ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಭರವಸೆ ಹುಟ್ಟಿಸಿರುವ ಆರೋನ್ ಕಾರ್ತಿಕ್ ವೆಂಕಟೇಶ್ ಇದೀಗ ವಿಭಿನ್ನ ಕಥಾಹಂದರ ಹೊಂದಿರುವ 'ಪರಿಶುದ್ಧಂ' ಎಂಬ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸ್ಪರ್ಶ ರೇಖಾ ಹಾಗೂ ಗಾಳಿಪಟ ಬೆಡಗಿ ಮುಖ್ಯ ಭೂಮಿಕೆಯಲ್ಲಿರೋ 'ಪರಿಶುದ್ಧಂ' ಸಿನಿಮಾ ಇದಾಗಿದ್ದು ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡಲಾಯಿತು. ಕಲಾವಿದರ ಸಂಘದಲ್ಲಿ ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

ಮೊದಲಿಗೆ ಮಾತನಾಡಿದ ಆರೋನ್ ಕಾರ್ತಿಕ್, ಚಿತ್ರಕ್ಕೆ ಕಥೆ, ಸಾಹಿತ್ಯ, ಸಂಗೀತ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ನಿರ್ಮಾಣದಲ್ಲಿ ಪಾಲುದಾರನಾಗಿದ್ದೇನೆ. ಮದುವೆ ಅನ್ನುವ ಪದ್ದತಿ ಪರಿಶುದ್ದವಾದದು. ಗಂಡ - ಹೆಂಡತಿ ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶ ಆಗಬಾರದೆಂದು ಸಂದೇಶದಲ್ಲಿ ಈ ಚಿತ್ರವನ್ನು ತರಲಾಗುತ್ತದೆ. ಇದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ.

ನಟಿ ಕಲ್ಪನಾರಂತೆ ಸ್ಪರ್ಶ ರೇಖಾ ತೂಕದ ಪಾತ್ರವನ್ನು ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಎಂ.ಡಿ.ಕೌಶಿಕ್ ಕೊನೆ ದೃಶ್ಯದಲ್ಲಿ ಬರಲಿದ್ದು, ಭಾಗ-2ರಲ್ಲಿ ಇವರಿಂದಲೇ ಸಿನಿಮಾವು ಶುರುವಾಗುತ್ತದೆ. ಬೆಂಗಳೂರು, ಮಂಗಳೂರು, ತುಮಕೂರು, ಬ್ಯಾಂಕಾಕ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಇಂಗ್ಲೀಷ್ ಗೀತೆಯೊಂದು ಇರಲಿದ್ದು, ಇದನ್ನು ಗ್ರ್ಯಾಮಿ ಪ್ರಶಸ್ತಿಗೆ ಕಳುಹಿಸಲಾಗುವುದು. ಎರಡೇ ಸ್ವರದಲ್ಲಿ ’ಕ’ ಅಕ್ಷರದೊಂದಿಗೆ ಹಾಡನ್ನು ಬರೆಯಲಾಗಿದ್ದು ಎಂ.ಡಿ.ಪಲ್ಲವಿ ಧ್ವನಿಯಾಗಿದ್ದಾರೆಂದು ಸಿನಿಮಾದ ಕುರಿತಂತೆ ಮಾಹಿತಿ ನೀಡಿದರು.
- " class="align-text-top noRightClick twitterSection" data="">
ನಂತರ ಮಾತನಾಡಿದ ಸ್ಪರ್ಶ ರೇಖಾ, ನಿರ್ದೇಶರು ವೇಗವಾಗಿ ಕಥೆ ಹೇಳಿದಾಗ ಮತ್ತೊಮ್ಮೆ ಹೇಳಿ ಅಂತ ಕೋರಿಕೊಂಡೆ. ಇಂತಹ ಪಾತ್ರ ಮಾಡೋಕೆ ನನ್ನಿಂದ ಆಗುತ್ತಾ ಎಂಬ ಗೊಂದಲದಲ್ಲಿದ್ದೆ. ಆದರೂ ಧೈರ್ಯದಿಂದ ಮಾಡಿದೆ. ಇಂತಹ ಅವಕಾಶವನ್ನು ನೀಡಿದ್ದಕ್ಕೆ ಥ್ಯಾಂಕ್ಸ್. ಪ್ರತಿಯೊಂದು ಫ್ರೇಮ್ ಚೆನ್ನಾಗಿ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕಾದರೆ, ಬೇರೆ ಭಾಷೆಯಲ್ಲಿ ಸುತ್ತಾಡಿಕೊಂಡು ಬಂದರೆ ಮಾತ್ರ ಇಲ್ಲಿ ಸ್ವಾಗತ ಸಿಗುತ್ತದೆ. ಅದು ಈಗ ಬದಲಾವಣೆಯಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡರು.

ರೋಹನ್ ಕಿಡಿಯಾರ್ ಬಂಡವಾಳ ಹೂಡುವ ಜತೆಗೆ ಸ್ಪರ್ಶ ರೇಖಾ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಕುಮಾರ್ ರಾಥೋಡ್ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿರುವ ದಿಶಾ ಪೂವಯ್ಯ ಗೈರುಹಾಜರಿದ್ದರು. ಉಳಿದಂತೆ ಭಾರ್ಗವ್, ಅರ್ಚನಾ, ವಿಕ್ಟರಿವಾಸು, ಕುರಿರಂಗ, ಮೈಸೂರುರಮಾನಂದ್, ರಾಜ್‌ಚರಣ್, ದುಬೈರಫೀಕ್, ಎಂ.ಡಿ.ಕೌಶಿಕ್ ಮುಂತಾದವರು ನಟಿಸಿದ್ದಾರೆ. ಸದ್ಯ ಟ್ರೈಲರ್ನಿಂದಲೇ ಗಮನ ಸೆಳೆಯುತ್ತಿರೋ ಪರಿಶುದ್ಧಂ ಸದ್ಯದಲ್ಲೇ ತೆರೆಗೆ ಬರಲಿದೆ.
