ETV Bharat / entertainment

ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್​ ಭೂಮಿ ಮೇಲಿರಲು ಇವರೇ ಕಾರಣ - dolly dhananjay latest news

ಅಂದು ಗರ್ಭಪಾತ ಆಗಿದ್ದರೆ ಇಂದು ನಟ ಡಾಲಿ ಧನಂಜಯ್ ಇರುತ್ತಿರಲಿಲ್ಲ. ಇಂಥ ಒಂದು ಸಂಗತಿ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಬೆಳಕಿಗೆ ಬಂದಿದೆ.

dolly dhananjay in weekend with Ramesh
'ವೀಕೆಂಡ್ ವಿತ್ ರಮೇಶ್'ನಲ್ಲಿ ಡಾಲಿ ಧನಂಜಯ್
author img

By

Published : Apr 16, 2023, 12:36 PM IST

ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'ನಲ್ಲಿ ಸ್ಯಾಂಡಲ್​ವುಡ್​ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​ ಭಾಗಿಯಾಗಿ ತಮ್ಮ ಜೀವನದ ಪಯಣವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ಹೌದು, ನಾಲ್ಕನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡಾಲಿ ಧನಂಜಯ್ ಆಗಮಿಸಿ ತಮ್ಮ ಸಾಧನೆಯ ಕಥೆಯನ್ನು ವಿವರಿಸಿದರು. ಬಾಲ್ಯ, ಶಿಕ್ಷಣ, ಕುಟುಂಬ, ಸಿನಿ ಪಯಣ ಹೀಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಕಾರ್ಯಕ್ರಮ ಜನರ ಮೆಚ್ಚುಗೆ ಸಂಪಾದಿಸಿದೆ. ಜೊತೆಗೆ ಹಲವು ವಿಚಾರಗಳ ಹಿನ್ನೆಲೆ ಭಾವುಕರಾಗಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಸೀಸನ್​​ 5ರ ಐದನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡಾಲಿ ಧನಂಜಯ್​ ಆಗಮಿಸಿದ್ದು, ಅವರ ಹುಟ್ಟಿನ ಬಗ್ಗೆ ಮಹತ್ವಹರ ಸಂಗತಿಯೊಂದು ಬೆಳಕಿಗೆ ಬಂದಿದೆ. ತಮ್ಮಗೆ ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಮೊದಲ ಬಾರಿ ಇದೇ ಕಾರ್ಯಕ್ರಮದಲ್ಲಿ ಭೇಟಿ ಆದರು. ಈ ಶೋ ಮೂಲಕ ಕೋಟ್ಯಂತರ ಕನ್ನಡಿಗರ ಎದುರು ತಮ್ಮ 'ಎರಡನೇ ತಾಯಿಗೆ ಧನ್ಯವಾದ ಅರ್ಪಿಸಿದರು.

ಧನಂಜಯ್​ ಅವರ ಪೋಷಕರಿಗೆ ಒಟ್ಟು ನಾಲ್ಕು ಮಕ್ಕಳು. ಧನಂಜಯ್​ಗೂ ಮೊದಲು ಇಬ್ಬರು ಹೆಣ್ಣು ಮಕ್ಕಳು, ಮೂರನೇದ್ದು ಮಗು ಗಂಡು. ಬಳಿಕ ಅವರ ತಾಯಿ ಗರ್ಭ ಧರಿಸಿದಾಗ, ಗರ್ಭಪಾತ ಮಾಡಿಸಲು ಮುಂದಾಗಿದ್ದರು. ಈಗಾಗಲೇ ಮೂರು ಮಕ್ಕಳಿದ್ದಾರೆ. ಹೆಚ್ಚು ಮಕ್ಕಳಾದರೆ ಅವರಿಗೆ ಬೇಕಾದ ಸೌಲಭ್ಯ ತಲುಪಿಸಲು ಕಷ್ಟವಾಗಲಿದೆ ಎಂದು ಈ ನಿರ್ಧಾರ ಕೈಗೊಂಡಿದ್ದರು. ಆಸ್ಪತ್ರೆಗೆ ತೆರಳಿದಾಗ ವೈದ್ಯೆ ಮಣಿಕರ್ಣಿಕಾ ಎಂಬುವವರು ಧನಂಜಯ್​ ಅವರ ಪೋಷಕರಿಗೆ, ಮಗು ಜನಿಸಲು ಬುದ್ಧಿ ಹೇಳಿ ಕಳುಹಿಸಿದರು. ವೈದ್ಯರ ಮಾತಿನಿಂದ ಪ್ರಭಾವಿತರಾಗಿ ಗರ್ಭಪಾತ ಮಾಡಿಸುವ ಯೋಚನೆ ಕೈಬಿಟ್ಟು, ಮಗು ಮಾಡಿಕೊಳ್ಳಲು ಮುಂದಾದರು. ನಾಲ್ಕನೇ ಮಗುವಾಗಿ ಧನಂಜಯ್​ ಜನಿಸಿದರು. ತಾಯಿಯ ಹೆರಿಗೆ ಮಾಡಿಸಿದ್ದು ಕೂಡ ಅದೇ ವೈದ್ಯರು.

ಇದನ್ನೂ ಓದಿ: ಅತ್ಯಂತ ಜನಪ್ರಿಯ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ

ಅಂದು ಗರ್ಭಪಾತ ಆಗಿದ್ದರೆ, ಇಂದು ಕನ್ನಡ ಚಿತ್ರರಂಗದಲ್ಲಿ ಈ ಪ್ರತಿಭಾನ್ವಿತ ನಟ ಇರಲು ಸಾಧ್ಯವಿರುತ್ತಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಆ ವೈದ್ಯೆಗೆ ನಟ ಡಾಲಿ ಧನಂಜಯ್​​ ಧನ್ಯವಾದ ಅರ್ಪಿಸಿದ್ದಾರೆ. ಅಂದು ನೀವು ಆ ನಿರ್ಧಾರ ಕೈಗೊಳ್ಳದಿದ್ದರೆ, ಇಂದು ಬಹಳ ಮಂದಿಯ ಪ್ರೀತಿ ಕಳೆದುಕೊಳ್ಳುತ್ತಿದ್ದೆ ಎಂದು ಹೇಳಿ ಭಾವುಕರಾದರು.

ಇದನ್ನೂ ಓದಿ: ಚೇತನ್ ವೀಸಾ ರದ್ದು: ಅಮೆರಿಕಕ್ಕೆ ಹೋಗಲ್ಲ, ಇಲ್ಲೇ ಇರುತ್ತೇನೆಂದ ನಟ

ರಾಜಕೀಯವೇ ಗೊತ್ತಿಲ್ಲದ ಆ ಸಂದರ್ಭದಲ್ಲೂ ಕಾಲೇಜ್​ ಚುನಾವಣೆಯ ಮತಗಳಿಗೆ ರೆಸಾರ್ಟ್ ರಾಜಕೀಯವನ್ನೇ ಮಾಡಿದ್ದರು. ಜೊತೆಗೆ ಹಾಸ್ಟೆಲ್​ನಲ್ಲೂ ಧನಂಜಯ್ ಹವಾ ಕ್ರಿಯೇಟ್ ಮಾಡಿದ್ದರಂತೆ. ಕಾಲೇಜ್​ ಚುನಾವಣೆ ಸಂದರ್ಭ ಹುಡುಗರನ್ನಲ್ಲಾ ಸಂಘಟಿಸಿ, ಊರು ಬಿಟ್ಟು ಹೋಗಿ, ಬಳಿಕ ಚುನಾಚವಣೆ ದಿನದಂತು ಕಾಣಿಸಿಸಿಕೊಂಡಿದ್ದರು. ಆ ಎಲೆಕ್ಷನ್​ನಲ್ಲಿ ಡಾಲಿ ಗೆದ್ದು ಬೀಗಿದ್ದರು. ಡಾಲಿ ಅವರ ತಂಡ ಡಾಲಿ ಲೋಕಲ್ ಗ್ಯಾಂಗ್ ಎಂದೇ ಫೇಮಸ್​ ಅಗಿದ್ದರು. ಇನ್ನೂ ದೊಡ್ಡ ಸ್ನೇಹಿತರ ಗ್ಯಾಂಗ್​ ಅನ್ನೇ ಹೊಂದಿದ್ದು, ಅವರೂ ಕೂಡ ಧನಂಜಯ್​ ಬಗ್ಗೆ ಈ ಕಾರ್ಯಕ್ರಮದಲ್ಲಿ ಗುಣಗಾನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.