ETV Bharat / entertainment

ಶಿವರಾಜ್​ಕುಮಾರ್​​ 'ಭೈರತಿ ರಣಗಲ್​​'ಗೆ ಭರ್ಜರಿ ರೆಸ್ಪಾನ್ಸ್​​: ಮೊದಲ 3 ದಿನದ ಕಲೆಕ್ಷನ್​ ಮಾಹಿತಿ ಇಲ್ಲಿದೆ - BHAIRATHI RANAGAL COLLECTION

ಶಿವರಾಜ್​ಕುಮಾರ್​​ ಮುಖ್ಯಭೂಮಿಕೆಯ 'ಭೈರತಿ ರಣಗಲ್​​' ಸಿನಿಮಾದ ಮೂರು ದಿನಗಳ ಕಲೆಕ್ಷನ್​ ಮಾಹಿತಿ ಇಲ್ಲಿದೆ.

Bhairathi Ranagal
​'ಭೈರತಿ ರಣಗಲ್' (ETV Bharat)
author img

By ETV Bharat Entertainment Team

Published : Nov 18, 2024, 2:27 PM IST

ಕನ್ನಡ ಚಿತ್ರರಂಗದ ಹೆಸರಾಂತ ನಟ ಶಿವರಾಜ್​ಕುಮಾರ್​​ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ಭೈರತಿ ರಣಗಲ್​​' ಬಿಡುಗಡೆಯಾಗಿ 3 ದಿನ ಭರ್ಜರಿ ಪ್ರದರ್ಶನ ಕಂಡಿದೆ. ನವೆಂಬರ್​ 15, ಶುಕ್ರವಾರದಂದು ಚಿತ್ರಮಂದಿರಗಳನ್ನು ಪ್ರವೇಶಿಸಿದ ಮಫ್ತಿ ಪ್ರೀಕ್ವೆಲ್​​ ಅನ್ನು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿನಿಮಾ ಭರ್ಜರಿ ರೆಸ್ಪಾನ್ಸ್​ ಸ್ವೀಕರಿಸುತ್ತಿದ್ದು, ಬಾಕ್ಸ್​ ಆಫೀಸ್​ ಅಂಕಿಅಂಶಗಳು ಸಹ ಉತ್ತಮವಾಗಿವೆ.

ಭೈರತಿ ರಣಗಲ್​ ಬಾಕ್ಸ್​ ಆಫೀಸ್​ ಕಲೆಕ್ಷನ್​: ಈ ಸಾಲಿನ ದಕ್ಷಿಣ ಚಿತ್ರರಂಗದ ಪ್ರಮುಖ ಸಿನಿಮಾವಾಗಿ ಗುರುತಿಸಿಕೊಂಡಿದ್ದ ಭೈರತಿ ರಣಗಲ್ ಅಂದುಕೊಂಡಂತೆ ಅದ್ಧೂರಿಯಾಗಿಯೇ ತೆರೆಗಪ್ಪಳಿಸಿದೆ. ಶುಕ್ರವಾರ ಚಿತ್ರಮಂದಿರಗಳ ಎದುರು ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದರು. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದರು. ನಟ ಡಾಲಿ ಧನಂಜಯ್​ ಕುಣಿದು ಕಪ್ಪಳಿಸಿದ್ದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಸಿನಿಮಾದ ಗಳಿಕೆ ಉತ್ತಮವಾಗಿರಲಿದೆ ಎಂದು ಊಹಿಸಲಾಗಿತ್ತು. ನಿರೀಕ್ಷೆಯಂತೆ, ಬಾಕ್ಸ್​ ಆಫೀಸ್​ ಅಂಕಿಅಂಶ ಉತ್ತಮವಾಗಿ ಸಾಗಿದೆ.

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್​​ ವರದಿ ಪ್ರಕಾರ, ಭೈರತಿ ರಣಗಲ್ ಸಿನಿಮಾ​ 2 ಕೋಟಿ ರೂಪಾಯಿಯೊಂದಿಗೆ ತನ್ನ ಬಾಕ್ಸ್​ ಆಫೀಸ್​ ಪ್ರಯಾಣ ಪ್ರಾರಂಭಿಸಿದೆ. ಸೆಂಚುರಿ ಸ್ಟಾರ್​ನ ಸಿನಿಮಾ ಕನ್ನಡ ಚಿತ್ರರಂಗದ ಗೆಲುವನ್ನು ಮುಂದುವರಿಸಿದೆ. ಈ ಮಾಹಿತಿ ಹೊರತಾಗಿಯೂ ಅಭಿಮಾನಿಗಳು ಮತ್ತು ಸಿನಿಪ್ರಿಯರು ಕಲೆಕ್ಷನ್​ನ ಅಧಿಕೃತ ಘೋಷಣೆಯನ್ನು ಚಿತ್ರತಂಡದಿಂದ ನಿರೀಕ್ಷಿಸಿದ್ದಾರೆ.

ನೆಟ್​ ಕಲೆಕ್ಷನ್​​ ವಿವರ:

  • ಮೊದಲ ದಿನ: 2.3 ಕೋಟಿ ರೂಪಾಯಿ.
  • ಎರಡನೇ ದಿನ: 2.7 ಕೋಟಿ ರೂಪಾಯಿ.
  • ಮೂರನೇ ದಿನ: 3.4 ಕೋಟಿ ರೂಪಾಯಿ.
  • ಒಟ್ಟು ವ್ಯವಹಾರ: 8.4 ಕೋಟಿ ರೂಪಾಯಿ.

ಇದನ್ನೂ ಓದಿ: ಬಾಲಿವುಡ್​​ ಸಿನಿಮಾ ನಿರ್ದೇಶಿಸಲಿದ್ದಾರೆ ಶಿವಣ್ಣನ 'ಭಜರಂಗಿ' ನಿರ್ದೇಶಕ: ಟೈಗರ್​ ಶ್ರಾಫ್​​ 'ಬಾಘಿ 4'ಗೆ ಹರ್ಷ ಆ್ಯಕ್ಷನ್​ ಕಟ್

'ಭೈರತಿ ರಣಗಲ್​​', 2017ರಲ್ಲಿ ಮೂಡಿ ಬಂದ ಮಫ್ತಿ ಸಿನಿಮಾದ ಪ್ರೀಕ್ವೆಲ್​. ಮಫ್ತಿಗೆ ಆ್ಯಕ್ಷನ್​ ಕಟ್​ ಹೇಳಿದ್ದ ನರ್ತನ್​ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಿವರಾಜಕುಮಾರ್ ಪತ್ನಿ, ನಿರ್ಮಾಪಕಿ ಗೀತಾ ಅವರು ತಮ್ಮ ಗೀತಾ ಪಿಕ್ಚರ್​ ಬ್ಯಾನರ್​​​ನಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಶಿವರಾಜ್​ಕುಮಾರ್​ ಜೊತೆ ರುಕ್ಮಿಣಿ ವಸಂತ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಛಾಯಾಸಿಂಗ್, ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾಗೆ ರವಿ ಬಸ್ರೂರ್ ಅವರ ಸಂಗೀತ ನಿರ್ದೇಶನವಿದೆ. ನವೀನ್ ಕುಮಾರ್ ಕ್ಯಾಮರಾ ಕೈಚಳಕ​, ಗುಣ ಅವರ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: 'ಮಂಜು ನಂಬಿಕೆಗೆ ಅರ್ಹರಲ್ಲ, ಗೌತಮಿ ಫೇಕ್'​: ವೈಲ್ಡ್​​ಕಾರ್ಡ್​ ಸ್ಪರ್ಧಿಗಳಿಂದ ನೇರನುಡಿ; ಅನುಷಾ ಎಲಿಮಿನೇಟ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.