ETV Bharat / entertainment

ಶಾರುಖ್​​ ಖಾನ್ ಜನ್ಮದಿನದಂದು ಡಂಕಿ ಟೀಸರ್​ ರಿಲೀಸ್​​​: ಮುಂಬೈನಲ್ಲಿ ಅಭಿಮಾನಿಗಳಿಗಾಗಿ ಖಾನ್ ಬರ್ತ್​​ಡೇ ಪಾರ್ಟಿ! - Shah Rukh Khan

Dunki Teaser: ನವೆಂಬರ್ 2, ಶಾರುಖ್​ ಖಾನ್​ ಜನ್ಮದಿನದಂದು ಡಂಕಿ ಟೀಸರ್​ ರಿಲೀಸ್​​​ ಆಗಲಿದೆ.

Dunki teaser
ಡಂಕಿ ಟೀಸರ್
author img

By ETV Bharat Karnataka Team

Published : Oct 31, 2023, 9:55 AM IST

2023ರಲ್ಲಿ ಎರಡು ಬ್ಲಾಕ್​ ಬಸ್ಟರ್ ಸಿನಿಮಾ ನೀಡಿರುವ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಡಂಕಿ'. ಪಠಾಣ್ ಮತ್ತು ಜವಾನ್‌ನಂತಹ ಬ್ಯಾಕ್-ಟು-ಬ್ಯಾಕ್ ಹಿಟ್ ಸಿನಿಮಾ ನಂತರ ಇದೇ ಸಾಲಿನಲ್ಲಿ ತೆರೆಕಾಣಲು ಸಜ್ಜಾಗಿರುವ ಸಿನಿಮಾ ಡಂಕಿ.

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಕ್ರಿಸ್​ಮಸ್​ ಸಂದರ್ಭ ತೆರೆಗಪ್ಪಳಿಸಲಿದ್ದು, ಹ್ಯಾಟ್ರಿಕ್​​ ಹಿಟ್​ ಕೊಡಲಿದ್ದಾರೆ ಅನ್ನೋದು ಅಭಿಮಾನಿಗಳ ವಿಶ್ವಾಸ. ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಎಸ್‌ಆರ್‌ಕೆ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್​ನ ಡಂಕಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ನಿರೀಕ್ಷೆ ಇದೆ.

ಡಂಕಿ ಟೀಸರ್: ಇತ್ತೀಚಿನ ವರದಿಗಳ ಪ್ರಕಾರ, ಡಂಕಿ ಸಿನಿಮಾದ ಮೊದಲ ಟೀಸರ್ 2023ರ ನವೆಂಬರ್ 2ರಂದು ಅನಾವರಣಗೊಳ್ಳಲಿದೆ. ಅಂದು ಶಾರುಖ್ ಖಾನ್ ಜನ್ಮದಿನವಾದ ಹಿನ್ನೆಲೆ, ಟೀಸರ್​ ಬಿಡುಗಡೆಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರಪಂಚದಾದ್ಯಂತದ ಇರುವ ಲಕ್ಷಾಂತರ ಅಭಿಮಾನಿಗಳಿಗೆ ಇದು ಶಾರುಖ್​ ಖಾನ್ ಅವರ ಅವರ ಉಡುಗೊರೆಯಾಗಿದೆ. ಅಲ್ಲದೇ, ಶಾರುಖ್ ಖಾನ್ ಮುಂಬೈನಲ್ಲಿ ತಮ್ಮ ಅಭಿಮಾನಿಗಳಿಗಾಗಿ ವಿಶೇಷವಾಗಿ ಬರ್ತ್​​ಡೇ ಪಾರ್ಟಿ ಆಯೋಜಿಸಲು ಯೋಜಿಸಿದ್ದಾರಂತೆ. ಈವೆಂಟ್​ನಲ್ಲಿ ಮೆಚ್ಚಿನ ನಟನ ಜೊತೆ ಅಭಿಮಾನಿಗಳು ಟೀಸರ್ ವೀಕ್ಷಿಸಬಹುದಾಗಿದೆ.

ಡಂಕಿ ಚಿತ್ರದ ಟೀಸರ್ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್​​ನಿಂದ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ. ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್, ರಾಜ್​​​ಕುಮಾರ್ ಹಿರಾನಿ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್​​​ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಎರಡು ಟೀಸರ್ ಆವೃತ್ತಿಗಳು ಸಿದ್ಧಗೊಂಡಿದೆ. ಒಂದು ನಿಮಿಷಕ್ಕೂ ಕಡಿಮೆ ಇರುವ ಒಂದು ಟೀಸರ್, ಮತ್ತೊಂದು ಎರಡು ನಿಮಿಷಗಳ ಅವಧಿಯ ಟೀಸರ್. ನವೆಂಬರ್ 2 ರಂದು ಯಾವ ಆವೃತ್ತಿ ಬಿಡುಗಡೆ ಮಾಡುತ್ತಾರೆ ಎಂಬುದನ್ನು ಇನ್ನೂ ಘೋಷಿಸಿಲ್ಲ.

ಇದನ್ನೂ ಓದಿ: ನವೆಂಬರ್ 1ರಂದು ರಾಣೆಬೆನ್ನೂರು ತಾಲೂಕು ಕ್ರೀಡಾಂಗಣದಲ್ಲಿ 'ಗರಡಿ' ಟ್ರೇಲರ್ ಬಿಡುಗಡೆ

ಡಂಕಿ ಸಿನಿಮಾ ಸಿನಿಪ್ರಿಯರಿಗೆ ಮತ್ತು ಕಿಂಗ್​ ಖಾನ್​ ಅಭಿಮಾನಿಗಳಿಗೆ ಕ್ರಿಸ್ಮಸ್ ಟ್ರೀಟ್ ಆಗುವ ನಿರೀಕ್ಷೆಯಿದೆ. ಪ್ರಮೋಶನ್​ ಭಾಗವಾಗಿ, ಟೀಸರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ಸಿನಿಮಾ ಜೊತೆಗೆ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂಬ ಮಾಹಿತಿಯೂ ಇದೆ. ತಾಪ್ಸಿ ಪನ್ನು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 22 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಅಂದೇ ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಸಲಾರ್​ ಕೂಡ ತೆರೆಕಾಣಲಿದೆ.

ಇದನ್ನೂ ಓದಿ: ಸ್ಟೈಲಿಶ್ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ ಬೊಂಬಾಟ್​ ಲುಕ್.. ಕಿರಿಕ್​ ಬೆಡಗಿಯ​​ ಹೊಸ ಫೋಟೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.