ETV Bharat / entertainment

'ಡಂಕಿ' ಜೊತೆಗಿನ ಪೈಪೋಟಿಯಿಂದ ಹಿಂದೆ ಸರಿಯಿತೇ 'ಸಲಾರ್​'? ರಿಲೀಸ್​ ಡೇಟ್ ಮತ್ತೆ​ ಮುಂದೂಡಿಕೆ!?

author img

By ETV Bharat Karnataka Team

Published : Nov 5, 2023, 10:58 PM IST

Dunki vs Salaar: 'ಡಂಕಿ' ಸಿನಿಮಾ ಜೊತೆಗಿನ ಬಾಕ್ಸ್​ ಆಫೀಸ್​ ಘರ್ಷಣೆ ತಪ್ಪಿಸುವ ಸಲುವಾಗಿ ಮತ್ತೊಮ್ಮೆ 'ಸಲಾರ್​' ಮುಂದೂಡಿಕೆಗೆ ಸಿದ್ಧವಾಗಿದೆ ಎನ್ನಲಾಗಿದೆ.

Dunki vs Salaar: Prabhas starrer gets pushed to 2024 to dodge release clash with Shah Rukh Khan's film?
'ಡುಂಕಿ' ಜೊತೆಗಿನ ಪೈಪೋಟಿಯಿಂದ ಹಿಂದೆ ಸರಿಯಿತೇ 'ಸಲಾರ್​'? ಮತ್ತೆ ರಿಲೀಸ್​ ಡೇಟ್​ ಮುಂದೂಡಿಕೆ!?

ಈ ವರ್ಷದ ಕ್ರಿಸ್​ಮಸ್​ ವೇಳೆ ಎರಡು ಸೂಪರ್​ಸ್ಟಾರ್​ ಸಿನಿಮಾಗಳು ಒಮ್ಮೆಲೇ ತೆರೆಗಪ್ಪಳಿಸಲಿವೆ. ಬಾಲಿವುಡ್​​ ಕಿಂಗ್ ಶಾರುಖ್ ಖಾನ್ ನಟನೆಯ 'ಡಂಕಿ' ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ 'ಸಲಾರ್​' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನಡೆಸಲಿದೆ. ಆದರೆ, 'ಸಲಾರ್'​ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಸಾಕಷ್ಟು ಬಾರಿ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದ್ದು, ಈ ಬಾರಿ ಮತ್ತೊಮ್ಮೆ ಮುಂದೂಡಿಕೆಯಾಗಲಿದೆಯೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ರಾಧೆಶ್ಯಾಮ್​ ಮತ್ತು ಆದಿಪುರುಷ್​ನಂತಹ ಹೈ ಬಜೆಟ್​ ಸಿನಿಮಾಗಳು ಪ್ಲಾಫ್​ ಆದ ನಂತರ ಪ್ರಭಾಸ್​ ಅವರ 'ಸಲಾರ್'​ ಮೇಲೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾದ ಯಶಸ್ಸಿಗಾಗಿ ನಟ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಇನ್ನೂ, ಪಠಾಣ್​ ಮತ್ತು ಜವಾನ್​ನಂತಹ ಬ್ಲಾಕ್​ಬಸ್ಟರ್​ ನಂತರ ಶಾರುಖ್​ ಅವರ ಮುಂಬರುವ ಚಿತ್ರ 'ಡಂಕಿ' ಮೇಲೆ ಎಕ್ಸ್​ಪೆಕ್ಟೇಶನ್ಸ್​ ಜಾಸ್ತಿನೇ ಇದೆ. ಈ ಎರಡೂ ಸಿನಿಮಾಗಳು ಡಿಸೆಂಬರ್​ 22ರಂದೇ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಹೈ ರೇಂಜ್​ನಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: Salaar vs Dunki: ಟೀಸರ್ ವೀಕ್ಷಣೆಯಲ್ಲಿ 'ಸಲಾರ್​​' ಮೇಲುಗೈ

ಒಂದು ಕಡೆ, ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾ. ಮತ್ತೊಂದೆಡೆ, ರಾಜ್​ಕುಮಾರ್​ ಹಿರಾನಿ ಅವರ ಸಾಮಾಜಿಕ ಸಂದೇಶ, ಹಾಸ್ಯ ಮತ್ತು ಭಾವನಾತ್ಮಕ ಕಥೆಯನ್ನೊಳಗೊಂಡ 'ಡಂಕಿ' ಬರಲಿದೆ. ಸಲಾರ್​ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ, ಜವಾನ್​ ಮತ್ತು ಪಠಾಣ್​ ಈಗಾಗಲೇ 1,000 ಕೋಟಿ ಕ್ಲಬ್​ ಸೇರಿರುವುದರಿಂದ 'ಡಂಕಿ' ಮೇಲೂ ಇದು ಪರಿಣಾಮ ಬೀರುತ್ತದೆ. ಅಂದರೆ, ಶಾರುಖ್​ ಸಿನಿಮಾ ಮೇಲೆ ಜನರಿಗೆ ಹೆಚ್ಚಿನ ನಿರೀಕ್ಷೆಯಿದೆ. ಹೀಗಾಗಿ ಈ ಸಿನಿಮಾಗಳನ್ನು ಒಂದೇ ಬಾರಿಗೆ ಬಿಡುಗಡೆ ಮಾಡುವುದು ಸರಿಯಲ್ಲ. ಇದು ಕಲೆಕ್ಷನ್​ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಸಿನಿಮಾ ವಿಶ್ಲೇಷಕರು.

ಈ ಕ್ರಮದಲ್ಲಿ, ಬಾಕ್ಸ್​ ಆಫೀಸ್​ ಘರ್ಷಣೆ ತಪ್ಪಿಸುವ ಸಲುವಾಗಿ ಮತ್ತೊಮ್ಮೆ 'ಸಲಾರ್​' ಮುಂದೂಡಿಕೆಗೆ ಸಿದ್ಧವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಮುಂದಿನ ವರ್ಷ ಜನವರಿ ಅಥವಾ ಮಾರ್ಚ್​ನಲ್ಲಿ ಚಿತ್ರ ತೆರೆ ಕಾಣಲಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಶಾರುಖ್​ ಖಾನ್​ ಡಂಕಿ ಚಿತ್ರದ ಸಕ್ಸಸ್​ ಜೊತೆ ಈ ವರ್ಷ ಹ್ಯಾಟ್ರಿಕ್​ ಹಿಟ್​ನೊಂದಿಗೆ ಕೊನೆಗೊಳ್ಳಲಿದ್ದಾರೆ. ಜೊತೆಗೆ ಪ್ರಭಾಸ್​ ಅವರ ಸಲಾರ್​ ಸಿನಿಮಾ ಮುಂದಿನ ವರ್ಷ ಬಂದರೆ, ಅವರ ಮತ್ತೊಂದು ನಿರೀಕ್ಷೆಯ ಕಲ್ಲಿ ಕೂಡ ಕೆಲವು ತಿಂಗಳ ಗ್ಯಾಪ್​ನಲ್ಲಿ ತೆರೆ ಕಾಣಲಿದೆ. ಹೀಗಾಗಿ ಒಂದೇ ವರ್ಷ ಎರಡು ಬ್ಲಾಕ್​ಬಸ್ಟರ್ ಚಿತ್ರಗಳು ಬರಲಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ. ​

ಇದನ್ನೂ ಓದಿ: ಡಂಕಿ vs ಸಲಾರ್​: ಶಾರುಖ್​ ಸಿನಿಮಾ ಟೀಸರ್​​ ರಿಲೀಸ್​ ಬೆನ್ನಲ್ಲೇ ಫ್ಯಾನ್ಸ್ ವಾರ್​ ಶುರು - ಟ್ವೀಟ್​​ಗಳನ್ನೇನಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.