ETV Bharat / entertainment

ತೆರೆಗೆ ಬರಲು ಸಜ್ಜಾಗಿದೆ ಹೆಣ್ಣು ಭ್ರೂಣ ಹತ್ಯೆ ಕಥೆ ಆಧಾರಿತ 'ಗುಬ್ಬಿಮರಿ' ಸಿನೆಮಾ - ಈಟಿವಿ ಭಾರತ್​ ಕನ್ನಡ

ಗುಬ್ಬಿಮರಿ ಸಿನೆಮಾದ ಮೂಲಕ ನಿರ್ದೇಶಕ ಮಧು ಜಕಣಾಚಾರ್ ಹೆಣ್ಣು ಭ್ರೂಣ ಹತ್ಯೆಯ ಬಗೆಗಿನ ಸ್ಟೋರಿ ಹೇಳ ಹೊರಟಿದ್ದಾರೆ.

gubbimari-film
ಗುಬ್ಬಿಮರಿ ಸಿನಿಮಾ
author img

By

Published : Aug 5, 2022, 7:35 PM IST

ಸ್ಯಾಂಡಲ್​ವುಡ್​ನಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಸಾಮಾಜಿಕ ಕಳಕಳಿ ಇರುವ ಚಿತ್ರಗಳು ಕಡಿಮೆ ಆಗುತ್ತಿವೆ. ಇದೀಗ ಗುಬ್ಬಿಮರಿ ಎಂದು ಟೈಟಲ್ ಇಟ್ಟುಕೊಂಡು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಹೋರಾಟ ಮಾಡುವ ಕಥೆ ಆಧಾರಿತ ಚಿತ್ರವೊಂದು ಬರುತ್ತಿದೆ. ಚಿತ್ರದಲ್ಲಿ ಮಾಸ್ಟರ್ ಚಿನ್ಮಯ್, ಮಾಸ್ಟರ್ ಸಂಜಯ್ ಹಾಗು ಸಿಂಧು ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಧು ಡಕಣಾಚಾರ್ ನಿರ್ದೇಶನ ಹೊಣೆ ಹೊತ್ತಿದ್ದಾರೆೆ.

ನಿರ್ದೇಶಕ ಮಧು ಜಕಣಾಚಾರ್ ಮಾತನಾಡಿ, ಕೆಲವರಿಗೆ ಹೆಣ್ಣು ತಾಯಿಯಾಗಿ ಬೇಕು, ಹೆಂಡತಿಯಾಗಿ ಬೇಕು. ಆದರೆ ಮಗಳಾಗಿ ಮಾತ್ರ ಬೇಡ. ಕಾಲ ಎಷ್ಟು ಮುಂದುವರೆದಿದ್ದರೂ ಇನ್ನೂ ಕೆಲವು ವಿಕೃತ ಮನಸ್ಸಿನವರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಅಂತಹವರಿಗೆ ಈ ಸಿನಿಮಾ ಮೂಲಕ ಇದು ತಪ್ಪು ಎಂದು ಅರಿವು ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಚಿತ್ರದ ಸಂಭಾಷಣೆಕಾರ ಸುಂದರ್ ಮಾತನಾಡಿ, ಇದು ಮಕ್ಕಳ ಚಿತ್ರವಲ್ಲ. ಮಕ್ಕಳ ಜೊತೆಗೆ ಹಿರಿಯರು ನೋಡಬೇಕಾದ ಚಿತ್ರ. ನಿರ್ದೇಶಕರು ಒಳ್ಳೆಯ ಚಿತ್ರ ಮಾಡಿದ್ದಾರೆ. ನಾನು ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದೇನೆ ಎಂದು ಹೇಳಿದರು.

ಅರಸೀಕೆರೆ ದೀಪು - ಸಿದ್ದು ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕುಣಿಗಲ್ ಸಂಕಲನ ಇದೆ. ಗುಬ್ಬಿ ಟೆಂಟ್ ಲಾಂಛನದಲ್ಲಿ ಆನಂದಬಾಬು ಹಾಗೂ ಡಾ.ನಿಶ್ಚಿತ ಸಿನಿಮಾ ನಿರ್ಮಾಣ ಮಾಡಿದ್ದಾರೆ‌.

ಇದನ್ನೂ ಓದಿ : ಚಿತ್ರರಂಗಕ್ಕೆ ರಾಧನಾ ರಾಮ.. ಮಾಲಾಶ್ರೀ ಪುತ್ರಿ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.