ETV Bharat / entertainment

ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: 'ಗ್ರಾಮಾಯಣ'ದಿಂದ ವಿಶೇಷ ವಿಡಿಯೋ ರಿಲೀಸ್​ - etv bharat kannada

Gramayana movie: ವಿನಯ್​ ರಾಜ್​ಕುಮಾರ್​ ನಟನೆಯ 'ಗ್ರಾಮಾಯಣ' ಚಿತ್ರತಂಡ ದೀಪಾವಳಿ ಹಬ್ಬಕ್ಕೆ ವಿಶೇಷ ವಿಡಿಯೋವೊಂದನ್ನು ರಿಲೀಸ್​ ಮಾಡಿದೆ.

Gramayana movie
ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: 'ಗ್ರಾಮಾಯಣ'ದಿಂದ ವಿಶೇಷ ವಿಡಿಯೋ ರಿಲೀಸ್​
author img

By ETV Bharat Karnataka Team

Published : Nov 14, 2023, 4:44 PM IST

ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: 'ಗ್ರಾಮಾಯಣ'ದಿಂದ ವಿಶೇಷ ವಿಡಿಯೋ ರಿಲೀಸ್​

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಡಮ್​ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್​ಕುಮಾರ್. ಸದ್ಯ 'ಪೆಪೆ' ಹಾಗೂ 'ಗ್ರಾಮಾಯಣ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿನಯ್​ ರಾಜ್​ಕುಮಾರ್ ಅವರ​ ತಾತ ಹುಟ್ಟಿದ ಮನೆ ಅಂದ್ರೆ ಡಾ.ರಾಜ್​ಕುಮಾರ್​ ಅವರ ಮನೆ ಗಾಜನೂರಿನಲ್ಲಿ ಬಹಳ ವಿಶೇಷವಾಗಿ ಈ ವರ್ಷ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಈ ಸಂಭ್ರಮದ ವಿಡಿಯೋವನ್ನು 'ಗ್ರಾಮಾಯಣ' ಚಿತ್ರತಂಡ ಹಂಚಿಕೊಂಡಿದೆ.

ಹಳ್ಳಿಗಳಲ್ಲಿ ಹಳೆ ಕಾಲದ ಸಂಪ್ರದಾಯ ಹಾಗೂ ಸಂಸ್ಕೃತಿ ಮಾಯಾವಾಗುತ್ತಿರುವ ಕಾಲದಲ್ಲಿ ಹಳ್ಳಿ ಎಂದರೆ ಏನು? ಹಳ್ಳಿ ಆಚಾರ ವಿಚಾರಗಳು ಹೇಗಿರುತ್ತವೆ? ದೀಪಾವಳಿಯ ಸಂಭ್ರಮ ಹೇಗಿದೆ? ಎಂಬುದನ್ನು ಸದ್ಯ ರಿಲೀಸ್ ಆಗಿರುವ ವಿಡಿಯೋದಲ್ಲಿ ತೋರಿಸಲಾಗಿದೆ. ವಿಶೇಷ ಎಂದರೆ ಡಾ.ರಾಜ್​ಕುಮಾರ್​ ಹುಟ್ಟಿ ಬೆಳೆದ ಹೆಂಚಿನ ಮನೆಯ ಅಂದ ಚೆಂದ ನೋಡುವುದೇ ಖುಷಿ ಎನಿಸುತ್ತದೆ.

'ಗ್ರಾಮಾಯಣ' ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಚಿತ್ರವಿದು. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಯಶಸ್ವಿನಿ ಅಂಚಲ್​ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: 'ಸ್ವಾತಿ ಮುತ್ತಿನ ಮಳೆ'ಯಲ್ಲಿ ದೊಡ್ಡ ಗುಡುಗು: ಸಿನಿಮಾದಿಂದ ಹೊರಗುಳಿದ ಬಗ್ಗೆ ರಮ್ಯಾ ಹೇಳಿದ್ದೇನು?

'ಗ್ರಾಮಾಯಣ' ಮುಹೂರ್ತ ಸಮಾರಂಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ದೇವನೂರು ಚಂದ್ರು, "ಗ್ರಾಮಾಯಣ, ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜ್​ಕುಮಾರ್ ಅವರನ್ನು ನಾನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೇ ಈ ಕಥೆಗೆ ಇವರೇ ಸೂಕ್ತ ನಾಯಕ ಅಂದುಕೊಂಡೆ. ಅವರಿಗೆ ಕಥೆ ವಿವರಿಸಿದಾಗ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜ್​ಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡುತ್ತೀರಾ" ಎಂದು ಹೇಳಿದ್ದರು.

ಬಳಿಕ ನಟ ವಿನಯ್ ರಾಜ್​ಕುಮಾರ್ ಮಾತನಾಡಿ, "ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ 'ಗ್ರಾಮಾಯಣ'. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು" ಎಂದು ತಿಳಿಸಿದ್ದರು.

ಸಿನಿಮಾದಲ್ಲಿ ವಿನಯ್​ ರಾಜ್​ಕುಮಾರ್​ ಅಲ್ಲದೇ, ಅಚ್ಯುತ ಕುಮಾರ್​, ಗೋಪಾಲಕೃಷ್ಣ ದೇಶಪಾಂಡೆ, ಅರುಣ್​ ಸಾಗರ್​, ಅಪರ್ಣ (ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್​ ಹೆಗಡೆ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಲಹರಿ ಫಿಲಂಸ್​ ಮನೋಹರನ್​ ಜೊತೆ ಕೆ.ಪಿ ಶ್ರೀಕಾಂತ್​ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಗ್ರಾಮಾಯಣ ಟ್ರೇಲರ್​ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು, ಸದ್ಯದಲ್ಲೇ ಸಿನಿಮಾವನ್ನು ತೆರೆಗೆ ತರುವ ಪ್ಲಾನ್​ ಚಿತ್ರತಂಡಕ್ಕಿದೆ.

ಇದನ್ನೂ ಓದಿ: 'ಬ್ಯಾಡ್​​ ಮ್ಯಾನರ್ಸ್​' ಟ್ರೇಲರ್​ ಔಟ್​: ಅಭಿಷೇಕ್​ ಅಂಬರೀಶ್​ಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸಾಥ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.