ETV Bharat / entertainment

ಮಕ್ಕಳ ದಿನಾಚರಣೆಗೆ ನಿಮ್ಮ ಮನೆಗೆ ಗುರು ಶಿಷ್ಯರ ಜೊತೆ ಬರಲಿದ್ದಾರೆ ಶರಣ್ - ಈಟಿವಿ ಭಾರತ ಕನ್ನಡ

ಶರಣ್ ಹಾಗೂ ನಿಶ್ವಿಕಾ ನಾಯ್ಡು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ, ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಹಾಗೂ ಗುರು ಶಿಷ್ಯರು ಸಿನಿಮಾ ನ.11ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

guru-shishyaru-movie-releases-zee5-ott-on-nov-11
ಮಕ್ಕಳ ದಿನಾಚರಣೆಗೆ ನಿಮ್ಮ ಮನೆಗೆ ಗುರು ಶಿಷ್ಯರ ಜೊತೆ ಬರಲಿದ್ದಾರೆ ಶರಣ್
author img

By

Published : Nov 7, 2022, 5:23 PM IST

ನಟ ಶರಣ್ ಹಾಗೂ ನಿಶ್ವಿಕಾ ನಾಯ್ಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಗುರು ಶಿಷ್ಯರು’ ಸಿನಿಮಾ ಜೀ -5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ನಿಮಿತ್ತ ಸ್ಪೋರ್ಟ್ಸ್ ಡ್ರಾಮಾ ಕುರಿತಾದ ಗುರು ಶಿಷ್ಯರು ಸಿನಿಮಾವನ್ನು ನವೆಂಬರ್ 11ರಂದು ಜೀ 5ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕೊಕ್ಕೊ ಆಟದ ಸುತ್ತ ಹೆಣೆಯಲಾದ ಕಥಾ ಹಂದರ ಹೊಂದಿರುವ ಈ ಸಿನೆಮಾ ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆಕಂಡು ಅದ್ಭುತ ಯಶಸ್ಸು ಕಂಡಿತ್ತು.

ಸೂಪರ್ ಹಿಟ್ ಸಿನಿಮಾಗಳ ಮೂಲಕ ಜೀ 5 ಒಟಿಟಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಹೊಚ್ಚ ಹೊಸ ಸಿನಿಮಾಗಳ ಜೊತೆ ಸಾಕಷ್ಟು ಕನ್ನಡ ಸಿನಿಮಾಗಳು ಇಲ್ಲಿ ಲಭ್ಯವಿದೆ. ಸತತ ನಾಲ್ಕು ವರ್ಷದಿಂದ ಉತ್ತಮ ಕಟೆಂಟ್ ಒಳಗೊಂಡ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನ ಗೆಲ್ಲುತ್ತಿದೆ.

ಸೂಪರ್ ಹಿಟ್ ಸಿನಿಮಾಗಳಾದ ‘ವಿಕ್ರಾಂತ್ ರೋಣ’, ‘ಗಾಳಿಪಟ 2’ ಸಿನಿಮಾ ಕಡಿಮೆ ಅವಧಿಯಲ್ಲಿ ದಾಖಲೆ ವೀಕ್ಷಣೆ ಪಡೆದಿದ್ದು, ಜೀ 5 ಯಶಸ್ಸಿಗೆ ಸಾಕ್ಷಿ. ಇದೀಗ ಮತ್ತೊಂದು ಹಿಟ್ ಸಿನಿಮಾ ಜೀ5 ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಬಿಡುಗಡೆಯಾಗುತ್ತಿದೆ.

guru-shishyaru-movie-releases-zee5-ott-on-nov-11
ಗುರು ಶಿಷ್ಯರು ಸಿನಿಮಾ ನ.11ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆ

ಜೀ 5 ಒಟಿಟಿ ದಿನದಿಂದ ದಿನಕ್ಕೆ ಅಪಾರ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಬಿಡುಗಡೆಯಾಗುತ್ತಿರುವ ಪ್ರತಿ ವಿಷಯ ವಸ್ತುಗಳು ಕಡಿಮೆ ಅವಧಿಯಲ್ಲಿ ದಾಖಲೆಯ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಸೆಪ್ಟೆಂಬರ್ 2ರಂದು ಬಿಡುಡಗೆಯಾದ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಕೇವಲ 24ಗಂಟೆಯಲ್ಲೇ 500 ಮಿಲಿಯನ್ ಸ್ಟ್ರೀಮಿಂಗ್ ಕಂಡು ದಾಖಲೆ ಸೃಷ್ಟಿಸಿತ್ತು.

ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾದ ‘ಗಾಳಿಪಟ-2’ ಸಿನಿಮಾ ಕೂಡ 48 ಗಂಟೆಯಲ್ಲಿ 10 ಕೋಟಿ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಹೀಗೆ ಬ್ಯಾಕ್ ಟು ಬ್ಯಾಕ್ ಉತ್ತಮ ಕಂಟೆಂಟ್​​ ಇರುವ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ಜೀ 5ನಲ್ಲಿ ಇದೀಗ 'ಗುರು ಶಿಷ್ಯರು' ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆ.. ಶುಭ ಕೋರಿದ ರಾಘಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.