರ್ಕ್​​ ಔಟ್​ ಅದಂತೆ ಕಾಣುತ್ತಿತ್ತು. ಇಬ್ಬರೂ ಜೋಡಿಯಾಗಿ ಎಲ್ಲರ ಮನ ಸೆಳೆಯುವಲ್ಲಿ ಸಫಲರಾದರು. ಈ ಚಿತ್ರಗಳನ್ನು ನೋಡಿದ ನೆಟ್ಟಿಗರು ಮಾಜಿ ಗೆಳತಿ ಎಂದು ಹೇಳಲಾದ ನಟಿ ಕಂಗನಾ ರಣಾವತ್​ ಅವರನ್ನು ನೆನಪಿಸಿಕೊಂಡಿದ್ದಾರೆ.

ರಾಕೆಟ್ ಬಾಯ್ಸ್ 2 ಸ್ಕ್ರೀನಿಂಗ್‌ ಪ್ರೋಗ್ರಾಮ್​ನಿಣದ ಹೃತಿಕ್ ರೋಷನ್ ಮತ್ತು ಸಬಾ ಅಜಾದ್​ ಅವರ ವಿಡಿಯೋವನ್ನು ಪಾಪರಾಜಿಯೊಬ್ಬರು ಹಂಚಿಕೊಂಡಿದ್ದಾರೆ. ಅಚ್ಚರಿಯೆಂದರೆ, ನೆಟ್ಟಿಗರು ನಟಿ ಕಂಗನಾ ರಣಾವತ್​ ಅವರನ್ನು ಸಬಾರಿಗೆ ಹೋಲಿಸುತ್ತಿದ್ದಾರೆ. ಈ ಜೋಡಿಯ ವಿಡಿಯೋ ಟ್ರೋಲಿಗರ ಆಹಾರವಾಗಿದೆ. "ಕಂಗನಾ ವೈಬ್ಸ್ ಆ ರಹೀ ಹೈ ಇಸ್ಸ್ ಲಡ್ಕಿ ಸೆ" (ಈ ಹುಡುಗಿಯಿಂದ ಕಂಗನಾರ ವೈಬ್ಸ್​ ಬರುತ್ತಿದೆ) ಎಂದು ಓರ್ವ ಬಳಕೆದಾರ ಬರೆದಿದ್ದರೆ, ಮತ್ತೊಬ್ಬರು "ಸಸ್ತಿ ಕಂಗನಾ ಲಗ್ ರಹೀ ಹೈ" (ಕಂಗನಾ ಎಂದೇ ಅನಿಸುತ್ತಿದೆ) ಎಂದು ಹೇಳಿದರು. ಸಬಾ ಅವರನ್ನು ಕಂಗನಾ ರಣಾವತ್ ಅವರೊಂದಿಗೆ ಹೋಲಿಸುತ್ತಿರುವುದು ವಿಲಕ್ಷಣವಾಗಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಒಂದು ವರ್ಗದ ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಬಾರನ್ನು ಟ್ರೋಲ್ ಮಾಡುತ್ತಿರುವಾಗ, ಕೆಲವರು ಬೆಂಬಲವನ್ನು ವ್ಯಕ್ತಪಡಿಸಿದರು, "ನಾನು ಅವರನ್ನು ಇಷ್ಟಪಡುತ್ತೇನೆ. ಅವರು ಯಾವಾಗಲೂ ರೆಟ್ರೋ ವೈಬ್‌ಗಳನ್ನು ನೀಡುತ್ತಾರೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಿ ಆಸ್ಕರ್​ ಸಮಾರಂಭ.. ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡ ಜೂ.​ ಎನ್​ಟಿಆರ್​​

ನಟ ಹೃತಿಕ್ ರೋಷನ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಾಗಿ ಹೃತಿಕ್ ರೋಷನ್ ಖ್ಯಾತ ಫಿಟ್ನೆಸ್ ತರಬೇತುದಾರ ಕ್ರಿಸ್ ಗೆಥಿನ್ (Kris Gethin) ಅವರ ಬಳಿ 12 ವಾರಗಳ ಕಾಲ ತರಬೇತಿ ಪಡೆದಿದ್ದಾರೆ. 2024ರ ಜನವರಿ 25ರಂದು ಈ ಚಿತ್ರ ಬಿಡುಗಡೆ ಆಗಲಿದ್ದು, ಚಿತ್ರೀಕರಣ ಮುಂದುವರಿದಿದೆ.

ಇದನ್ನೂ ಓದಿ: ಟಾಲಿವುಡ್​ನಲ್ಲಿ ಬೆಳೆಯುತ್ತಿರುವ ಕರುನಾಡ ಕುಡಿ.. 'ಇಂಟಿಂಟಿ ರಾಮಾಯಣಂ' ಸಿನಿಮಾಗೆ ನವ್ಯಾ ನಾಯಕಿ

ಕಳೆದ ಕೆಲ ಸಮಯದಿಂದ ಹೃತಿಕ್ ರೋಷನ್​ ಮತ್ತು ಸಬಾ ಆಜಾದ್ ಡೇಟಿಂಗ್ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗಿ ಈ ಜೋಡಿ ಪಾಪರಾಜಿಗಳ ಕಣ್ಣಿಗೆ ಬಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಹೃತಿಕ್ ರೋಷನ್​ ಈ ಹಿಂದೆ ಇಂಟಿರಿಯರ್ ಡಿಸೈನರ್ ಸುಸೇನ್ ಖಾನ್ ಅವರನ್ನು ವಿವಾಹವಾಗಿದ್ದರು. 2014ರಲ್ಲಿ ವಿಚ್ಛೇದನ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.