ETV Bharat / entertainment

ಬಾನದಾರಿಯಲಿ ಬಿಡುಗಡೆ... ಗೋಲ್ಡನ್ ಸ್ಟಾರ್ ಗಣೇಶ್​ ಸಿನಿಮಾ ಮೆಚ್ಚಿದ ಸ್ಯಾಂಡಲ್​​ವುಡ್ ಸ್ಟಾರ್ಸ್ - ganesh starrer Baanadariyali

Baanadariyali: ಗೋಲ್ಡನ್ ಸ್ಟಾರ್ ಗಣೇಶ್​ ಮುಖ್ಯಭೂಮಿಕೆಯ ಬಾನದಾರಿಯಲಿ ಸಿನಿಮಾ ಇಂದು ತೆರೆ ಕಂಡಿದೆ.

Baanadariyali movie release
ಬಾನದಾರಿಯಲಿ ಬಿಡುಗಡೆ
author img

By ETV Bharat Karnataka Team

Published : Sep 28, 2023, 12:18 PM IST

ಗೋಲ್ಡನ್ ಸ್ಟಾರ್ ಗಣೇಶ್​ ಅಭಿನಯದ ಬಹುನಿರೀಕ್ಷಿತ 'ಬಾನದಾರಿಯಲಿ' ಸಿನಿಮಾ ರಾಜ್ಯಾದ್ಯಂತ ಇಂದು ತೆರೆಕಂಡಿದೆ. ಪ್ರೇಕ್ಷಕರು ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಡುಗಡೆಗೂ‌‌ ಮುನ್ನ ಬಾನದಾರಿಯಲ್ಲಿ ಚಿತ್ರತಂಡವು ಕನ್ನಡದ ತಾರೆಯರಿಗಾಗಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿ ಚಿತ್ರತಂಡಕ್ಕೆ ಸಪೋರ್ಟ್​ ಮಾಡಿದ್ದರು. ಸದ್ಯ ಸಿನಿಮಾ ಕುರಿತು ಪ್ರೇಕ್ಷಕರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಎಷ್ಟರ ಮಟ್ಟಿಗೆ ಸಿನಿಮಾ ಗೆಲ್ಲಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಬಾನದಾರಿಯಲಿ ಸ್ಪೆಷಲ್​ ಸ್ಕ್ರೀನಿಂಗ್: ಲವರ್ ಬಾಯ್ ಇಮೇಜ್​​ನಿಂದಲೇ ಕನ್ನಡಿಗರ ಮನಗೆದ್ದಿರುವ ಗಣೇಶ್ 'ಬಾನದಾರಿಯಲಿ' ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣಿಯ ಬಾನದಾರಿಯಲಿ ಸ್ಪೆಷಲ್​ ಸ್ಕ್ರೀನಿಂಗ್​ಗೆ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ಅನೂಪ್ ಭಂಡಾರಿ, ಸಪ್ತಮಿ ಗೌಡ, ಕೃಷಿ ತಾಪಂಡ, ಚೈತ್ರಾ ಆಚಾರ್ಯ, ಡಾರ್ಲಿಂಗ್ ಕೃಷ್ಣ, ನಿರೂಪ್ ಭಂಡಾರಿ, ವಿಕ್ರಮ್ ರವಿಚಂದ್ರನ್, ಧೀರೆನ್ ರಾಮ್ ಕುಮಾರ್, ಅಮೂಲ್ಯ ದಂಪತಿ ಸಾಕ್ಷಿಯಾಗಿದ್ದರು. ನಾಯಕ ನಟ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ, ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಇಡೀ ಬಾನದಾರಿಯಲಿ ಚಿತ್ರತಂಡ ಉಪಸ್ಥಿತವಿತ್ತು.

ಪ್ರೀತಿಯ ಕುರಿತಾದ ಕಥೆ: ಇದೊಂದು ಪ್ರೇಮಕಥೆಯಲ್ಲ, ಪ್ರೀತಿಯ ಕುರಿತಾದ ಕಥೆ ಎಂದು ನಟ ಗಣೇಶ್ ಈ ಮೊದಲೇ ಹೇಳಿಕೊಂಡಿದ್ದರು. ಅವರ ಮಾತು ಅಪ್ಪಟ ನಿಜ. ಇಲ್ಲಿ ಕೇವಲ ಯುವಕ ಯುವತಿಯ ಪ್ರೇಮಕಥೆಯಿಲ್ಲ. ಅಪ್ಪ-ಮಗಳ ಪ್ರೀತಿ, ಮನುಷ್ಯರ ನಡುವಿನ ಪ್ರೀತಿ, ಪರಿಸರದ ಬಗೆಗಿನ ಪ್ರೀತಿ, ಜೀವನ ಕುರಿತಾದ ಪ್ರೀತಿಯ ಮಿಶ್ರಣವಿದೆ. ಈವರೆಗೂ ಬರೀ ಪ್ರೇಮಿಗಳ ಪ್ರೀತಿಯ ಬಗ್ಗೆಯೇ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಪ್ರೀತಂ ಗುಬ್ಬಿ ಈ ಬಾರಿ ಸಂಪೂರ್ಣ ಜೀವನದಲ್ಲಿ ಬರುವ ಪ್ರೀತಿಯ ಕುರಿತಾದ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ.

ಗಣೇಶ್​ ಸಿನಿಮಾ ಮೆಚ್ಚಿದ ಸ್ಯಾಂಡಲ್​​ವುಡ್ ಸ್ಟಾರ್ಸ್: ಕನ್ನಡ ಚಿತ್ರರರಂಗದ ತಾರೆಯರು ಈ ಸಿನಿಮಾದ ಕಥೆಯನ್ನು ಮೆಚ್ಚಿಕೊಂಡಿದ್ದಾರೆ‌. ಮುದ್ದಾದ ಶೀರ್ಷಿಕೆ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟರ್ ಆದರೆ, ರುಕ್ಮಿಣಿ ವಸಂತ್ ಈಜುಗಾರ್ತಿ ಮತ್ತು ಸರ್ಫರ್ ಸ್ಫೋರ್ಟ್ ಪರ್ಸನ್​​ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ರೀಷ್ಮಾ ನಾಣಯ್ಯ ಟ್ರಾವೆಲ್‍ ಬ್ಲಾಗರ್‍ ಪಾತ್ರದಲ್ಲಿ ಅಭಿನಯಿಸಿದ್ದಾರೆ‌. ಇನ್ನೂ ರಂಗಾಯಣ ರಘು ಮಗಳ‌ ಮುದ್ದಿನ ಅಪ್ಪನಾಗಿ, ಅಳಿಯನ ಮುದ್ದಿನ ಮಾವನಾಗಿ ತೆರೆ ಮೇಲೆ ಮಿಂಚಿದ್ದಾರೆ.

ಇದನ್ನೂ ಓದಿ: ಲಿಯೋ ಆಡಿಯೋ ರಿಲೀಸ್​ ಈವೆಂಟ್ ರದ್ದು,​ ರಾಜಕೀಯ ಒತ್ತಡವಿಲ್ಲ: ಚಿತ್ರತಂಡ ಸ್ಪಷ್ಟನೆ

ಈ ಚಿತ್ರದ ಹೈಲೆಟ್ಸ್ ಅಂದ್ರೆ ಕ್ಯಾಮರಾಮ್ಯಾನ್ ಅಭಿಲಾಷ್ ಕತ್ತಿ ಕ್ಯಾಮರಾ ಕೈಚಳಕ. ಬೆಂಗಳೂರಿನಿಂದ ಹಿಡಿದು ದಕ್ಷಿಣ ಆಫ್ರಿಕಾವನ್ನು ಬಹಳ ಬ್ಯೂಟಿಫುಲ್ ಆಗಿ ಚಿತ್ರೀಕರಣ ಮಾಡಿದ್ದಾರೆ. ಸಂಭಾಷಣೆಕಾರ ಮಾಸ್ತಿ ಅವರ ಡೈಲಾಗ್ ಬಾನದಾರಿಯಲಿ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇನ್ನೂ ಅರ್ಜುನ್ ಜನ್ಯ ಸಂಗೀತ ಬಾನದಾರಿಯಲ್ಲಿ ಚಿತ್ರದ ಅಂದವನ್ನು ಹೆಚ್ಚಿಸಿದೆ. ಒಟ್ಟಾರೆ ಪ್ರೀತಿ ಅಂದರೆ ಕೇವಲ ಹುಡುಗ, ಹುಡುಗಿಗೆ ಮಾತ್ರ ಸೀಮಿತವಲ್ಲ ಅದನ್ನು ಮೀರಿದ್ದು ಅನ್ನೋ ಸಂದೇಶವನ್ನು ಬಾನದಾರಿಯಲಿ ಚಿತ್ರ ಒಳಗೊಂಡಿದೆ.

ಇದನ್ನೂ ಓದಿ: ಸೀರೆಯುಟ್ಟು ಕ್ಯಾಮರಾ ಎದುರು ಬಂದ ಬಳುಕುವ ಬಳ್ಳಿ: ಫಿಟ್ನೆಸ್ ಐಕಾನ್​​ ದಿಶಾ ಪಟಾನಿ ಫ್ಯಾಶನ್​ ಮೆಚ್ಚಿದ ಫ್ಯಾನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.