ETV Bharat / entertainment

ವಸಿಷ್ಠ ಸಿಂಹರ ಲವ್ ಲಿ ಸಿನಿಮಾ‌ ಅಡ್ಡಕ್ಕೆ ಸರ್​ಪ್ರೈಸ್ ಭೇಟಿ ಕೊಟ್ಟ ಭಾವಿ ಪತ್ನಿ - haripriya to love le movie

ನಟ ವಸಿಷ್ಠ ಸಿಂಹ ಅವರ ಲವ್ ಲಿ ಸಿನಿಮಾ‌ ಶೂಟಿಂಗ್​ ಸ್ಪಾಟ್​ಗೆ ನಟಿ ಹರಿಪ್ರಿಯಾ ಭೇಟಿ ಕೊಟ್ಟಿದ್ದಾರೆ.

haripriya surprise entry to love le movie
ಲವ್ ಲಿ ಸಿನಿಮಾ‌ ಅಡ್ಡಕ್ಕೆ ಸರ್​ಪ್ರೈಸ್ ಭೇಟಿ ಕೊಟ್ಟ ಹರಿಪ್ರಿಯಾ
author img

By

Published : Dec 10, 2022, 12:06 PM IST

ಕನ್ನಡ ಚಿತ್ರರಂಗದಲ್ಲೀಗ ಪ್ರಣಯ ಪಕ್ಷಿಗಳು ಅಂತಾ ಕರೆಸಿಕೊಳ್ಳುತ್ತಿರುವ ಜೋಡಿ ಎಂದರೆ ಅದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ. ಕೆಲ ವರ್ಷಗಳಿಂದ ಯಾರಿಗೂ ಗೊತ್ತಿಲ್ಲದಂತೆ ಪ್ರೀತಿಸುತ್ತಿದ್ದ ಈ ಜೋಡಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಾವಿಬ್ಬರು ಲವರ್ಸ್ ಅನ್ನೋದನ್ನು ಖಚಿತಪಡಿಸಿದ್ದಾರೆ. ಹೊಸ ವರ್ಷಕ್ಕೆ ಹಸಮಣೆ ಏರಲು ರೆಡಿಯಾಗಿರೋ ಈ ಜೋಡಿ ಈಗ ಟಾಕ್ ಆಫ್ ದಿ ನ್ಯೂಸ್.

ಲವ್ ಲಿ ಸಿನಿಮಾ‌ ಅಡ್ಡಕ್ಕೆ ಸರ್​ಪ್ರೈಸ್ ಭೇಟಿ ಕೊಟ್ಟ ಹರಿಪ್ರಿಯಾ

ನಿನ್ನೆಯಷ್ಟೇ ತಮ್ಮ ಎಂಗೇಜ್​ಮೆಂಟ್ ಫೋಟೋಗಳನ್ನು ಅಧಿಕೃತವಾಗಿ ರಿವೀಲ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ‌ ಸುದ್ದಿ‌ ಕೊಟ್ಟಿದ್ದರು. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಒಟ್ಟಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಬಂದಿದ್ದಾರೆ. ಇದೀಗ ವಸಿಷ್ಠ ಸಿಂಹ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದಾದ ಲವ್ ಲಿ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದ್ದು, ಶೂಟಿಂಗ್ ಸ್ಪಾಟ್​ಗೆ ಭಾವಿ ಪತ್ನಿ ಹರಿಪ್ರಿಯಾ ಸರ್ ಪ್ರೈಸ್ ವಿಸಿಟ್​ ಕೊಟ್ಟಿದ್ದಾರೆ.

ಇನ್ನು ಹರಿಪ್ರಿಯಾರನ್ನು ವಸಿಷ್ಠ ಸಿಂಹ ಬಹಳ ಪ್ರೀತಿಯಿಂದ ರಿಸೀವ್ ಮಾಡಿಕೊಳ್ಳುವ ಮೂಲಕ ತಮ್ಮ ಲವ್ ಲಿ ಚಿತ್ರ ತಂಡಕ್ಕೆ ಪರಿಚಯ ಮಾಡಿಕೊಟ್ಟರು. ಸಾಧು ಕೋಕಿಲ, ಲವ್ ಲಿ ಚಿತ್ರದ ನಾಯಕಿ ನಟಿ ಸೇರಿದಂತೆ ಇಡೀ ಲವ್ ಲಿ ಚಿತ್ರತಂಡಕ್ಕೆ ಭಾವಿ ಪತ್ನಿಯನ್ನು ವಸಿಷ್ಠ ಸಿಂಹ ಇಂಟ್ರುಡ್ಯೂಸ್​​ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ 'ಸಿಂಹಪ್ರಿಯಾ'

ಉಡುಪಿಯ ಬೀಚ್ ಸೈಡ್​ನಲ್ಲಿ ಲವ್ ಲಿ ಚಿತ್ರತಂಡ ಮನೆಯ ಸೆಟ್ ಹಾಕಿ ಫ್ಯಾಮಿಲಿ ಸನ್ನಿವೇಶಗಳನ್ನು ನಿರ್ದೇಶಕ ಚೇತನ್ ಕೇಶವ್ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ‌.‌ ವಸಿಷ್ಠ ಸಿಂಹ, ಸಾಧುಕೋಕಿಲ, ನಟಿ ಸಮೀಕ್ಷಾ, ಕೆಲ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರಕ್ಕೆ ಚೇತನ್ ಕೇಶವ್ ನಿರ್ದೇಶನವಿದೆ.

ಇದೊಂದು ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರ ಚಿತ್ರದಲ್ಲಿದೆ. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಕಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.