'ಕೆಜಿಎಫ್ ಚಾಪ್ಟರ್ 1' ಕನ್ನಡ ಚಿತ್ರರಂಗ ಮರೆಯಲಾಗದ ಸಿನಿಮಾ. ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ನತ್ತ ಗಮನ ಕೇಂದ್ರೀಕರಿಸುವಂತೆ ಮಾಡಿದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಮಾತ್ರವಲ್ಲದೇ ಕನ್ನಡ ಸಿನಿಮಾ ರಂಗವನ್ನು ಉತ್ತುಂಗಕ್ಕೇರಿಸಿದ ಸೂಪರ್ ಹಿಟ್ ಸಿನಿಮಾವಿದು.
2018ರ ಡಿಸೆಂಬರ್ 21ರಂದು ಚಿತ್ರ ಬಿಡುಗಡೆ ಆಗಿ ಥಿಯೇಟರ್ಗಳಲ್ಲಿ ಧೂಳೆಬ್ಬಿಸಿತ್ತು. ರಾಕಿಂಗ್ ಸ್ಟಾರ್ ಯಶ್ ಆ್ಯಕ್ಷನ್ ಸನ್ನಿವೇಶಗಳು, ಸೆಂಟಿಮೆಂಟ್ ಸೀನಗಳಂತೂ ಈಗಲೂ ಅಭಿಮಾನಿಗಳ ಕಣ್ಮುಂದೆ ಇದೆ. ಅದರ ಮುಂದುವರಿದ ಭಾಗ ಕೆಜಿಎಫ್ ಚಾಪ್ಟರ್ 2 ಕೂಡ ನಿರೀಕ್ಷೆಗೂ ಮೀರಿ ಸಿನಿ ಅಂಗಳದಲ್ಲಿ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೇ ಇತರೆ ಭಾಷೆಯಲ್ಲೂ ಅಬ್ಬರಿಸಿತು. ಡಿಸೆಂಬರ್ 21 ಅಂದರೆ ನಿನ್ನೆಗೆ ಈ ಚಿತ್ರ ಬಿಡುಗಡೆ ಆಗಿ 4 ವರ್ಷ ತುಂಬಿದೆ. ಈ ದಿನವನ್ನು ನೆನೆದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹರ್ಷ ವ್ಯಕ್ತಪಡಿಸಿದೆ.
-
This date and the movie has a special place in our heart. We imagined, we believed, we conquered. Thank You for the countless memories & making this dream possible!#KGFChapter1 #4YearsForKGFChapter1 #4YearsForGameChangerKGF pic.twitter.com/z2dDdAfRO1
— Hombale Films (@hombalefilms) December 21, 2022 " class="align-text-top noRightClick twitterSection" data="
">This date and the movie has a special place in our heart. We imagined, we believed, we conquered. Thank You for the countless memories & making this dream possible!#KGFChapter1 #4YearsForKGFChapter1 #4YearsForGameChangerKGF pic.twitter.com/z2dDdAfRO1
— Hombale Films (@hombalefilms) December 21, 2022This date and the movie has a special place in our heart. We imagined, we believed, we conquered. Thank You for the countless memories & making this dream possible!#KGFChapter1 #4YearsForKGFChapter1 #4YearsForGameChangerKGF pic.twitter.com/z2dDdAfRO1
— Hombale Films (@hombalefilms) December 21, 2022
''ಈ ದಿನಾಂಕ ಮತ್ತು ಚಲನಚಿತ್ರವು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾವು ಊಹಿಸಿದ್ದೇವೆ, ನಾವು ನಂಬಿದ್ದೇವೆ, ನಾವು ಗೆದ್ದಿದ್ದೇವೆ. ಲೆಕ್ಕವಿಲ್ಲದಷ್ಟು ನೆನಪುಗಳು ಮತ್ತು ಈ ಕನಸನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು'' ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
-
This date and the movie has a special place in our heart. We imagined, we believed, we conquered. Thank You for the countless memories & making this dream possible!#KGFChapter1 #4YearsForKGFChapter1 #4YearsForGameChangerKGF pic.twitter.com/z2dDdAfRO1
— Hombale Films (@hombalefilms) December 21, 2022 " class="align-text-top noRightClick twitterSection" data="
">This date and the movie has a special place in our heart. We imagined, we believed, we conquered. Thank You for the countless memories & making this dream possible!#KGFChapter1 #4YearsForKGFChapter1 #4YearsForGameChangerKGF pic.twitter.com/z2dDdAfRO1
— Hombale Films (@hombalefilms) December 21, 2022This date and the movie has a special place in our heart. We imagined, we believed, we conquered. Thank You for the countless memories & making this dream possible!#KGFChapter1 #4YearsForKGFChapter1 #4YearsForGameChangerKGF pic.twitter.com/z2dDdAfRO1
— Hombale Films (@hombalefilms) December 21, 2022
ಇದನ್ನೂ ಓದಿ: 'ಯಶ್ ಈಸ್ ವಾವ್..': ಕೆಜಿಎಫ್ ಸ್ಟಾರ್ ಬಗ್ಗೆ ಶಾರುಖ್ ಖಾನ್ ಮೆಚ್ಚುಗೆಯ ನುಡಿ
ಪ್ರಶಾಂತ್ ನೀಲ್ ನಿರ್ದೇಶನದ ಈ ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಮೋಡಿ ಮಾಡಿದ್ದರು. ಅದ್ಭುತ ಅಭಿನಯದಿಂದ ಯಶ್ ಕೀರ್ತಿ ಹೆಚ್ಚುವುದರ ಜೊತೆಗೆ ಪ್ರಶಾಂತ್ ನೀಲ್ ಪ್ರತಿಭೆ ಮತ್ತೊಮ್ಮೆ ಸಾಬೀತಾಯಿತು. ಇನ್ನೂ ಚೊಚ್ಚಲ ಸಿನಿಮಾದಲ್ಲೇ ಶ್ರೀನಿಧಿ ಶೆಟ್ಟಿ ಪ್ರೇಕ್ಷಕರ ಮನ ಗೆದ್ದಿದ್ದು ಸುಳ್ಳಲ್ಲ. ಈಗವರು ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ.
ಇದನ್ನೂ ಓದಿ: 2022ರಲ್ಲಿ ಬಿಡುಗಡೆಯಾದ ಸ್ಯಾಂಡಲ್ವುಡ್ ಪ್ಯಾನ್ ಇಂಡಿಯಾ ಚಿತ್ರಗಳ ಡೀಟೆಲ್ಸ್ ನಿಮಗಾಗಿ..