ETV Bharat / entertainment

ಆಲಿಯಾ ಭಟ್ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ಹಿರಿಯ ನಟ ಧರ್ಮೇಂದ್ರ - ಆಲಿಯಾ ಧರ್ಮೇಂದ್ರ

ಆಲಿಯಾ ಭಟ್ ಜೊತೆಗಿನ ಫೋಟೋವನ್ನು ನಟ ಧರ್ಮೇಂದ್ರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Alia bhatt dharmendra photo
ಆಲಿಯಾ ಭಟ್ ಧರ್ಮೇಂದ್ರ ಫೋಟೋ
author img

By

Published : Jun 24, 2023, 12:06 PM IST

ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಬಹಳ ಸಮಯದ ನಂತರ ಮತ್ತೊಮ್ಮೆ ರೊಮ್ಯಾಂಟಿಕ್ ಸಿನಿಮಾದೊಂದಿಗೆ ಬರಲು ಸಜ್ಜಾಗಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಜೊತೆ ಆ್ಯಕ್ಷನ್​ ಕಟ್​ ಕೂಡ ಹೇಳಿದ್ದಾರೆ. 'ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ' (Rocky Aur Rani Ki Prem Kahani) ಚಿತ್ರ ಅತಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಈ ಬಾರಿ ಕರಣ್ ತಮ್ಮ ರೊಮ್ಯಾಂಟಿಕ್ ಸಿನಿಮಾದಲ್ಲಿ ಗಲ್ಲಿ ಬಾಯ್ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಹಿಟ್ ಜೋಡಿಯನ್ನು ಕರೆತಂದಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಟೀಸರ್ ಕೂಡ ಈಗಾಗಲೇ ಬಿಡುಗಡೆ ಆಗಿದೆ. ಇನ್ನು ಈ ಚಿತ್ರದಲ್ಲಿ ದೊಡ್ಡ ಪಾತ್ರದಲ್ಲಿ ನಟಿಸುತ್ತಿರುವ ಹಿರಿಯ ನಟ ಧರ್ಮೇಂದ್ರ ಅವರು ಈ ಚಿತ್ರಕ್ಕೆ ಸಂಬಂಧಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದ ನಾಯಕ ನಟಿ ಆಲಿಯಾ ಭಟ್ ಜೊತೆಗಿನ ಮುದ್ದಾದ ಫೋಟೋವನ್ನು ನಟ ಧರ್ಮೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಈ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧರ್ಮೇಂದ್ರ ಅವರ ಹಿರಿಯ ಮಗ ಸನ್ನಿ ಡಿಯೋಲ್ ಕೂಡ ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುಂದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಧರ್ಮೇಂದ್ರ, ''ಸ್ನೇಹಿತರೇ, ಪ್ರೀತಿಯ ಆಲಿಯಾ ನನ್ನ ಗತಕಾಲದ ಕೆಲವು ಝಲಕ್‌ಗಳನ್ನು ತೋರಿಸುತ್ತಿದ್ದಾರೆ. ರಾಣಿ ಔರ್ ರಾಕಿ ಕಿ ಪ್ರೇಮ್ ಕಹಾನಿ ಸೆಟ್​ನ ಫೋಟೋ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಆದಿಪುರುಷ್​ ವಿಷಯದಲ್ಲಿ ಆ ದೇವರು ಕೂಡ ನಿಮ್ಮನ್ನು ಕ್ಷಮಿಸಲ್ಲ': ಮನೋಜ್ ದೇಸಾಯಿ

ಈ ಸುಂದರ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಧರ್ಮೇಂದ್ರ ಮತ್ತು ಆಲಿಯಾ ಅವರ ಅಭಿಮಾನಿಗಳು ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆನ್​ಲೈನ್​ನಲ್ಲಿ ಫೋಟೋ ವೈರಲ್​ ಆಗುತ್ತಿದೆ. ಅಭಿಮಾನಿಗಳು ಈ ಫೋಟೋ ಬಹಳ ಮುದ್ದಾಗಿದೆ ಎನ್ನುತ್ತಿದ್ದಾರೆ. 'ರಾಕಿ ಔರ್​ ರಾಣಿ ಕಿ ಲವ್ ಸ್ಟೋರಿ'ಗಾಗಿ ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಕೂಡ ಈ ಪೋಸ್ಟ್‌ನ ಕಾಮೆಂಟ್ ಬಾಕ್ಸ್‌ನಲ್ಲಿ ರೆಡ್​ ಹಾರ್ಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕಿಚ್ಚ 46: ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಅಭಿನಯ ಚಕ್ರವರ್ತಿ ಸುದೀಪ್​

ಜಟ್ ಪಂಜಾಬಿ ಮತ್ತು ಬೆಂಗಾಲಿ ಕುಟುಂಬವನ್ನು ಆಧರಿಸಿರುವ ಈ 'ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ, ನಟ ರಣ್​​​ವೀರ್ ಸಿಂಗ್ ಜಟ್ ಪಂಜಾಬಿ ಕುಟುಂಬದವರಾಗಿದ್ದು, ಆಲಿಯಾ ಭಟ್ ಬಂಗಾಳಿ ಹುಡುಗಿ ಪಾತ್ರ ನಿರ್ವಹಿಸಿದ್ದಾರೆ. ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರಂತಹ ಹಿರಿಯ ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 28ರಂದು ಚಿತ್ರಮಂದಿರಗಳಲ್ಲಿ 'ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ' ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.