ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಆರೋಪಿ ಕಾರು ಚಾಲಕ ಖಾಜಾ ಮೊಹಿದ್ದೀನ್ (24). ನವೆಂಬರ್ 13 ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ಸರ್ಕಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಶಶಿಕುಮಾರ್ (20) ಸಾವನ್ನಪ್ಪಿದ್ದ.
ಬಾಗೇಪಲ್ಲಿ ಮೂಲದ ಶಶಿಕುಮಾರ್ ಪೀಣ್ಯದ ಕಾರ್ಖಾನೆಯೊಂದರಲ್ಲಿ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ. ನವೆಂಬರ್ 13ರಂದು ರಾತ್ರಿ ಪಾಳಿ ಕೆಲಸ ಮುಗಿಸಿದ್ದ ಶಶಿಕುಮಾರ್ ಮಧ್ಯರಾತ್ರಿ ತನ್ನ ಸ್ಕೂಟರ್‌ನಲ್ಲಿ ವೇಗವಾಗಿ ಬರುವಾಗ ಎದುರಿನಿಂದ ಬಂದ ಕಾರು ನೋಡಿ ಗಾಬರಿಗೊಂಡು ಬಿದ್ದಿದ್ದ. ಈ ವೇಳೆ ಶಶಿಕುಮಾರ್ ಮೇಲೆ ಕಾರು ಹರಿಸಿದ್ದ ಚಾಲಕ ಮೊಹಿದ್ದೀನ್, ಗಾಬರಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಹಾಗೂ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮಾಲೀಕ ಮಂಜುನಾಥ್ ಎಂಬಾತನನ್ನು ಪತ್ತೆ ಹಚ್ಚಿದ್ದರು. ಬಳಿಕ ಅದರ ಚಾಲಕ ಮೊಹಿದ್ದೀನ್ ಎಂಬುದನ್ನು ಖಚಿತಪಡಿಸಿಕೊಂಡು ಅಪಘಾತವೆಸಗಿ ಚನ್ನರಾಯಪಟ್ಟಣಕ್ಕೆ ತೆರಳಿದ್ದ ಆತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ : ಹಿಟ್ ಆ್ಯಂಡ್ ರನ್, ಬೈಕಿಗೆ ಡಿಕ್ಕಿ ಹೊಡೆದ ಜೀಪ್; ಸವಾರ ಸಾವು
ಇದನ್ನೂ ಓದಿ: ಮೈಸೂರಲ್ಲಿ ಹಿಟ್ ಅಂಡ್ ರನ್ಗೆ ಮಹಿಳೆ ಬಲಿ: ಐವರಿಗೆ ಗಂಭೀರ ಗಾಯ