ETV Bharat / entertainment

ಡಂಕಿ ಸಿನಿಮಾದ ಫಸ್ಟ್ ಸಾಂಗ್​ ರಿಲೀಸ್: ಆ್ಯಕ್ಷನ್​ ಅವತಾರದಿಂದ ಹೊರಬಂದ ಶಾರುಖ್​ ಖಾನ್ - ಶಾರುಖ್​ ಖಾನ್​

Lutt Putt Gaya: ಶಾರುಖ್​ ಖಾನ್​ ಮತ್ತು ತಾಪ್ಸಿ ಪನ್ನು ನಟನೆಯ 'ಡಂಕಿ​​' ಸಿನಿಮಾದ ಮೊದಲ ಹಾಡು ಲುಟ್ಟ್ ಪುಟ್ಟ್​ ಗಯಾ ಅನಾವರಣಗೊಂಡಿದೆ.

dunki song lutt putt gaya
ಲುಟ್ಟ್ ಪುಟ್ಟ್​ ಗಯಾ ಅನಾವರಣ
author img

By ETV Bharat Karnataka Team

Published : Nov 22, 2023, 6:49 PM IST

ಕಿಂಗ್​ ಖಾನ್​ ಶಾರುಖ್​ ನಟನೆಯ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​ 'ಡಂಕಿ​​'. ಸಿನಿಮಾ ಬಿಡುಗಡೆಗೆ ಇನ್ನೊಂದೇ ತಿಂಗಳು ಬಾಕಿ. ಶಾರುಖ್​ ಖಾನ್​ ಸೇರಿದಂತೆ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಸಿನಿಪ್ರಿಯರಲ್ಲಿ​ ಕುತೂಹಲ ಕೆರಳಿಸಿದೆ. ಮುಂದುವರಿದ ಭಾಗವಾಗಿ, ಇಂದು ಡಂಕಿ ಸಿನಿಮಾದ ಫಸ್ಟ್ ಸಾಂಗ್​ ರಿಲೀಸ್ ಆಗಿದೆ.

ಶಾರುಖ್ ಖಾನ್ ಸಿನಿಮಾದ ಅಪ್​ಡೇಟ್ಸ್​​ಗೆ ಅಭಿಮಾನಿಗಳು ಕಾತರರಾಗಿದ್ದರು. ನಿನ್ನೆಯಷ್ಟೇ ಚಿತ್ರದ ಮೊದಲ ಹಾಡು ಅನಾವರಣಗೊಳ್ಳಲಿದೆ ಎಂದು ಎಕ್​ಆರ್​ಕೆ ತಿಳಿಸಿದ್ದು, ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಕೊಟ್ಟ ಮಾತಿನಂತೆ ಇಂದು ಚಿತ್ರದ ಮೊದಲ ಹಾಡು ಲುಟ್ಟ್ ಪುಟ್ಟ್​ ಗಯಾ ಅನಾವರಣಗೊಂಡಿದೆ. ರೊಮ್ಯಾಂಟಿಕ್ ಟ್ರ್ಯಾಕ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರೇಕ್ಷಕರ ಗಮನ ಸೆಳೆದಿದೆ. ಇದು ಈಗಷ್ಟೇ ಹುಟ್ಟುವ ಪ್ರೀತಿಯ ಕುರಿತಾದ ಹಾಡಾಗಿದೆ.

ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ ಅವರ ಸಾಹಿತ್ಯವಿದೆ. ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರ ಭಾವಪೂರ್ಣ ದನಿ ಹಾಡಿನ ಮೆರುಗು ಹೆಚ್ಚಿಸಿದೆ. ಗಣೇಶ್ ಆಚಾರ್ಯ ಅವರ ನೃತ್ಯ ಸಂಯೋಜನೆ ಇದೆ. ಸಾಕಷ್ಟು ಸಹ ನೃತ್ಯಗಾರರೊಂದಿಗೆ ನಟ ಶಾರುಖ್​ ಖಾನ್​ ಕುಣಿದಿದ್ದು, ಹಾಡು ಬಹಳ ಉಲ್ಲಾಸಕರವಾಗಿದೆ. ಈ ವರ್ಷ ಭರ್ಜರಿ ಯಶಸ್ಸು ಕಂಡ ಪಠಾಣ್​ ಮತ್ತು ಜವಾನ್​​ನಲ್ಲಿ ಶಾರುಖ್​ ಖಾನ್​ ಆ್ಯಕ್ಷನ್​ ಅವತಾರದಲ್ಲಿ ಅಬ್ಬರಿಸಿದ್ದರು. ತಮ್ಮ ಸುಧೀರ್ಘ ವೃತ್ತಿಜೀವನದಲ್ಲಿ ರೊಮ್ಯಾಂಟಿಕ್​​ ಕಿಂಗ್​ ಆಗೇ ಗುರುತಿಸಿಕೊಂಡ ಎಸ್​ಆರ್​ಕೆ ಇದೇ ಮೊದಲ ಬಾರಿಗೆ ಆ್ಯಕ್ಷನ್​ ಸಿನಿಮಾದಲ್ಲಿ ಕಾಣಿಸಿಕೊಂಡರು. ಆದರಿಂದು ಅನಾವರಣಗೊಂಡಿರುವ ಹಾಡಿನಲ್ಲಿ, ಕಿಂಗ್​ ಖಾನ್ 'ಬ್ಯಾಕ್​ ಟು ಫನ್​ ಅಂಡ್​​ ರೊಮ್ಯಾಂಟಿಕ್' ಎಂಬುದನ್ನು ಸಾಬೀತುಪಡಿಸಿದ್ದಾರೆ.

ಲುಟ್ಟ್ ಪುಟ್ಟ್​ ಗಯಾ ಹಾಡು ತಾಪ್ಸಿ ಪಾತ್ರವನ್ನು ಪರಿಚಯಿಸಿದೆ. ಶಾರುಖ್​ ತಾಪ್ಸಿಯನ್ನು ಪ್ರೀತಿಸುವ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಮನು ಪಾತ್ರದಲ್ಲಿ ತಾಪ್ಸಿ ಪನ್ನು ನಟಿಸಿದ್ದರೆ, ಹಾರ್ಡಿ ಪಾತ್ರವನ್ನು ಎಸ್​ಆರ್​ಕೆ ನಿಭಾಯಿಸಿದ್ದಾರೆ. ಹಾರ್ಡಿ ಮನುಗಾಗಿ ಬದಲಾಗುವ ಕಥೆಯನ್ನು ಈ ಹಾಡು ಸುಂದರವಾಗಿ ಚಿತ್ರಿಸಿದೆ.

ಇದನ್ನೂ ಓದಿ: ರಣ್​ಬೀರ್ ಕಪೂರ್​ಗೆ ಕನ್ನಡ, ತೆಲುಗು ಕಲಿಸಿದ ರಶ್ಮಿಕಾ ಮಂದಣ್ಣ: ವಿಡಿಯೋ ನೋಡಿ

ಬಹು ನಿರೀಕ್ಷಿತ ಸಿನಿಮಾದಲ್ಲಿ ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್​ ಖಾನ್​ ಇದೇ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ಯುಕೆ ಮತ್ತು ಕೆನಡಾದಂತಹ ದೇಶಗಳಿಗೆ ವಲಸೆ ಹೋಗಲು ಇನ್ನಿಲ್ಲದ ಮಾರ್ಗಗಳನ್ನು ಆಶ್ರಯಿಸುವ ಭಾರತೀಯರ ಪ್ರಯಾಣದ ಮೇಲೆ ಕಥೆ ಕೇಂದ್ರಿತವಾಗಿದೆ. ರೊಮ್ಯಾಂಟಿಕ್​ ಅಂಶವನ್ನೂ ಒಳಗೊಂಡಿದೆ. ಎಸ್‌ಆರ್‌ಕೆ ಮತ್ತು ತಾಪ್ಸಿ ಜೊತೆಗೆ, ವಿಕ್ಕಿ ಕೌಶಲ್, ಬೊಮನ್ ಇರಾನಿ ಮತ್ತು ವಿಕ್ರಮ್ ಕೊಚ್ಚರ್ ಸಹ ನಟಿಸಿದ್ದಾರೆ.

ಇದನ್ನೂ ಓದಿ: ಟಾಪ್​ 10 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್​​ ಖಾನ್​ ನಂಬರ್​ ಒನ್!

2023ರಲ್ಲಿ ಪಠಾಣ್​ ಮತ್ತು ಜವಾನ್‌ನಂತಹ ಬ್ಲಾಕ್‌ಬಸ್ಟರ್‌ ಯಶಸ್ಸಿನ ನಂತರ, ಶಾರುಖ್ ಖಾನ್‌ ಅವರ ಮೂರನೇ ಚಿತ್ರದ ಮೇಲೆ ಪ್ರೇಕ್ಷಕರು, ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಡಂಕಿ ಡಿಸೆಂಬರ್ 22 ರಂದು ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.