ETV Bharat / entertainment

ಸೋನಂ ಕಪೂರ್​ ಬಗ್ಗೆ ರಾಣಾ ದಗ್ಗುಬಾಟಿ ಕಾಮೆಂಟ್​: ನಟ ದುಲ್ಕರ್​ ಸಲ್ಮಾನ್​​​ ರಿಯಾಕ್ಷನ್​ ಹೀಗಿದೆ! - ರಾಣಾ ದಗ್ಗುಬಾಟಿ

ಸೋನಂ ಕಪೂರ್​ ಬಗ್ಗೆ ರಾಣಾ ದಗ್ಗುಬಾಟಿ ಕಾಮೆಂಟ್​ ವಿಚಾರವಾಗಿ ದುಲ್ಕರ್​ ಸಲ್ಮಾನ್​​​ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Dulquer Salmaan reacts to controversy surrounding Rana Daggubati's comments involving Sonam Kapoor
ಸೋನಂ ಕಪೂರ್​ ಬಗ್ಗೆ ರಾಣಾ ದಗ್ಗುಬಾಟಿ ಕಾಮೆಂಟ್​: ನಟ ದುಲ್ಕರ್​ ಸಲ್ಮಾನ್​​​ ರಿಯಾಕ್ಷನ್​ ಹೀಗಿದೆ
author img

By

Published : Aug 20, 2023, 8:11 PM IST

ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ದುಲ್ಕರ್​ ಸಲ್ಮಾನ್​​​ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಕಿಂಗ್​ ಆಫ್​ ಕೋಥಾ ಸಲುವಾಗಿ ಸಖತ್​ ಸುದ್ದಿಯಲ್ಲಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಕಿಂಗ್​ ಆಫ್​ ಕೋಥಾ ಪ್ರಮೋಶನ್​ ಈವೆಂಟ್​ನಲ್ಲಿ, ಟಾಲಿವುಡ್​ ನಟ ರಾಣಾ ದಗ್ಗುಬಾಟಿ ಅವರು ಇತ್ತೀಚೆಗೆ ಮಾಡಿದ್ದ ಕಾಮೆಂಟ್​​ಗಳ ಬಗ್ಗೆ ಮಾತನಾಡಿದ್ದಾರೆ.

ಕಿಂಗ್​ ಆಫ್​ ಕೋಥಾ ಸಿನಿಮಾದಲ್ಲಿ ಬಾಲಿವುಡ್​​ ನಟಿ ಸೋನಂ ಕಪೂರ್​​ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ರಾಣಾ ದಗ್ಗುಬಾಟಿ ಶೂಟಿಂಗ್​ ಸೆಟ್​ಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಯಾರ ಹೆಸರನ್ನೂ ಉಲ್ಲೇಖಿಸದೇ ಹಿಂದಿ ಚಿತ್ರರಂಗದ ದೊಡ್ಡ ನಟಿಯೋರ್ವರು ಕಿಂಗ್​ ಆಫ್​ ಕೋಥಾ ಚಿತ್ರತಂಡದವರ ಸಮಯ ವ್ಯರ್ಥ ಮಾಡಿದ್ದಾರೆ ಎಂದು ತಿಳಿಸಿದ್ದರು. ಈ ಕಾಮೆಂಟ್​ ಬಾಲಿವುಡ್​​ ನಟಿ ಸೋನಂ ಕಪೂರ್ ಅವರ ಕುರಿತು ಎಂದು ನೆಟ್ಟಿಗರು ಅಂದಾಜಿಸಿದ್ದರು. ಸೋನಂ ಸಖತ್​ ಟ್ರೋಲ್​ಗೊಳಗಾಗಿದ್ದರು. ಬಳಿಕ ರಾಣಾ ದಗ್ಗುಬಾಟಿ ಕ್ಷಮೆ ಕೂಡ ಕೇಳಿದ್ದರು. ಇದೀಗ ನಟ ದುಲ್ಕರ್​ ಸಲ್ಮಾನ್​​​ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಣಾ ಅವರು ಸೋನಂ ಅವರ ಹೆಸರನ್ನು ಉಲ್ಲೇಖಿಸದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯಿತು. ವಿವಾದವನ್ನು ಗಮನಿಸಿ ರಾಣಾ ಕೂಡಲೇ ಕ್ಷಮೆಯಾಚಿಸಿದ್ದರು.

  • I am genuinely troubled by the negativity that has been aimed at Sonam due to my comments, that are totally untrue and were meant entirely in a light-hearted manner. As friends, we often exchange playful banter, and I deeply regret that my words have been misinterpreted.
    I take…

    — Rana Daggubati (@RanaDaggubati) August 15, 2023 " class="align-text-top noRightClick twitterSection" data=" ">

ಕೆಲ ದಿನಗಳ ಬಳಿಕ ನಾಯಕ ನಟ ದುಲ್ಕರ್​ ಸಲ್ಮಾನ್​​ ಈ ವಿಷಯದ ಕುರಿತು ತಮ್ಮ ಮೌನ ಮುರಿದಿದ್ದಾರೆ. ಸಮಸ್ಯೆಯೊಳಗೆ ಆಳವಾಗಿ ಹೋಗುವುದರ ಬದಲು, ತಟಸ್ಥ ನಿಲುವು ತೆಗೆದುಕೊಂಡರು. ದುಲ್ಕರ್​ ಸಲ್ಮಾನ್​ ಪ್ರತಿಕ್ರಿಯೆಯು ಅವರ ಡಿಪ್ಲೊಮ್ಯಾಟಿಕ್​ ವಿಧಾನವನ್ನು ಪ್ರತಿನಿಧಿಸುತ್ತದೆ. ತಮ್ಮ ಉದ್ಯಮದಲ್ಲಿ ಸಕಾರಾತ್ಮಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ. ತಮ್ಮ ಸಹುದ್ಯೋಗಿಗಳು, ಗೆಳೆಯರೊಂದಿಗಿನ ಸೌಹಾರ್ದತೆಯನ್ನು ಎತ್ತಿ ಹಿಡಿದರು.

''ಇದು ಅವರ ಹೇಳಿಕೆ. ಹಾಗಾಗಿ ಈ ವಿಷಯದಲ್ಲಿ ನಾನು ಧುಮುಕುವುದಿಲ್ಲ. ನಾನು ಎಲ್ಲರನ್ನು ಮೆಚ್ಚಿಕೊಳ್ಳುತ್ತೇನೆ. ಸಹ ನಟರು, ಸಿನಿ ಉದ್ಯಮದ ಗೆಳೆಯರು ಸೇರಿದಂತೆ ಅದ್ಭುತ ಸ್ನೇಹಿತರ ಗುಂಪನ್ನು ಹೊಂದಿದ್ದೇನೆಂದು ಭಾವಿಸುತ್ತೇನೆ. ನಾನು ಸರಳ ಸ್ವಭಾವದವನು. ನಾನು ಸಾಮಾನ್ಯವಾಗಿ ಯಾರನ್ನೂ ದೂರುವುದಿಲ್ಲ. ಈ ವಿಷಯದಲ್ಲಿ ನಾನು ಆರಾಮವಾಗಿದ್ದೇನೆ. ಅವರು ತಮ್ಮ ಹೇಳಿಕೆಯನ್ನು ಸಂಪೂರ್ಣವಾಗಿ ಪರಿಗಣಿಸಿರದ (ಕಾಮೆಂಟ್​ ಮಾಡಲೆಂದೇ ಉದ್ದೇಶಿಸಿ ಹೇಳಿಲ್ಲವಾಗಿರಬಹುದು) ಸಾಧ್ಯತೆಗಳಿವೆ. ಹಾಗಾಗಿಯೇ ಅವರು ಕ್ಷಮೆ ಕೇಳಿದ್ದಾರೆ. ಅವರು ನನ್ನ ಆಪ್ತ ಸ್ನೇಹಿತ. ಘಟನೆ ನಮ್ಮೆಲ್ಲರ ಮೇಲೆ ಪರಿಣಾಮ ಬೀರಿದೆ ಎಂದು ಅವರು ಕಳವಳ ವ್ಯಕ್ತಪಡಿಸಿರಬಹುದು, ಅದಕ್ಕಾಗಿಯೇ ಅವರು ಸ್ಪಷ್ಟನೆ ಕೊಟ್ಟಿರಲೂಬಹುದು'' - ರಾಣಾ ದಗ್ಗುಬಾಟಿ.

ಇದನ್ನೂ ಓದಿ: ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಜೊತೆ ಹೋಲಿಕೆ: ಪ್ರಬುದ್ಧವಾಗಿ ಪ್ರತಿಕ್ರಿಯಿಸಿದ ಸುಶ್ಮಿತಾ ಸೇನ್​

ಕಿಂಗ್​ ಆಫ್​ ಕೋಥಾ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆದಿತ್ತು. ಸೆಟ್​ನಲ್ಲಿ ದುಲ್ಕರ್​​ ಸಲ್ಮಾನ್​ ಅವರ ನಮ್ರತೆ ಬಗ್ಗೆ ರಾಣಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಿಂದಿ ಚಿತ್ರರಂಗದ ಟಾಪ್​ ಹೀರೋಯಿನ್​ ಚಿತ್ರೀಕರಣದ ವೇಳೆ ಪತಿಯೊಂದಿಗೆ ಲಂಡನ್​ ಶಾಪಿಂಗ್​ ಬಗ್ಗೆ ಮಾತನಾಡುತ್ತಾ ಕುಳಿತಿದ್ದರು. ಅವರಿಗಾಗಿ ಚಿತ್ರತಂಡ ಕಾಯುತ್ತಿತ್ತು. ಚಿತ್ರತಂಡದ ಸಮಯ ವ್ಯರ್ಥ ಮಾಡಿದ್ದರೆಂದು ತಿಳಿಸಿದ್ದರು.

ಇದನ್ನೂ ಓದಿ: ಅಯೋಧ್ಯೆಯ ಹನುಮಾನ್ ದೇವಸ್ಥಾನದಲ್ಲಿ ಸೂಪರ್​ಸ್ಟಾರ್​ ರಜನಿಕಾಂತ್ ಪ್ರಾರ್ಥನೆ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.