ETV Bharat / entertainment

ಪಠಾಣ್ ಧಮಾಕ!​​: ಪ್ರೇಕ್ಷಕ ಪ್ರಭುವಿಗೆ ಧನ್ಯವಾದ ಅರ್ಪಿಸಿದ ನಿರ್ದೇಶಕ - ಪಠಾಣ್ ಲೇಟೆಸ್ಟ್ ನ್ಯೂಸ್

ಪಠಾಣ್ ಸಿನಿಮಾದ​​​ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರಿಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಧನ್ಯವಾದ ಅರ್ಪಿಸಿದ್ದಾರೆ.

pathan achievement
ಪಠಾಣ್ ಸಾಧನೆ
author img

By

Published : Feb 23, 2023, 5:04 PM IST

'ಪಠಾಣ್' ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾಗಿದೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಸಾವಿರ ಕೋಟಿ ಕ್ಲಬ್​​ ಸೇರುವ ಮೂಲಕ ದಾಖಲೆ ಸೃಷ್ಟಿಸಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ಹಿಂದಿ ಭಾಷೆಯಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ವಿಶ್ವಾದ್ಯಂತ ಈವರೆಗೆ 1,000 ಕೋಟಿ ರೂ. ಬಾಚಿಕೊಂಡಿದೆ. ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಬಾಲಿವುಡ್‌ಗೆ ದೊಡ್ಡ ಮಟ್ಟಿನ ಯಶಸ್ಸು ಸಿಗುವುದು ಬಹಳ ಮುಖ್ಯವಾಗಿತ್ತು. ಕೋವಿಡ್‌ನಿಂದಾಗಿ ಚಿತ್ರರಂಗದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಆದ್ರೆ ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಮುನ್ನಡೆ ಸಾಧಿಸಿವೆ. ಇದರಿಂದಾಗಿ ಪ್ರೇಕ್ಷಕರು ಬಾಲಿವುಡ್ ಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ. ಸದ್ಯ ಪಠಾಣ್ ಗಳಿಸಿದ ಯಶಸ್ಸು ಅಭೂತಪೂರ್ವ, ಅತ್ಯಮೂಲ್ಯವಾದದ್ದು.

  • #Pathaan benchmarks…
    Crossed ₹ 50 cr: Day 1
    ₹ 100 cr: Day 2
    ₹ 150 cr: Day 3
    ₹ 200 cr: Day 4
    ₹ 250 cr: Day 5
    ₹ 300 cr: Day 7
    ₹ 350 cr: Day 9
    ₹ 400 cr: Day 12
    ₹ 450 cr: Day 18
    ₹ 500 cr: Day 28#India biz. Nett BOC.
    ⭐️ NOTE: #Hindi version ONLY. pic.twitter.com/jAHvzlpCeD

    — taran adarsh (@taran_adarsh) February 22, 2023 " class="align-text-top noRightClick twitterSection" data=" ">

ಪಠಾಣ್​ ಯಶಸ್ಸಿನ ನಂತರ ನಿರ್ದೇಶಕ ಸಿದ್ಧಾರ್ಥ್ ಆನಂದ್, "ಪಠಾಣ್ ಜಾಗತಿಕವಾಗಿ ಜನರನ್ನು ರಂಜಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಮತ್ತು ನಾನು ಕೃತಜ್ಞ. ವಿಶ್ವಾದ್ಯಂತ ಚಿತ್ರ 1,000 ಕೋಟಿ ರೂಪಾಯಿ ಗಳಿಸಿದ್ದು ಮತ್ತು ಹಿಂದಿ ಆವೃತ್ತಿಯಲ್ಲಿ 500 ಕೋಟಿ ರೂ. ಕಲೆ ಹಾಕಿದ್ದು ಐತಿಹಾಸಿಕ ಸಾಧನೆ. ಆ ಪ್ರೀತಿಗಾಗಿ ಪ್ರೇಕ್ಷಕರಿಗೆ ಧನ್ಯವಾದಗಳು. ಪಠಾಣ್ ಬಗ್ಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಒಬ್ಬ ನಿರ್ದೇಶಕನಾಗಿ ಜಾಗತಿಕ ಮಟ್ಟದಲ್ಲಿ ಹಲವಾರು ಜನರಿಗೆ ಖುಷಿ ಕೊಡುವ ಸಿನಿಮಾ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ" ಎಂದು ಸೋಷಿಯಲ್​ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಪಠಾಣ್' ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಲು ಬಯಸಿದ್ದರ ಬಗ್ಗೆ ಸಿದ್ಧಾರ್ಥ್ ಒಪ್ಪಿಕೊಂಡಿದ್ದಾರೆ. "ನಾವು ನಮ್ಮಲ್ಲಿರುವ ಸ್ಟಾರ್ ಕಾಸ್ಟ್‌ನೊಂದಿಗೆ ಪಠಾಣ್ ನಿರ್ಮಿಸಲು ಪ್ರಾರಂಭಿಸಿದ ವೇಳೆ ನಾವು ದೊಡ್ಡ ಸಂಖ್ಯೆಯನ್ನು (ಕಲೆಕ್ಷನ್​ ವಿಚಾರ) ಬೆನ್ನಟ್ಟುತ್ತಿದ್ದೇವೆ ಎಂದು ನನಗೆ ತಿಳಿದಿತ್ತು. ಆದರೆ ನನ್ನ ಕನಸಿನಲ್ಲೂ ಸಹ ಪಠಾಣ್ 400 ಕೋಟಿ ರೂಪಾಯಿ ದಾಟುವ ಹಿಂದಿ ಚಿತ್ರವಾಗಲಿದೆ ಎಂದು ನಾನು ಊಹಿಸಿರಲಿಲ್ಲ. ಇದು ನಂಬಲಾಗದ ಸಾಧನೆ. ಇದು ಯಶ್ ರಾಜ್ ಫಿಲ್ಮ್ಸ್ ಮತ್ತು ನಮ್ಮೆಲ್ಲರನ್ನು ಉತ್ತಮವಾದದ್ದನ್ನು ಮಾಡಲು ಮತ್ತಷ್ಟು ಪ್ರೇರೇಪಿಸುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಆರ್​ಆರ್​ಆರ್ ಸ್ಟಾರ್​ ರಾಮ್​ ಚರಣ್​​

"ಪಠಾಣ್ ದಾಖಲೆಗಳನ್ನು ಮುರಿದಿರುವುದು ಅಪರೂಪದ ಸಾಧನೆ. ಪ್ರಪಂಚದಾದ್ಯಂತ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಚಲನಚಿತ್ರವನ್ನು ತಲುಪಿಸುವಲ್ಲಿ ನಾವು ಒಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ನನಗೆ ತಿಳಿದಿದೆ. ಹಾಗಾಗಿ ಇನ್ಮುಂದೆ ನಾನು ಮಾಡುವ ಪ್ರತಿ ಚಿತ್ರವೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಗ್ಯಾಪ್ ಹಾದು ಹೋಗಬೇಕು. ಅಪರೂಪದ ಸಾಧನೆಯಾದ ಕಾರಣ ಇಡೀ ಹಿಂದಿ ಚಿತ್ರರಂಗವವೇ ಖುಷಿ ಪಡಬೇಕಿದೆ" ಎಂದು ಹರ್ಷ ಹಂಚಿಕೊಂಡರು.

ಇದನ್ನೂ ಓದಿ: ಸಾವಿರ ಕೋಟಿ ಕ್ಲಬ್ ಸೇರಿದ ಪಠಾಣ್​: ಸೆಲೆಬ್ರೇಷನ್​​ ವಿಡಿಯೋ ಶೇರ್ ಮಾಡಿದ ಚಿತ್ರತಂಡ​​

ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.