ETV Bharat / entertainment

ಕಪಿಲ್​ ಶರ್ಮಾ ಶೋನಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್: ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ಪಕ್ಕಾ - Kapil Sharma

ಕಪಿಲ್​ ಶರ್ಮಾ ಶೋನಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್ ಭಾಗಿಯಾಗಲಿದ್ದಾರೆ.

Golden Star Ganesh in Kapil Sharma Show
ಕಪಿಲ್​ ಶರ್ಮಾ ಶೋನಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್
author img

By

Published : Feb 9, 2023, 2:07 PM IST

ಹಿಂದಿ ಭಾಷೆಯ ಜನಪ್ರಿಯ ಕಾರ್ಯಕ್ರಮವಾದ ಕಪಿಲ್​ ಶರ್ಮಾ ಶೋನಲ್ಲಿ ಸ್ಯಾಂಡಲ್​ವುಡ್​ನ ಗೋಲ್ಡನ್​ ಸ್ಟಾರ್​ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರೂಪಕ ಕಪಿಲ್​ ಶರ್ಮಾ ಮತ್ತು ಕಾರ್ಯಕ್ರಮಕ್ಕೆ ಸಿದ್ಧರಾಗಿ ತೆರಳುತ್ತಿರುವ ವಿಡಿಯೋವನ್ನು ನಟ ಗಣೇಶ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟಾಕ್​ ಶೋನ ನಿರೂಪಕ ಕಪಿಲ್​ ಶರ್ಮಾ ಸಹ ಗಣೇಶ್ ಆಗಮನಕ್ಕೆ ಸಂತಸ ವ್ಯಕ್ತಪಡಿಸಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಕಪಿಲ್​ ಶರ್ಮಾ ಶೋನಲ್ಲಿ ಸುದೀಪ್​: ಕಪಿಲ್​ ಶರ್ಮಾ ಶೋನಲ್ಲಿ ಈಗಾಗಲೇ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್​ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಅವರೊಂದಿಗೆ ಒಮ್ಮೆ ಕಾಣಿಸಿಕೊಂಡಿದ್ದರೆ, ಮತ್ತೊಮ್ಮೆ ನಟ ಸುನೀಲ್​ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಕಪಿಲ್​ ಶರ್ಮಾ ಶೋನಲ್ಲಿ ಎರಡು ಬಾರಿ ಕಾಣಿಸಿಕೊಂಡಿರುವ ಕನ್ನಡದ ಮೊದಲ ನಟ ಎನ್ನುವ ಖ್ಯಾತಿ ಸುದೀಪ್​ ಅವರಿಗಿದೆ. ಇದೀಗ ಗೋಲ್ಡನ್​ ಸ್ಟಾರ್​ ಗಣೇಶ್ ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಳವಾಗಿದೆ.

ಕಪಿಲ್​ ಶರ್ಮಾ ಶೋನಲ್ಲಿ ಗಣೇಶ್: 2019ರ ಸೆಪ್ಟೆಂಬರ್​​ನಲ್ಲಿ ಪೈಲ್ವಾನ್ ಚಿತ್ರದ ಪ್ರಮೋಷನ್​ ಸಲುವಾಗಿ ನಟ ಸುದೀಪ್ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದರು. 2019ರ ಫೆಬ್ರವರಿ ತಿಂಗಳಿನಲ್ಲಿ ನಟ ಸುನೀಲ್​ ಶೆಟ್ಟಿ ಅವರೊಂದಿಗೆ ಆಗಮಿಸಿದ್ದರು. ಇದೀಗ ಗಣೇಶ್​ ಕಾಮಿಡಿ ಟೈಮ್​​ಗೆ ವೇದಿಕೆ ಸಜ್ಜಾಗಿದೆ. ಕಾಮಿಡಿ ಕಾರ್ಯಕ್ರಮದ ಮೂಲಕವೇ ಹೆಸರು ಮಾಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟ ಗಣೇಶ್ ಅವರು ಕಪಿಲ್​ ಶರ್ಮಾ ಜೊತೆ ಸೇರಿ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡೋದಕ್ಕೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 'ಕಬ್ಜ' ಹವಾ.. ಸ್ಪೆಷಲ್​ ಸಾಂಗ್​ಗೆ ಸೊಂಟ ಬಳುಕಿಸಲಿದ್ದಾರೆ ಬಸಣ್ಣಿ ತಾನ್ಯಾ

ಗಣೇಶ್​ ಶೋನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ವಿಚಾರವಷ್ಟೇ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಶೋನ ಪ್ರೋಮೋ ಬಳಿಕವೇ ತಿಳಿದು ಬರಬೇಕಿದೆ. ಗಣೇಶ್​ ನಟನೆಯ ಬಾನ ದಾರಿಯಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಪ್ರಚಾರ ಸಲುವಾಗಿ ಗೋಲ್ಡನ್​ ಸ್ಟಾರ್​ ಗಣೇಶ್ ಹೋಗಲಿದ್ದಾರೋ ಅಥವಾ ಅತಿಥಿಯಾಗಿ ಆ ಕಾರ್ಯಕ್ರಮಕ್ಕೆ ತೆರಳಲಿದ್ದಾರೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಶೂಟಿಂಗ್​ ಕಂಪ್ಲೀಟ್: ಸಲ್ಲು ಲುಕ್​ಗೆ ಫ್ಯಾನ್ಸ್ ಫಿದಾ

ನನ್ನ ಮೆಚ್ಚಿನ ಕಾರ್ಯಕ್ರಮದ (ಕಪಿಲ್​ ಶರ್ಮಾ ಶೋ) ಭಾಗವಾಗಲು ಬಹಳ ಸಂತೋಷವಾಗಿದೆ, ಕಪಿಲ್ ಶರ್ಮಾ ಸರ್ ಧನ್ಯವಾದಗಳು. ಸರ್ ನಿಮ್ಮ ಪ್ರೀತಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಗೋಲ್ಡನ್​ ಸ್ಟಾರ್​ ಗಣೇಶ್​ ಸೋಶಿಯಲ್​ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಗಣೇಶ್ ಆಗಮನಕ್ಕೆ ಕಪಿಲ್​ ಶರ್ಮಾ ಸಹ ಹರ್ಷ ವ್ಯಕ್ತಪಡಿಸಿ ಪೋಸ್ಟ್ ಹಾಕಿಕೊಂಡಿದ್ದಾರೆ. ಗಣೇಶ್​ ಅವರು ರೆಡಿ ಅಗಿ ಕಾರು ಹತ್ತುವ ವಿಡಿಯೋ ತುಣುಕು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ತರಬೇತಿ ವಿಮಾನ ಪಲ್ಟಿ, ಪ್ರಾಣಾಪಾಯದಿಂದ ಪೈಲಟ್‌ ಪಾರು: ಚಿತ್ರಗಳಲ್ಲಿ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.