ETV Bharat / entertainment

'ಫೈಟರ್'ನ 'ಇಷ್ಕ್ ಜೈಸಾ ಕುಚ್' ಸಾಂಗ್ ಔಟ್​: ಹೃತಿಕ್​ ರೋಷನ್​ ಜೊತೆ ದೀಪಿಕಾ ಪಡುಕೋಣೆ ರೊಮ್ಯಾನ್ಸ್​ - ಈಟಿವಿ ಭಾರತ ಕನ್ನಡ

Ishq Jaisa Kuch out: 'ಫೈಟರ್'​ ಚಿತ್ರದ 'ಇಷ್ಕ್ ಜೈಸಾ ಕುಚ್' ಎಂಬ ರೊಮ್ಯಾಂಟಿಕ್​ ಸಾಂಗ್​ ಅನಾವರಣಗೊಂಡಿದೆ.

Fighter song Ishq Jaisa Kuch out: Deepika Padukone and Hrithik Roshan's sizzling chemistry is all set to set the screens on fire
'ಫೈಟರ್'ನ 'ಇಷ್ಕ್ ಜೈಸಾ ಕುಚ್' ಸಾಂಗ್ ಔಟ್
author img

By ETV Bharat Karnataka Team

Published : Dec 22, 2023, 4:21 PM IST

ಬಾಲಿವುಡ್​ ಬಹುಬೇಡಿಕೆಯ ನಟರಾದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಸ್ಕ್ರೀನ್​ ಶೇರ್ ಮಾಡಿರುವ 'ಫೈಟರ್' ಸಿನಿಮಾ ಮುಂದಿನ ಗಣರಾಜ್ಯೋತ್ಸವ ಸಂದರ್ಭ ತೆರೆಕಾಣಲು ಸಜ್ಜಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿತ್ರ ನಿರ್ಮಾಪಕರು 'ಶೇರ್ ಖುಲ್ ಗಯೇ' ಎಂಬ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಪಾರ್ಟಿ ಸಾಂಗ್​ಗೆ ಫ್ಯಾನ್ಸ್​ ಹುಚ್ಚೆದ್ದು ಕುಣಿದಿದ್ದರು. ಇದೀಗ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

'ಇಷ್ಕ್ ಜೈಸಾ ಕುಚ್' ಎಂಬ ಶೀರ್ಷಿಕೆಯ ರೊಮ್ಯಾಂಟಿಕ್​ ಹಾಡನ್ನು ಚಿತ್ರತಂಡ ಅನಾವರಣಗೊಳಿಸಿದೆ. ಬಾಸ್ಕೊ ಮಾರ್ಟಿಸ್​ ಮತ್ತು ಸೀಸರ್​ ಗೊನ್ಸಾಲ್ವೆಸ್​ ನೃತ್ಯ ಸಂಯೋಜನೆ ಚೆನ್ನಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ನಟಿ ದೀಪಿಕಾ ಮತ್ತು ಹೃತಿಕ್​ ನಡುವಿನ ಕೆಮಿಸ್ಟ್ರಿ ತೋರಿಸುವಲ್ಲಿ ಹಾಡು ಸಫಲವಾಗಿದ್ದು, ಇಬ್ಬರು ಅದ್ಭುತ ಪ್ರದರ್ಶನ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಹಾಡು ಬಿಡುಗಡೆಯಾದ 45 ನಿಮಿಷಗಳಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಕುಮಾರ್, ರ್ಯಾಪರ್​ ಮೆಲೋಡಿ ಮತ್ತು ವಿಶಾಲ್​ ದದ್ಲಾನಿ ಬರೆದಿರುವ 'ಇಷ್ಕ್ ಜೈಸಾ ಕುಚ್' ಸಾಹಿತ್ಯಕ್ಕೆ ವಿಶಾಲ್​ ದಾದ್ಲಾನಿ ಮತ್ತು ಶೇಖರ್​ ರಾವ್ಜಿಯಾನಿ ಸಂಗೀತ ಸಂಯೋಜಿಸಿದ್ದಾರೆ. ಶಿಲ್ಪಾ ರಾವ್​ ಮತ್ತು ರ್ಯಾಪರ್​ ಮೆಲೋಡಿ ಈ ರೊಮ್ಯಾಂಟಿಕ್​ ಹಾಡಿಗೆ ಧ್ವನಿಯಾಗಿದ್ದಾರೆ.

ಚಿತ್ರ ತಯಾರಕರು ಡಿಸೆಂಬರ್ 15ರಂದು ಫೈಟರ್‌ನ 'ಶೇರ್ ಖುಲ್ ಗಯೇ' ಶೀರ್ಷಿಕೆಯ ಪಾರ್ಟಿ ಸಾಂಗ್​ ಅನ್ನು ಬಿಡುಗಡೆ ಮಾಡಿದ್ದರು. ಹಾಡಿನಲ್ಲಿ, ಹೃತಿಕ್ ಮತ್ತು ದೀಪಿಕಾ ಡ್ಯಾನ್ಸ್​ ಮಾಡಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವವರೂ ಕೂಡ ಈ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. 'ಶೇರ್ ಖುಲ್ ಗಯೇ' ಕೇಳುತ್ತಿದ್ದರೆ ಎದ್ದು ಕುಣಿಯಬೇಕು ಎಂದು ಅನಿಸುತ್ತದೆ ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ಕುಮಾರ್ ಬರೆದಿದ್ದು, ವಿಶಾಲ್ ದದ್ಲಾನಿ, ಬೆನ್ನಿ ದಯಾಳ್, ಶೇಖರ್ ಮತ್ತು ಶಿಲ್ಪಾ ರಾವ್ ಸಂಯೋಜಿಸಿದ್ದಾರೆ.

ಫೈಟರ್​ ಸಿನಿಮಾಗೆ ಸಿದ್ಧಾರ್ಥ್​ ಆನಂದ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿರ್ದೇಶಕ ಸಿದ್ಧಾರ್ಥ್​ ಮತ್ತು ಹೃತಿಕ್ ರೋಷನ್​​ ಒಟ್ಟಿಗೆ ಕೆಲಸ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಹಿಂದೆ ಈ ಜೋಡಿ ಬ್ಯಾಂಗ್​ ಬ್ಯಾಂಗ್​ ಮತ್ತು ವಾರ್​ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸಿದ್ದಾರ್ಥ್​​ ಅವರ ಮಾರ್ಫ್ಲಿಕ್ಸ್​​ ಪಿಕ್ಚರ್​ ಮತ್ತು ವಯೋಕಾಮ್​ 18 ಸ್ಟುಡಿಯೋ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ಗಣರಾಜ್ಯೋತ್ಸವಕ್ಕೆ ಮುನ್ನಾದಿನ ಅಂದರೆ, 2024ರ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಫೈಟರ್ ಬಿಡುಗಡೆಗೆ ದಿನಗಣನೆ: 'ಶೇರ್ ಖುಲ್ ಗಯೇ' ಮೇಕಿಂಗ್​ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.