ETV Bharat / entertainment

ಕಾಯಿಲೆ ಇದೆ ಎಂದು ಹೇಳಿಕೊಂಡರೆ ಅವಕಾಶ ವಂಚಿತಳಾಗುತ್ತಿದ್ದೆ: ಬಾಲಿವುಡ್​ ನಟಿ

author img

By

Published : Nov 29, 2022, 6:49 PM IST

ಬಾಲಿವುಡ್​ ನಟಿ ಫಾತಿಮಾ ಸನಾ ಶೇಕ್ ಅವರು ಅಪಸ್ಮಾರ ರೋಗ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್​ 19ರಂದು ಅಪಸ್ಮಾರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Fatima Sana Shaikh
ಬಾಲಿವುಡ್​ ನಟಿ ಫಾತಿಮಾ ಸನಾ ಶೇಕ್

ಹೈದರಾಬಾದ್(ತೆಲಂಗಾಣ): ನಿರ್ದೇಶಕ ಸ್ಯಾಮ್ ಬಹದ್ದೂರ್ ನಿರ್ದೇಶನದ ಚಿತ್ರದಲ್ಲಿ ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳಲಿರುವ ನಟಿ ಫಾತಿಮಾ ಸನಾ ಶೇಖ್ ಅವರು ಇತ್ತೀಚೆಗೆ ಅಪಸ್ಮಾರ ರೋಗದೊಂದಿಗಿನ ಹೋರಾಟದ ಬಗ್ಗೆ ಹೇಳಿಕೊಂಡಿದ್ದಾರೆ.

2016ರಲ್ಲಿ ದಂಗಲ್‌ ಚಿತ್ರಕ್ಕಾಗಿ ತರಬೇತಿ ನಡೆಸುತ್ತಿರುವ ಸಂದರ್ಭದಲ್ಲಿ ನಟಿಗೆ ಅಪಸ್ಮಾರ ರೋಗದ ಬಗ್ಗೆ ಖಾತರಿಯಾಯಿತು. ಆದರೆ ಈ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಏಕೆಂದರೆ ರೋಗದ ಬಗ್ಗೆ ಹೇಳಿದ್ದರೆ, ನಾನು ಅವಕಾಶ ವಂಚಿತಳಾಗುತ್ತಿದೆ ಎಂದು ಹೇಳಿದರು.

ಕಳೆದ ತಿಂಗಳು ಫಾತಿಮಾ, ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಜನರು ತಮ್ಮ ಅಪಸ್ಮಾರದ ಕಥೆಗಳನ್ನು ಹಂಚಿಕೊಳ್ಳುವಂತೆ ಪೋಸ್ಟ್​ ಮೂಲಕ ತಿಳಿಸಿದ್ದರು.

ದುರ್ಬಲವಾಗಿರಲು ಇಷ್ಟವಿರಲಿಲ್ಲ: ಸಂದರ್ಶನವೊಂದರಲ್ಲಿ ಆರೋಗ್ಯದ ಸ್ಥಿತಿ ಬಗ್ಗೆ ಯಾಕಿಷ್ಟು ಸಮಯ ತೆಗದುಕೊಂಡಿರಿ ಎಂದು ಪ್ರಶ್ನಿಸಿದಾಗ ''ರೋಗದ ಬಗ್ಗೆ ಹೇಳಿಕೊಳ್ಳಲು ಸರಿಯಾದ ಅವಕಾಶ ಸಿಕ್ಕಿರಲಿಲ್ಲ, ರೋಗವನ್ನು ಅರ್ಥ ಮಾಡಿಕೊಳ್ಳಲು ಕೆಲ ಸಮಯ ತೆಗೆದುಕೊಂಡೆ ಮತ್ತು ಜನರು ನಾನು ದುರ್ಬಲ ಎಂದು ಭಾವಿಸುವುದು ನನಗೆ ಇಷ್ಟವಿರಲಿಲ್ಲ ಎಂದು ನಟಿ ಉತ್ತರಿಸಿದ್ದಾರೆ.

"ನಾನು ಆ ರೋಗದಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರೆ ನನಗೆ ಅವಕಾಶ ಸಿಗುವುದಿಲ್ಲ ಎಂದು ಹೆದರಿದ್ದೆ, ನಾನು ನರವೈಜ್ಞಾನಿಕ ಸಮಸ್ಯೆಯಿದೆ ಎಂದು ಹೇಳಿಕೊಳ್ಳಲು ಇಷ್ಟವಿರಲಿಲ್ಲ ಎಂದರು.

ಅಪಸ್ಮಾರದ ರೋಗದ ಬಗ್ಗೆ ಜಾಗೃತಿ ಹರಡಲು NGOಗಳೊಂದಿಗೆ ಕೈಜೋಡಿಸಿರುವ ಅವರು, ನವೆಂಬರ್​ 19ರಂದು ಅಪಸ್ಮಾರ ಜಾಗೃತಿ ಕಾರ್ಯಕ್ರಮದಲ್ಲಿ ರೋಗ ಲಕ್ಷಣಗಳ ಬಗ್ಗೆ ಮತ್ತು ಅದರಿಂದ ಹೇಗೆ ಹೊರ ಬರಬೇಕೆಂಬುದರ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಟಿ ರವೀನಾ ಟಂಡನ್ ಜಿಪ್ಸಿ.. ಜಾಲತಾಣದಲ್ಲಿ ವಿಡಿಯೋ ವೈರಲ್, ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.