ಹೈದರಾಬಾದ್: ಬಾಲಿವುಡ್ನ ಬಹು ಪ್ರತಿಭೆಯಾಗಿರುವ ಫರಾನ್ ಅಖ್ತರ್ 50ನೇ ಹುಟ್ಟು ಹಬ್ಬದ ಹಿನ್ನೆಲೆ ಅವರ ಮುದ್ದಿನ ಮಡದಿ ನಟಿ- ಸಂಗೀತಗಾರ್ತಿ ಶಿಬಾನಿ ಅಖ್ತರ್ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗಂಡನೊಂದಿಗಿನ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿ ಕೊಳ್ಳುವ ಮೂಲಕ ಶುಭ ಹಾರೈಸಿದ್ದಾರೆ.
ಫರಾನ್ ನನ್ನ ಎಲ್ಲವೂ ನೀನೆ ಎನ್ನುವ ಮೂಲಕ ಪ್ರೀತಿಯ ಆಳತೆಯನ್ನು ತಿಳಿಸಿ, ಹುಟ್ಟು ಹಬ್ಬಕ್ಕೆ ಹಾರೈಸಿದ್ದಾರೆ. ಇದೆ ವೇಳೆ, ದೀರ್ಘ ಪ್ರೀತಿಯ ಪತ್ರವನ್ನು ಬರೆದಿದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫರನಾಲೂ ಎಂದು ಕರೆದಿರುವ ಶಿಬಾನಿ, ಎಲ್ಲ ಋತುಮಾನದಲ್ಲೂ ನೀನೇ ನನಗೆ ಎಲ್ಲಾ ಆಗಿದ್ದೀಯಾ. 50ನೇ ಹುಟ್ಟುಹಬ್ಬದ ಶುಭಾಶಯಗಳು ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ ಎಂಬುದು ನಿನಗೆ ತಿಳಿದಿದೆ ಎಂದು ಗೊತ್ತಿದೆ ಎಂದಿದ್ದಾರೆ.
ಇನ್ನು ನಟ ಫರಾನ್ಗೆ ಹಿರಿಯ ನಟಿ ಶಬಾನಾ ಆಜ್ಮಿ ಕೂಡ ಶುಭಾಶಯ ತಿಳಿದಿದ್ದು, ಮಗ ಎಂದು ಕರೆದಿದ್ದಾರೆ. ಜೊತೆಗೆ ಈ ಮೈಲಿಗಲ್ಲಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಫರಾನ್ ಜೊತೆಗಿನ ಅದ್ಬುತ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಪ್ಪು ಬಣ್ಣದ ಟೀ ಶರ್ಟ್ ಡೆನಿಮ್ ಜೊತೆಗೆ ನಟ ಫರಾನ್ ಶಬಾನಿ ಮತ್ತು ಜಾವೇದ್ ಅಖ್ತರ್, ಹನಿ ಇರಾನಿ, ಜೋಯಾ ಅಖ್ತರ್, ಅನುಷಾ ದಂಡೆಕರ್ ಮತ್ತು ಕುಟುಂಬದ ಇತರರ ಜೊತೆಗೆ ಕಂಡಿದ್ದಾರೆ. ಈ ಸಂಭ್ರಮದ ಫೋಟೋದಲ್ಲಿ ಮೂರು ಕೇಕ್ಗಳನ್ನು ಕಾಣಬಹುದಾಗಿದ್ದು, ಪ್ರತಿಯೊಬ್ಬರು ಫರಾನ್ ಅವರನ್ನು ಹುರುದುಂಬಿಸುವುದನ್ನು ಕಾಣಬಹುದು.
ಜಾವೇದ್ ಅಖ್ತರ್ ಮತ್ತು ಹನಿ ಇರಾನಿ ಅವರ ಮಗ ಫರಾನ್ ಅಖ್ತರ್ ಆಗಿದ್ದು, ಇವರ ಸಹೋದರಿ ನಿರ್ದೇಶಕಿ ಜೋಯಾ ಅಖ್ತರ್ ಆಗಿದ್ದಾರೆ. ಫರಾನ್ ಮತ್ತು ಹನಿ ಇಬ್ಬರು 1985ರಲ್ಲಿ ವಿಚ್ಛೇದನ ಪಡೆದರು. ಜಾವೇದ್ ಬಳಿಕ ಶಬನಾ ಅಜ್ಮಿಯನ್ನು ಮದುವೆಯಾಗಿ, ಕುಟುಂಬದಲ್ಲಿ ಹೊಸ ಸಂಬಂಧ ಸೃಷ್ಟಿಸಿದರು.
ಫರಾನ್ ಸದ್ಯ ಡಾನ್ 3 ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶನದ ಹೊರತಾಗಿ ಫರಾನ್ ನಿರ್ಮಾಣ ಮತ್ತು ಬರವಣಿಗೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಜೋಯಾ ಅಖ್ತರ್ ಮತ್ತು ರೀಮಾ ಕಗ್ತಿ ಅವರ ಚಿತ್ರ ಕಥೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಹಿಂದೆ ಅವರು 'ಜಿ ಲೇ ಸರಾ' ಚಿತ್ರ ನಿರ್ಮಾಣ ಕುರಿತು ಘೋಷಿಸಿದ್ದರು. ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ನಟನೆಯ ಈ ಚಿತ್ರ ರೋಡ್ ಟ್ರಿಪ್ ಆಧಾರಿತವಾಗಿದೆ. ಸದ್ಯ ಈ ಕೆಲಸವನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ: ರೋಮಾಂಚಕ 'ದೇವರ' ಗ್ಲಿಂಪ್ಸ್: ಹೆಚ್ಚಿತು ಜೂ. ಎನ್‌ಟಿಆರ್ ಸಿನಿಮಾ ಮೇಲಿನ ಕುತೂಹಲ