ETV Bharat / entertainment

ನಾಳೆ ಶಾರುಖ್ ಖಾನ್ ಬರ್ತ್​ಡೇ: ಡಂಕಿ ಟೀಸರ್ ರಿಲೀಸ್​​​ಗೆ ಸಿದ್ಧತೆ - ಡಂಕಿ ಟೀಸರ್

Dunki: ನಾಳೆ ಶಾರುಖ್​ ಖಾನ್​ ಜನ್ಮದಿನ ಹಿನ್ನೆಲೆ ಡಂಕಿ ಟೀಸರ್ ಅನಾವರಣಗೊಳ್ಳಲಿದೆ.

shah rukh khan Dunki
ಶಾರುಖ್​ ಖಾನ್ ಡಂಕಿ
author img

By ETV Bharat Karnataka Team

Published : Nov 1, 2023, 5:59 PM IST

ಬಾಲಿವುಡ್​​ ಕಿಂಗ್​​ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್​ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಡಂಕಿ' ಡಿಸೆಂಬರ್​​ 22ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಅಭಿಮಾನಿಗಳು ಸಿನಿಮಾ ಟೀಸರ್‌ಗಾಗಿ ಕಾತರರಾಗಿದ್ದಾರೆ. ನಾಳೆ ಶಾರುಖ್ ಖಾನ್ ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಡಂಕಿ ಟೀಸರ್ ಅನಾವರಣಗೊಳ್ಳಲಿದೆ ಎಂದು ನಂಬಲಾಗಿದೆ. ಇತ್ತೀಚಿನ ವರದಿಗಳೂ ಸಹ, ನಾಳೆ ಬೆಳಗ್ಗೆಯೇ ಟೀಸರ್ ರಿಲಿಸ್ ಆಗಲಿದೆ ಎಂದು ಸೂಚಿಸಿವೆ.

ಮೂರನೇ ಬ್ಲಾಕ್​ಬಸ್ಟರ್​ಗೆ ಎಸ್​ಆರ್​ಕೆ ರೆಡಿ: '2023'ರ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಶಾರುಖ್ ಖಾನ್ ಅವರಿಗೆ ಬಹಳ ವಿಶೇಷ ಅಂತಲೇ ಹೇಳಬಹುದು. ನಾಲ್ಕು ವರ್ಷಗಳ ವಿರಾಮದ ನಂತರ ಬಂದು 2 ಬ್ಲಾಕ್​ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಪಠಾಣ್​​​, ಜವಾನ್​ ಅಭೂತಪೂರ್ವ ಯಶಸ್ಸು ಕಂಡಿದ್ದು, ಮುಂದಿನ ಡಂಕಿ ಚಿತ್ರದ ಮೇಲೆ ಬೆಟ್ಟದಷ್ಟು ನಿರಿಕ್ಷೆಗಳಿವೆ. ಕ್ರಿಸ್​ಮಸ್​ ಸಂದರ್ಭ, ಡಿಸೆಂಬರ್ 22 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಪ್ರಿಯರ ಉತ್ಸಾಹ, ಕುತೂಹಲ ಹೆಚ್ಚುತ್ತಲೇ ಇದೆ.

ನಾಳೆ ಬೆಳಗ್ಗೆ 11 ಗಂಟೆಗೆ ಟೀಸರ್​​ ಅನಾವರಣ: ವರದಿಗಳ ಪ್ರಕಾರ, ಡಂಕಿ ಟೀಸರ್ ಅನ್ನು ನವೆಂಬರ್ 2 ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ಅನಾವರಣಗೊಳಿಸಲಾಗುತ್ತದೆ. ಸೋಷಿಯಲ್​ ಮೀಡಿಯಾಗಳಲ್ಲಿ ಈಗಾಗಲೇ 'ಎಸ್‌ಆರ್‌ಕೆ ಡೇ' ಅನ್ನೋದು ಟ್ರೆಂಡಿಂಗ್​ ಆಗಿದೆ. ಎಸ್​ಆರ್​ಕೆ ಜೊತೆ ರಾಜ್‌ಕುಮಾರ್ ಹಿರಾನಿ ಅವರ ಮೊದಲ ಸಿನಿಮಾ ಆಗಿದ್ದು, ನಟಿ ತಾಪ್ಸಿ ಪನ್ನು ಸೇರಿದಂತೆ ಉಳಿದ ತಾರಾಗಣವನ್ನೊಳಗೊಂಡ ಟೀಸರ್ ಅನ್ನು ನಾಳೆ ಅನಾವರಣಗೊಳಿಸುವ ನಿರೀಕ್ಷೆ ಇದೆ. ದಿಯಾ ಮಿರ್ಜಾ, ಪರೀಕ್ಷಿತ್ ಸಾಹ್ನಿ, ಬೊಮನ್ ಇರಾನಿ, ಧರ್ಮೇಂದ್ರ, ಸತೀಶ್ ಶಾ, ಕಾಜೋಲ್, ವಿಕ್ಕಿ ಕೌಶಲ್ ಕೂಡ ಚಿತ್ರದಲ್ಲಿದ್ದಾರೆ ಎಂಬ ಮಾಹಿತಿ ಇದೆ.

  • " class="align-text-top noRightClick twitterSection" data="">

ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಡಂಕಿ ಚಿತ್ರಕ್ಕೂ ಮುನ್ನ, ರಾಜು ಚೊಚ್ಚಲ ನಿರ್ದೇಶನದ 2003ರ ಮುನ್ನಾ ಭಾಯ್ ಎಂಬಿಬಿಎಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದರು. ಆದರೆ ಶಾರುಖ್ ಖಾನ್​​ ಅವರ ಆರೋಗ್ಯ ಸಮಸ್ಯೆ ಹಿನ್ನೆಲೆ, ಪಾತ್ರ ಅಂತಿಮವಾಗಿ ಸಂಜಯ್ ದತ್‌ ಅವರಿಗೆ ಹೋಯಿತು. 2009ರ ಬ್ಲಾಕ್​​ಬಸ್ಟರ್ 3 ಈಡಿಯಟ್ಸ್ ಸಿನಿಮಾದ ಅಮೀರ್ ಖಾನ್ ಪಾತ್ರವನ್ನು ಮೊದಲು ಶಾರುಖ್ ಖಾನ್​ ಅವರಿಗೆ​​​ ನೀಡಲಾಗಿತ್ತಂತೆ. ಅಂತಿಮವಾಗಿ, ಡಂಕಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್​ ಈ ಸಿನಿಮಾ ಘೋಷಣೆ ಆಗಿದ್ದೇ ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಶಾರುಖ್​ ಬರ್ತ್​ಡೇ: ಅದ್ಧೂರಿ ಸಂತೋಷಕೂಟಕ್ಕೆ ಸಿದ್ಧತೆ; ಅಭಿಮಾನಿಗಳಿಂದ ವಿವಿಧ ಸಮಾಜಸೇವೆ

2023ರಲ್ಲಿ, ಶಾರುಖ್ ಖಾನ್ ಪಠಾಣ್​ ಮತ್ತು ಜವಾನ್​ ಮೂಲಕ ಬ್ಯಾಕ್-ಟು-ಬ್ಯಾಕ್ ಹಿಟ್​ ಸಿನಿಮಾ ಕೊಟ್ಟಿದ್ದು, ಡಂಕಿ ಕೂಡ ಯಶಸ್ವಿ ಆಗಲಿದೆ ಅನ್ನೋದು ಅಭಿಮಾನಿಗಳ ವಿಶ್ವಾಸ. ಎಸ್​ಆರ್​ಕೆ ಅಭೂತಪೂರ್ವ ಯಶಸ್ಸಿನ ಪಯಣ ಮುಂದುವರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಡಂಕಿ ಸೌತ್​ ಸಿನಿಮಾ ರಂಗದ ಬಹುನಿರೀಕ್ಷಿತ ಸಿನಿಮಾ ಸಲಾರ್​ ಜೊತೆ ಬಾಕ್ಸ್ ಆಫೀಸ್​​ ಪೈಪೋಟಿ ನಡೆಸಲಿದೆ. ಹೊಂಬಾಳೆ ಫಿಲ್ಮ್ಸ್​ನ ಸಲಾರ್ ಕೂಡ ಡಿಸೆಂಬರ್​ 22ರಂದು ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಟೈಗರ್ 3 ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಹಿತಿ: ಮುಂಜಾನೆ 7ಕ್ಕೆ ಸಿನಿಮಾ ಪ್ರದರ್ಶನ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.