ಡಾಲಿ ಧನಂಜಯ್ ಸ್ಯಾಂಡಲ್ವುಡ್ನಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಅಂದ್ರೆ ತಪ್ಪಾಗಲ್ಲ ನೋಡಿ. ಈಗಾಗಲೇ ತಮ್ಮ ವಿಭಿನ್ನ ಪಾತ್ರಗಳಿಂದ ಮನೆ ಮಾತಾಗಿರುವ ಧನಂಜಯ್ ಅವರ ಸಿನಿ ಜರ್ನಿಯ ಸಿಲ್ವರ್ ಜೂಬ್ಲಿ ಸಂಭ್ರಮ ಬಹಳ ಜೋರಾಗಿದೆ. ಹೌದು, ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ 'ಗುರುದೇವ್ ಹೊಯ್ಸಳ' ಗೆಲ್ಲುವ ಭರವಸೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಡಾಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಡಾಲಿ ಧನಂಜಯ್ ತೆರೆ ಮೇಲೆ ಅಬ್ಬರಿಸಲಿದ್ದಾರೆ.
ಈಗಾಗಲೇ ಸಿನಿಮಾದ ಹಾಡುಗಳು, ಟೀಸರ್ ಬಿಡುಗಡೆ ಆಗಿದ್ದು, ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿರೀಕ್ಷೆ ಹೆಚ್ಚಿಸುತ್ತಲೇ ಇರುವ ಗುರುದೇವ್ ಹೊಯ್ಸಳ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ಕೆಲ ದಿನಗಳು ಬಾಕಿ ಇದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಟ್ರೇಲರ್ ಯಾವಾಗ ಬಿಡುಗಡೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಬ್ರೇಕ್ ಬಿದ್ದಿದೆ.
-
𝐆𝐮𝐫𝐮𝐝𝐞𝐯 𝐇𝐨𝐲𝐬𝐚𝐥𝐚 𝐑𝐞𝐩𝐨𝐫𝐭𝐬 𝐨𝐧 𝟐𝟎.𝟎𝟑.𝟐𝟑 𝐚𝐭 𝟕:𝟐𝟗𝐏𝐌💥#EeSalaHoysala #GurudevHoysala in theatres on 30th March.#VijayKiragandur @KRG_Studios @amrutha_iyengar @vijaycinephilia @Karthik1423 @yogigraj @AJANEESHB @yes__karthik #GurudevHoysala pic.twitter.com/TaqQ73bnsp
— Gurudev Hoysala (@Dhananjayaka) March 15, 2023 " class="align-text-top noRightClick twitterSection" data="
">𝐆𝐮𝐫𝐮𝐝𝐞𝐯 𝐇𝐨𝐲𝐬𝐚𝐥𝐚 𝐑𝐞𝐩𝐨𝐫𝐭𝐬 𝐨𝐧 𝟐𝟎.𝟎𝟑.𝟐𝟑 𝐚𝐭 𝟕:𝟐𝟗𝐏𝐌💥#EeSalaHoysala #GurudevHoysala in theatres on 30th March.#VijayKiragandur @KRG_Studios @amrutha_iyengar @vijaycinephilia @Karthik1423 @yogigraj @AJANEESHB @yes__karthik #GurudevHoysala pic.twitter.com/TaqQ73bnsp
— Gurudev Hoysala (@Dhananjayaka) March 15, 2023𝐆𝐮𝐫𝐮𝐝𝐞𝐯 𝐇𝐨𝐲𝐬𝐚𝐥𝐚 𝐑𝐞𝐩𝐨𝐫𝐭𝐬 𝐨𝐧 𝟐𝟎.𝟎𝟑.𝟐𝟑 𝐚𝐭 𝟕:𝟐𝟗𝐏𝐌💥#EeSalaHoysala #GurudevHoysala in theatres on 30th March.#VijayKiragandur @KRG_Studios @amrutha_iyengar @vijaycinephilia @Karthik1423 @yogigraj @AJANEESHB @yes__karthik #GurudevHoysala pic.twitter.com/TaqQ73bnsp
— Gurudev Hoysala (@Dhananjayaka) March 15, 2023
ಮಾರ್ಚ್ 20ಕ್ಕೆ ಟ್ರೇಲರ್ ಬಿಡುಗಡೆ: ಹೌದು, ಹೊಯ್ಸಳ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 20, ಸಂಜೆ 7.29 ನಿಮಿಷಕ್ಕೆ "ಗುರುದೇವ್ ಹೊಯ್ಸಳ" ಚಿತ್ರದ ಟ್ರೇಲರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. "ಗುರುದೇವ್ ಹೊಯ್ಸಳ" ಚಿತ್ರದ ನಾಯಕ ನಟ ಪ್ರಾಮಾಣಿಕ ಅಧಿಕಾರಿನಾ? ನಟರಾಕ್ಷಸನ ರೀತಿ ಭಯಂಕರ ಖಡಕ್ ಅಧಿಕಾರಿನಾ? ಇಲ್ಲಾ ಎನ್ಕೌಂಟರ್ ಸ್ಪೆಷಲಿಸ್ಟಾ? ಈ ಎಲ್ಲ ಪ್ರಶ್ನೆಗಳು ಸಿನಿ ಪ್ರೇಕ್ಷಕರನ್ನು ಕಾಡುತ್ತಿದ್ದು, ಟ್ರೇಲರ್ನಲ್ಲಿ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂದು ಕಾಯಬೇಕಿದೆ.
ಶೀರ್ಷಿಕೆ ಮರುನಾಮಕರಣ: ಈ ಗುರುದೇವ್ ಹೊಯ್ಸಳ ಚಿತ್ರದ ಶೀರ್ಷಿಕೆ ಮೊದಲು ಕೇವಲ 'ಹೊಯ್ಸಳ' ಎಂದು ಇತ್ತು. ಬೇರೆ ಒಂದು ಚಿತ್ರ ಇದೇ ಹೆಸರಿನಲ್ಲಿ ನಿರ್ಮಾಣ ಆಗುತ್ತಿರುವ ಹಿನ್ನೆಲೆ ಸಿನಿಮಾದ ಹೆಸರನ್ನು 'ಗುರುದೇವ್ ಹೊಯ್ಸಳ' ಎಂಬುದಾಗಿ ಮರುನಾಮಕರಣ ಮಾಡಲಾಗಿದೆ. ಶೀಘ್ರದಲ್ಲೇ ಬಿಡುಗಡೆ ಆಗಲು ಸಜ್ಜಾಗಿರುವ ಈ ಚಿತ್ರದ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ.
ಇದನ್ನೂ ಓದಿ: ಹೆಸರು ಬದಲಾಯಿಸಿದ 'ಹೊಯ್ಸಳ'.. 'ಗುರುದೇವ ಹೊಯ್ಸಳ'ನಾಗಿ ಬಿಡುಗಡೆ
ಮಾರ್ಚ್ 30ರಂದು ಸಿನಿಮಾ ತೆರೆಗೆ: ಒಂದು ಸಾಮಾಜಿಕ ಸಂದೇಶ ಹೊತ್ತಿರುವ ಪಕ್ಕಾ ಕಮರ್ಶಿಯಲ್ ಸಿನಿಮಾ ಇದಾಗಿದ್ದು, ನಿರ್ದೇಶಕ ವಿಜಯ್ ಎನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಗುರುದೇವ್ ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಬಣ್ಣ ಹಚ್ಚಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ ಜಿ ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ಗುರುದೇವ್ ಹೊಯ್ಸಳ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಒಂದು ದಿನಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತೇನೆ: ನಟ ಪವನ್ ಕಲ್ಯಾಣ್