ETV Bharat / entertainment

ರಾಜಸ್ಥಾನದ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಮೋಟ್ವಾನಿ: ಮದುವೆ ವಿಡಿಯೋ - ಹನ್ಸಿಕಾ ಮೋಟ್ವಾನಿ

ಬಿಂದಾಸ್‌ ಬೆಡಗಿ ಹನ್ಸಿಕಾ ಮೋಟ್ವಾನಿ ಹಾಗೂ ಸೊಹೈಲ್ ಕಥುರಿಯಾ ವಿವಾಹ ಕಾರ್ಯಕ್ರಮ ನಿನ್ನೆ ರಾಜಸ್ಥಾನದ ಮುಂಡೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ನೆರವೇರಿತು.

hansika motwani wedding celebrations
ಹಸ್ಸಿಕಾ ಮೋಟ್ವಾನಿ ಮದುವೆ ಸಮಾರಂಭ
author img

By

Published : Dec 5, 2022, 8:46 AM IST

ಜೈಪುರ(ರಾಜಸ್ಥಾನ): ತೆಲುಗು ಚಿತ್ರರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಕಥುರಿಯಾ ವಿವಾಹ ಸಮಾರಂಭವು ಜೈಪುರ ಸಮೀಪದ ಮಂಡೋಟಾ ಕೋಟೆಯಲ್ಲಿ ಭಾನುವಾರ ಅದ್ಧೂರಿಯಾಗಿ ನೆರವೇರಿತು.

hansika motwani wedding celebrations
ಹಸ್ಸಿಕಾ ಮೋಟ್ವಾನಿ ಮದುವೆ ಸಮಾರಂಭ

ಜೈಪುರದ 450 ವರ್ಷಗಳ ಹಳೆಯ ಪುರಾತನ ಮಂಡೋಟಾ ಅರಮನೆಯಲ್ಲಿ ಮದುವೆ ಭರ್ಜರಿಯಾಗಿ ಜರುಗಿತು. ವಿವಾಹ ಸಮಾರಂಭವು ಸಂಪೂರ್ಣವಾಗಿ ಕೌಟುಂಬಿಕ ಕಾರ್ಯಕ್ರಮದಂತಿತ್ತು. ಇದೀಗ ವಿವಾಹದ ವಿಡಿಯೋವೊಂದು ಲಭ್ಯವಾಗಿದ್ದು, ಇದರಲ್ಲಿ ಹನ್ಸಿಕಾ ಸಾಂಪ್ರದಾಯಿಕ ಆಭರಣ ತೊಟ್ಟು ಪತಿ ಸೊಹೈಲ್‌ನೊಂದಿಗೆ ಕೈಹಿಡಿದು ಹೋಗುತ್ತಿದ್ದಾರೆ.

hansika motwani wedding celebrations
ಹಸ್ಸಿಕಾ ಮೋಟ್ವಾನಿ ಮದುವೆ ಸಮಾರಂಭ

ಇದನ್ನೂ ಓದಿ:ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮ.. ಬಡ ಮಕ್ಕಳಿಗೆ ಆಹ್ವಾನ

ಈ ಹಿಂದೆ ಮೆಹಂದಿ, ಸಂಗೀತ, ಹಳದಿ ಸೇರಿದಂತೆ ಬಗೆ ಬಗೆಯ ಶಾಸ್ತ್ರಗಳ ಫೋಟೋ, ವಿಡಿಯೋಗಳನ್ನು ಹನ್ಸಿಕಾ ಹಂಚಿಕೊಂಡಿದ್ದರು. ಮೆಹಂದಿ ದಿನದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದವು. ವಿವಾಹ ಮಹೋತ್ಸವದ ನಂತರ ಸ್ಟಾರ್‌ ದಂಪತಿ ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ರಿಸೆಪ್ಶನ್ ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ನಟಿ ಹನ್ಸಿಕಾ.. ಸಡಗರದ ವಿಡಿಯೋ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.