ETV Bharat / bharat

ಛತ್ತೀಸ್‌ಗಢ: ಹತರಾದ ಐವರು ನಕ್ಸಲರ ತಲೆ ಮೇಲಿತ್ತು 40 ಲಕ್ಷ ರೂ. ಬಹುಮಾನ - ENCOUNTER IN KANKER

ಕಂಕೇರ್ ಜಿಲ್ಲೆಯಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್​​ನಲ್ಲಿ ಐವರು ನಕ್ಸಲರು ಹತರಾಗಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ENCOUNTER IN KANKER
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Nov 18, 2024, 2:23 PM IST

ಕಂಕೇರ್: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಕಳೆದ ಎರಡು ದಿನ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲರು ಹತರಾಗಿದ್ದಾರೆ.

ವನೋಜಾ ಮಿಚಾ ಕರಮ್ (42), ಪುನಿತಾ (21), ಸಂತೋಷ್ ಕೊರ್ಚಾಮಿ (35), ಮನೇಶ್ ಅಲಿಯಾಸ್ ಕಾಜು ಸೈನು ಪದ್ಧ (35) ಮತ್ತು ಸುರೇಶ್ ಅಲಿಯಾಸ್ ನಾಗೇಶ್ ಗಾವಡೆ (30) ಹತರಾದ ನಕ್ಸಲರು.

ಮೃತರೆಲ್ಲರೂ ನಕ್ಸಲ್ ಸಂಘಟನೆಯ ಕಂಪನಿ-10ಗೆ ಸೇರಿದವರಾಗಿದ್ದು, ಭದ್ರತಾ ಪಡೆಗಳು ಬಹಳ ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದವು.

ತಲಾ ಒಬ್ಬರಿಗೆ 8 ಲಕ್ಷ ರೂಪಾಯಿಯಂತೆ ಐದು ನಕ್ಸಲರ ಪತ್ತೆಯಾಗಿ 40 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಮಾದ್ ವಿಭಾಗದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್ ಅಂತ್ಯಗೊಂಡಿದ್ದರೂ, ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಬಿಜಾಪುರದ ನಿವಾಸಿಯಾಗಿದ್ದ ಮೃತ ವನೋಜಾ ಉತ್ತರ ದಕ್ಷಿಣ ವಿಭಾಗದ ಪ್ರೆಸ್ ಟೀಮ್‌ನಲ್ಲಿ ಡಿವಿಸಿಎಂ ಕಮಾಂಡರ್ ಆಗಿದ್ದರು. ಐಎನ್‌ಎಸ್‌ಎಎಸ್ ರೈಫಲ್ ಅವರ ಬಳಿ ಇತ್ತು. ಬಸ್ತಾರ್ ನಿವಾಸಿಯಾದ ಪುನಿತಾ, ಪಿಎಂ ಸದಸ್ಯರಾಗಿದ್ದು ಎಸ್‌ಬಿಎಲ್ ಶಸ್ತ್ರಾಸ್ತ್ರ ಹೊಂದಿದ್ದರು. ಧನೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿರ್ಪೋಲಿಯ ಶಿವಗಟ್ಟಾ ಗ್ರಾಮದ ಸಂತೋಷ್, ಡಿವಿಷನ್ ಸ್ಟಾಪ್ ಟೀಮ್‌ನಲ್ಲಿ ಪಿಎಂ ಸದಸ್ಯರಾಗಿದ್ದರು. ಇವರು ಸಿಂಗಲ್ ಶಾಟ್ ಆಯುಧ ಹೊಂದಿದ್ದರು. ಗಡ್‌ಚಿರೋಲಿ ಜಿಲ್ಲೆಯ ಗೊಂಡವಾಹಿ ನಿವಾಸಿ ಮನೇಶ್, ಪಿಎಲ್‌ಜಿಎ ಕಂಪನಿ ನಂ-10ರಲ್ಲಿ ಪಿಎಂ ಸದಸ್ಯರಾಗಿದ್ದು, 2 ಬೋರ್ ಗನ್ ಹೊಂದಿದ್ದರು. ಮಹಾರಾಷ್ಟ್ರದ ಗಡ್‌ಚಿರೋಲಿಯ ನೈನರ್ ಗ್ರಾಮದ ನಿವಾಸಿ ಸುರೇಶ್, ಉತ್ತರ ದಕ್ಷಿಣ ವಿಭಾಗದಲ್ಲಿ ಪಿಎಂ ಆಗಿದ್ದು, 12 ಬೋರ್ ಗನ್ ಹೊಂದಿದ್ದರು. ಈ ಎಲ್ಲರ ಮೃತದೇಹಗಳ ಸಹಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಆರ್‌ಜಿ, ಕೋಬ್ರಾ, ಬಸ್ತಾರ್ ಫೈಟರ್ಸ್, ಬಿಎಸ್‌ಎಫ್ ಮತ್ತು ಎಸ್‌ಟಿಎಫ್‌ನ 1,400ಕ್ಕೂ ಹೆಚ್ಚು ಯೋಧರು ಈ ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡಿದ್ದರು. ಇಬ್ಬರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಬಿಜಿಎಲ್ ಲಾಂಚರ್, ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್ ರೈಫಲ್ ಮತ್ತು ಮೂರು 12 ಬೋರ್ ಗನ್‌ಗಳು ಸೇರಿವೆ.

ಇದನ್ನೂ ಓದಿ: ಛತ್ತೀಸ್​​ಗಢದಲ್ಲಿ ಗುಂಡಿನ ಚಕಮಕಿ: ಐವರು ನಕ್ಸಲರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.