ETV Bharat / entertainment

ಡಾ.ರಾಜ್ ಕಪ್ ಕ್ರಿಕೆಟ್​: ನವೆಂಬರ್ 28ರಿಂದ ಡಿ.10 ರವರೆಗೆ ಟೂರ್ನಿ, ಜರ್ಸಿ ಬಿಡುಗಡೆ

Dr.Raj cup season 6 to start from Nov.28: ಡಾ.ರಾಜ್​ ಕಪ್ ಕ್ರಿಕೆಟ್​ 6ನೇ ಸೀಸನ್ನಿನ ಪಂದ್ಯಗಳು ವಿದೇಶಿ ಮೈದಾನಗಳಲ್ಲಿ ನವೆಂಬರ್​ 28ರಿಂದ ಪ್ರಾರಂಭವಾಗಲಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್​ ಜರ್ಸಿ ಬಿಡುಗಡೆ ಮಾಡಿದ್ದಾರೆ.

Dr. Raj Cup Season 6
ಡಾ.ರಾಜ್ ಕಪ್ ಸೀಸನ್​ 6
author img

By ETV Bharat Karnataka Team

Published : Nov 26, 2023, 8:06 AM IST

ಬೆಂಗಳೂರು: ಡಾ.ರಾಜ್​ ಕಪ್​ ಕ್ರಿಕೆಟ್ ಸೀಸನ್​ 6ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚಂದನವನದ ತಾರೆಯರು ತಯಾರಿ ಆರಂಭಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಮಾರಣಾರ್ಥವಾಗಿ ಟೂರ್ನಿ ಆಯೋಜಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಜರ್ಸಿ ಬಿಡುಗಡೆಗೊಳಿಸಿದರು.

Dr. Raj Cup Season 6
ಡಾ.ರಾಜ್ ಕಪ್ ಸೀಸನ್​ 6

ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, "ರಾಜ್ ಕಪ್ ಆರನೇ ಸೀಸನ್ ಅನ್ನು ವಿದೇಶದಲ್ಲಿ ಮಾಡುತ್ತಿರುವುದು ಕಷ್ಟವಾಗುತ್ತಿಲ್ಲ. ನನಗೆ ಚಿನ್ನದಂತಹ ನಾಯಕರು, ಮಾಲಕರು ಹಾಗೂ ಆಟಗಾರರು ಸಿಕ್ಕಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮಾಲಕರೇ ತಂಡವನ್ನು ರೆಡಿ ಮಾಡುತ್ತಿದ್ದಾರೆ. ಮುಂದಿನ ವರ್ಷ ಎಷ್ಟು ದೇಶಗಳಲ್ಲಿ ಪಂದ್ಯಾವಳಿ ಮಾಡುತ್ತೇನೆ ಎಂಬುದು ಗೊತ್ತಿಲ್ಲ. ದುಬೈನಲ್ಲಿ ಲೈವ್ ಸಿಗಲ್ಲ ಎಂದಿದ್ದರು. ಪ್ರಯತ್ನ ಮಾಡಿ ಮಾಡಿ ಅನುಮತಿ ತೆಗೆದುಕೊಂಡು ಬಂದಿದ್ದೇವೆ" ಎಂದರು.

ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28ರಿಂದ ಡಿಸೆಂಬರ್​ 10ರವರೆಗೆ ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿಸೆಂಬರ್ 3 ಮತ್ತು 4ಕ್ಕೆ ಸಿಂಗಾಪುರ್, ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್‌ನಲ್ಲಿ ಲೀಗ್ ಮ್ಯಾಚ್ ನಡೆಯಲಿವೆ. ಕರ್ನಾಟಕದಲ್ಲಿ ಫೈನಲ್ ನಡೆಯಲಿದೆ.

Dr. Raj Cup Season 6
ಡಾ.ರಾಜ್ ಕಪ್ ಸೀಸನ್​ 6

12 ತಂಡಗಳು: ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿವೆ.

1. ಸಮೃದ್ಧಿ ಫೈಟರ್ಸ್ -ಮಂಜುನಾಥ್, ಮಾಲೀಕ
2.DX ಮ್ಯಾಕ್ಸ್ ಲೈನ್ಸ್ -ದಯಾನಂದ್, ಮಾಲೀಕ
3. ರಾಮನಗರ ರಾಕರ್ಸ್ -ಮಹೇಶ್ ಗೌಡ, ಮಾಲೀಕ
4. ELV ಲಯನ್ ಕಿಂಗ್ಸ್ -ಪುರುಷೋತ್ತಮ್ ಭಾಸ್ಕರ್, ಮಾಲೀಕ
5.AVR ಟಸ್ಕರ್ಸ್ -ಅರವಿಂದ್ ರೆಡ್ಡಿ, ಮಾಲೀಕ
6.KKR ಕಿಂಗ್ಸ್ -ಲಕ್ಷ್ಮೀ ಕಾಂತ್ ರೆಡ್ಡಿ, ಮಾಲೀಕ
7.Rabit ರೇಸರ್ಸ್ -ಅರು ಗೌಡ, ಮಾಲೀಕ
8.ಮಯೂರ ರಾಯಲ್ಸ್ -ಸೆಂಥಿಲ್, ಮಾಲೀಕ
9.ರಾಯಲ್ ಕಿಂಗ್ಸ್ -ಶ್ರೀರಾಮ್ ಮತ್ತು ಮುಖೇಶ್, ಮಾಲೀಕ
10.ಕ್ರಿಕೆಟ್ ನಕ್ಷತ್ರ -ನಕ್ಷತ್ರ ಮಂಜು, ಮಾಲೀಕ
11.ಅಶು ಸೂರ್ಯ ಸೂಪರ್ ಸ್ಟಾರ್ -ರಂಜಿತ್, ಪಯಾಜ್ ಖಾನ್, ಮಾಲೀಕ
12.ರುಚಿರಾ ರೇಂಜರ್ಸ್ -ರಾಮ್, ಮಾಲೀಕ

ಆನಂದ್ ಆಡಿಯೋದಿಂದ ಸ್ಪೋರ್ಟ್ ಯೂಟ್ಯೂಬ್ ಚಾನೆಲ್: ನಟರಾದ ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಡಾ.ರಾಜ್ ಕಪ್​ಗಾಗಿ ಆನಂದ್ ಆಡಿಯೋ ಹೊಸ ಸ್ಪೋರ್ಟ್ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಿದ್ದು, ಪಂದ್ಯಗಳ ನೇರಪ್ರಸಾರ ನೋಡಬಹುದು.

ಇದನ್ನೂ ಓದಿ: ಮರಿ ಟೈಗರ್ ವಿನೋದ್ ಪ್ರಭಾಕರ್ ನೆಲ್ಸನ್ ಸಿನಿಮಾಗೆ ಸಿಕ್ಕಳು ನಾಯಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.