ETV Bharat / entertainment

'ಮೊದಲ ಪ್ರೇಮ ವಿವಾಹ ವಿಫಲ, ಮತ್ತೊಂದು ಮದುವೆ ಬೇಕಿತ್ತಾ': ನಿರ್ದೇಶಕ ಗುರುಪ್ರಸಾದ್

author img

By

Published : Jun 17, 2023, 4:12 PM IST

'ರಾಜು ಜೇಮ್ಸ್ ಬಾಂಡ್' ಚಿತ್ರದ 'ಬೇಕಿತ್ತಾ ಬೇಕಿತ್ತಾ' ಹಾಡಿನ ಬಗ್ಗೆ ನಿರ್ದೇಶಕ ಗುರುಪ್ರಸಾದ್ ವಿಶೇಷವಾಗಿ ಮಾತನಾಡಿದ್ದಾರೆ.

director Guruprasad
ನಿರ್ದೇಶಕ ಗುರುಪ್ರಸಾದ್
ನಿರ್ದೇಶಕ ಗುರುಪ್ರಸಾದ್

'ರಾಜು ಜೇಮ್ಸ್ ಬಾಂಡ್' ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಚಿತ್ರ. 'ಕನ್ನಡ ಮೀಡಿಯಂ ರಾಜು' ಚಿತ್ರದ ಬಳಿಕ ಗುರುನಂದನ್ ಅಭಿನಯಿಸುತ್ತಿರುವ ಸಿನಿಮಾ ಇದು. ಸದ್ಯ ಈ ಚಿತ್ರದ ಬೇಕಿತ್ತಾ ಬೇಕಿತ್ತಾ ಎಂಬ ಹಾಡು ಸಖತ್ ಕ್ರೇಜ್​ ಹುಟ್ಟಿಸಿದೆ. ಈ ಹಾಡು ಕೇಳಿದ ನಿರ್ದೇಶಕ ಗುರುಪ್ರಸಾದ್ ಅವರು ಖುದ್ದು ಈ ಹಾಡಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಹಾಡು ತಮ್ಮ ಬದುಕಿಗೆ ಹತ್ತಿರವಾಗಿದೆ ಎಂದು ಹೇಳುತ್ತಾ ತಮ್ಮ ಬದುಕಿನ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ, ಮಗು ಬಗ್ಗೆ ಮಾತನಾಡಿದ್ದಾರೆ.

ಎಲ್ಲಾ ಕಡೆಗೂ ಅಪ್ಲೈ ಆಗುವಂತಹ ವಿಶೇಷ ಹಾಡೊಂದು ಬಂದಿದೆ. ಈ 'ಬೇಕಿತ್ತಾ ಬೇಕಿತ್ತಾ' ಎಲ್ಲಾ ಸಂದರ್ಭಕ್ಕೂ ಅನ್ವಯ ಆಗುತ್ತದೆ ಎಂದು ಹೇಳಿದ ಅವರು ಕೆಲ ಉದಾಹರಣೆಗಳನ್ನೂ ಕೊಟ್ಟಿದ್ದಾರೆ. ತುಂಬಾ ಇಷ್ಟ ಪಟ್ಟ ಹುಡುಗಿ ಕೈಕೊಟ್ಟು ಹೋದ್ರೆ ('ಬೇಕಿತ್ತಾ ಬೇಕಿತ್ತಾ'), ಕೈ ತುಂಬ ಸಂಬಳ ತರೋ ಮನ ಮಗ ಮನೆ ಬಿಟ್ಟು ಹೋದ್ರೆ ('ಬೇಕಿತ್ತಾ ಬೇಕಿತ್ತಾ'), ಸರ್ಕಾರಗಳು ಧಿಡೀರ್​ ಬದಲಾದ್ರೆ ('ಬೇಕಿತ್ತಾ ಬೇಕಿತ್ತಾ'), ಗ್ಯಾರೆಂಟಿಗಳು ಕೈ ಕೊಟ್ಟರೆ ('ಬೇಕಿತ್ತಾ ಬೇಕಿತ್ತಾ'), ಈ ಸಲ ಕಪ್​ ನಮ್ದೆ ಈ ಸಲ ಕಪ್​ ನಮ್ದೇ ಎಂದು ಸೋತು ಮನೆಗೆ ಹೋದಾಗ ಕೊಹ್ಲಿ ಸಾಹೇಬ್ರ ಪತ್ನಿ ಅನುಷ್ಕಾ ಕೇಳೋ ಪ್ರಶ್ನೆ ('ಬೇಕಿತ್ತಾ ಬೇಕಿತ್ತಾ'), ಆರ್​ಸಿಬಿ ಮೇಲೆ ಬೆಟ್​ ಮಾಡಿ ಸೋತವರ ಪತ್ನಿಯರು ಏನು ಕೇಳ್ತಾರೆ ('ಬೇಕಿತ್ತಾ ಬೇಕಿತ್ತಾ') ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದು ನನ್ನ ಜೀವನಕ್ಕೇ ಅಪ್ಲೈ ಮಾಡಿದಂತಿದೆ. ಮೊದಲ ಪ್ರೇಮ ವಿಫಲ ಆಯ್ತು. ಡಿವೋರ್ಸ್​ ಕೂಡ ಆಯ್ತು ('ಬೇಕಿತ್ತಾ ಬೇಕಿತ್ತಾ'). ಇಷ್ಟೆಲ್ಲಾ ಆದ್ಮೇಲೆ ಇನ್ನೊಂದು ಮದುವೆ ಆದೆ, 2 ವರ್ಷದ ಮಗು ಕೂಡ ಇದೆ ('ಬೇಕಿತ್ತಾ ಬೇಕಿತ್ತಾ') ಎಂದು ಹೇಳಿದ್ದಾರೆ.

ಇದನ್ನೂ ಓದಿ: Kangana Ranaut - ಮದುವೆ ಬಗ್ಗೆ ಬಹಿರಂಗಪಡಿಸಿದ ನಟಿ ಕಂಗನಾ ರಣಾವತ್

ರಾಜು ಜೇಮ್ಸ್ ಬಾಂಡ್ ಚಿತ್ರದ ಮೊದಲ ಹಾಡು ಬೇಕಿತ್ತಾ ಬೇಕಿತ್ತಾ.. ಇತ್ತೀಚೆಗಷ್ಟೇ ಅನಾವರಣಗೊಂಡಿದ್ದು, ಈಗಾಗ್ಲೇ ಅರ್ಧ ಮಿಲಿಯನ್ ವೀವ್ಸ್ ಪಡೆದುಕೊಂಡಿದೆ‌. ಅನೂಪ್ ಸೀಳಿನ್ ಸಂಗೀತವಿದ್ದು, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ. ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದಾರೆ. ಲವ್ವು ನೋವಿನ ಎಣ್ಣೆ‌ ಹಾಡು ಇದಾಗಿದ್ದು, ಕೇಳೋದಕ್ಕೆ ಕ್ಯಾಚಿಯಾಗಿದೆ.

ಇದನ್ನೂ ಓದಿ: Adipurush: ಶೂರ್ಪನಖಿ ಪಾತ್ರಧಾರಿ ತೇಜಸ್ವಿನಿ ಪಂಡಿತ್ ಬಗ್ಗೆ ನಿಮಗೆಷ್ಟು ಗೊತ್ತು?

ಮೊದಲ ಬಾರಿಗೆ ನಟ ಗುರುನಂದನ್ ವಿರಾಗಿ ವೇಷದಲ್ಲಿ ಕಾಣಿಸಿಕೊಂಡಿದ್ದು, ಈ ಹಾಡು ಅವರಿಗೆ ಪಕ್ಕಾ ಹೇಳಿ ಮಾಡಿಸಿದಂತಿದೆ. ಗುರುನಂದನ್ ಅಲ್ಲದೇ ಮೃದುಲಾ, ರವಿಶಂಕರ್, ಅಚ್ಚುತ್, ಚಿಕ್ಕಣ್ಣ, ಸಾಧುಕೋಕಿಲಾ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಮಂಜುನಾಥ್ ವಿಶ್ಚಕರ್ಮ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಬೇಕಿತ್ತಾ ಬೇಕಿತ್ತಾ ಹಾಡಿನಿಂದ ಸದ್ದು ಮಾಡ್ತಿರೋ ರಾಜು ಜೇಮ್ಸ್ ಬಾಂಡ್ ಚಿತ್ರ ಆದಷ್ಟು ಬೇಗ ಪ್ರೇಕ್ಷಕರೆದುರಿಗೆ ಬರಲಿದೆಯಂತೆ. ಸಿನಿಮಾ ಶೀಘ್ರ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.