ವಿಶ್ವಾದ್ಯಂತ ಭಾರತದ ಆರ್ಆರ್ಆರ್ ಸಿನಿಮಾ ಕ್ರೇಜ್ ಮುಂದುವರೆದಿದೆ. ಕಥೆ ಹೆಣೆದ ನಿರ್ದೇಶಕರ ಶೈಲಿ, ಸೌತ್ ಸೂಪರ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯಕ್ಕೆ ದೇಶ, ವಿದೇಶಗಳಿಂದಲೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂವರು ಪ್ರತಿಭಾವಂತರಿಗೆ ಈಗಾಗಲೇ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ. ಇದೀಗ ವಿಶ್ವದ ಖ್ಯಾತ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರಾನ್ (James Cameron) ಬಹುಬೇಡಿಕೆಯ ನಟ ರಾಮ್ ಚರಣ್ ಅವರನ್ನು ಹಾಡಿ ಹೊಗಳಿದ್ದಾರೆ.
ಜಗತ್ತಿನ ಸೂಪರ್ ಹಿಟ್ ಅವತಾರ್, ಟೈಟಾನಿಕ್ನಂತಹ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿರುವ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಈ ಸಿನಿಮಾಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. 'ಟೈಟಾನಿಕ್' ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಆರ್ಆರ್ಆರ್ ನಾಯಕ ನಟ ರಾಮ್ ಚರಣ್ ಅವರ ಪಾತ್ರದ ಬಗೆಗೂ ಮಾತನಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
-
The Greatest @JimCameron Speaks Up for the Greatest Character ARC of RAMARAJU @AlwaysRamCharan 🦁🔥🏹#ManOfMassesRamCharanpic.twitter.com/CwQErt2dCD
— Trends RamCharan (@TweetRamCharan) February 11, 2023 " class="align-text-top noRightClick twitterSection" data="
">The Greatest @JimCameron Speaks Up for the Greatest Character ARC of RAMARAJU @AlwaysRamCharan 🦁🔥🏹#ManOfMassesRamCharanpic.twitter.com/CwQErt2dCD
— Trends RamCharan (@TweetRamCharan) February 11, 2023The Greatest @JimCameron Speaks Up for the Greatest Character ARC of RAMARAJU @AlwaysRamCharan 🦁🔥🏹#ManOfMassesRamCharanpic.twitter.com/CwQErt2dCD
— Trends RamCharan (@TweetRamCharan) February 11, 2023
'ಆರ್ಆರ್ಆರ್' ಚಿತ್ರದಲ್ಲಿ ರಾಮ್ ಚರಣ್ ಅವರ ಪಾತ್ರ ನನಗೆ ಬಹಳ ಇಷ್ಟವಾಯಿತು. ಆ ಪಾತ್ರದಲ್ಲಿ ಹಲವು ವೈವಿಧ್ಯ (ಭಾವನಾತ್ಮಕ ವಿಷಯಗಳು)ಗಳಿವೆ. ಅಂತಹ ಪಾತ್ರಗಳನ್ನು ನಿರ್ವಹಿಸುವುದು ನಿಜವಾಗಿಯೂ ಕಷ್ಟ. ನಿರ್ದೇಶಕ ರಾಜಮೌಳಿ ಅವರು ನಟರ ಪಾತ್ರವನ್ನು ಅದ್ಭುತವಾಗಿ ಮೂಡಿಬರುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಕಥೆ ಹೇಳುವ ರೀತಿ ನನಗೆ ಶೇಕ್ಸ್‌ಪಿಯರ್ ಅವರನ್ನು ನೆನಪಿಸುತ್ತದೆ. ಇತ್ತೀಚೆಗಷ್ಟೇ ರಾಜಮೌಳಿ ಅವರನ್ನು ಭೇಟಿಯಾದಾಗಲೂ ಅದನ್ನೇ ಹೇಳಿದ್ದೆ. ಆದರೆ ಅಂದು ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಮತ್ತೆ ಅವರ ಜೊತೆ ಮಾತನಾಡಬೇಕು'' ಎಂದು ಜೇಮ್ಸ್ ಕ್ಯಾಮರಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮ್ ಚರಣ್ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ನಾಯಕನಿಗೆ ವಿಶ್ವಾದ್ಯಂತ ಬೆಂಬಲ, ಮೆಚ್ಚುಗೆ ಸಿಗುತ್ತಿರುವುದನ್ನು ನೋಡಿ ಹೆಮ್ಮೆ ಪಡುತ್ತಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಆಗಿದ್ದ ರಿಷಬ್ ಈಗ ಪ್ಯಾನ್ ಇಂಡಿಯಾ ಸ್ಟಾರ್...ಶೆಟ್ರ ಮೇಲಿದೆ ದೊಡ್ಡ ಜವಾಬ್ದಾರಿ!
ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರ ಅಭೂತಪೂರ್ವ ಯಶಸ್ಸು ಕಂಡು ಈಗಾಗಲೇ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 'ನಾಟು ನಾಟು' ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆಗೆ ನಾಮಿನೇಟ್ ಕೂಡಾ ಆಗಿದೆ. ಈವರೆಗೆ ಗೋಲ್ಡನ್ ಗ್ಲೋಬ್ಸ್ ಅವಾರ್ಡ್, ಜಪಾನ್ನಲ್ಲಿ 46ನೇ ಅಕಾಡೆಮಿ ಅವಾರ್ಡ್ ಪ್ರಶಸ್ತಿ, ಗೋಲ್ಡನ್ ಟೊಮಟೊ ಅವಾರ್ಡ್, ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್, ಅಟ್ಲಾಂಟಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.
ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಾಂ ಭೀಮ್ ಅವರ ಕಾಲ್ಪನಿಕ ಕಥೆಯನ್ನು ಆರ್ಆರ್ಆರ್ ಸಿನಿಮಾ ಹೊಂದಿದೆ. ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದು, ಜಗತ್ತಿನಾದ್ಯಂತ 1,200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಆನಂದ್ ಮಹೀಂದ್ರಗೆ 'ನಾಟು ನಾಟು' ಹುಕ್ ಸ್ಟೆಪ್ಸ್ ಕಲಿಸಿಕೊಟ್ಟ ರಾಮ್ ಚರಣ್- ವಿಡಿಯೋ