ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು 'ಫಕ್ತ್ ಮಹಿಳೋ ಮೇಟ್' ಎಂಬ ಗುಜರಾತಿ ಚಲನಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ. ಯಶ್ ಸೋನಿ ಮತ್ತು ದೀಕ್ಷಾ ಜೋಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಟುಂಬಿಕ ಮತ್ತು ಹಾಸ್ಯಮಯ ಚಿತ್ರ ಇದಾಗಿದ್ದು, ಆನಂದ್ ಪಂಡಿತ್ ಮತ್ತು ವೈಶಾಲ್ ಶಾ ಜಂಟಿಯಾಗಿ ನಿರ್ಮಿಸಿದ್ದಾರೆ. ಇದನ್ನು ಜಯ್ ಬೋದಾಸ್ ಅವರ ನಿರ್ದೇಶನವಿದೆ. ಇದು ಇವರ ಮೊದಲ ಚಿತ್ರವಾಗಿದೆ.
ಆನಂದ್ ಪಂಡಿತ್ ಈ ಹಿಂದೆ ಸರ್ಕಾರ್ 3 ಮತ್ತು ಚೆಹ್ರೆ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಬಚ್ಚನ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 'ಫಕ್ತ್ ಮಹಿಳೋ ಮೇಟ್' ಚಿತ್ರದ ನಟನೆಗಾಗಿ ಬಿಗ್ ಬಿ ಅವರನ್ನು ಸಂಪರ್ಕಿಸಿದಾಗ ತಕ್ಷಣವೇ ಒಪ್ಪಿಕೊಂಡರಂತೆ.
- " class="align-text-top noRightClick twitterSection" data="
">
ಅಮಿತ್ ಜಿ ನನಗೆ ಹಲವು ವರ್ಷಗಳಿಂದ ಪರಿಚಯ. ಹಲವು ರೀತಿಯಲ್ಲಿ ಸ್ನೇಹಿತರಾಗಿ ಮತ್ತು ಮಾರ್ಗದರ್ಶಕರಾಗಿ ನನಗೆ ಸಹಾಯ ಮಾಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಅನಿವಾರ್ಯ ಇದ್ದುದರಿಂದ ಅವರನ್ನು ಸಂಪರ್ಕ ಮಾಡಲಾಯಿತು. ಫಕ್ತ್ ಮಹಿಳಾ ಮೇಟ್‌ನಲ್ಲಿ ನೀವು ಅತಿಥಿ ಪಾತ್ರದಲ್ಲಿ ನಟಿಸುತ್ತೀರಾ ಎಂದು ನಾನು ಅವರನ್ನು ಒಂದೇ ಒಂದು ಮಾತು ಕೇಳಿದೆ. ಅವರು ತಕ್ಷಣ 'ಹೌದು!' ನಟಿಸುತ್ತೇವೆ ಎಂದು ಒಪ್ಪಿಕೊಂಡೇ ಬಿಟ್ಟರು.
ಸ್ಕ್ರಿಪ್ಟ್ ಬರೆದವರು ಯಾರು? ಚಿತ್ರದ ನಿರ್ದೇಶಕರು ಯಾರು ಎಂಬ ಮರು ಪ್ರಶ್ನೆ ಕೇಳದೇ ನೇರವಾಗಿ ಸೆಟ್ಗೆ ಬಂದರು. ಅಮಿತ್ ಜಿ ಗುಜರಾತಿ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಅವರ ಸರಳತೆಯನ್ನು ಕೊಂಡಾಡಿದ್ದಾರೆ. ಫಕ್ತ್ ಮಹಿಳಾ ಮೇಟ್ ಆಗಸ್ಟ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆಯಂತೆ.